Advertisement

ACC U19 Asia Cup 2024: ಭಾರತ ವಿರುದ್ಧ ಪಾಕ್‌ಗೆ ಜಯ

09:20 PM Nov 30, 2024 | Team Udayavani |

ದುಬೈ: ಇಲ್ಲಿ ಶನಿವಾರ ನಡೆದ ಅಂಡರ್‌ 19 ತಂಡಗಳ ಐಸಿಸಿ ಏಕದಿನ ಏಷ್ಯಾಕಪ್‌ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡ 43 ರನ್‌ಗಳ ಜಯ ಗಳಿಸಿದೆ. ಈ ಮೂಲಕ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ಸೋತಿದ್ದರೆ, ಪಾಕ್‌ ಶುಭಾರಂಭ ಮಾಡಿದೆ.

Advertisement

ಗ್ರೂಪ್‌ “ಎ’ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಪಾಕಿಸ್ತಾನ, 50 ಓವರ್‌ಗಳಲ್ಲಿ 281 ರನ್‌ ಬಾರಿಸಿತು. ಇದಕ್ಕುತ್ತರವಾಗಿ ಭಾರತ 47.1 ಓವರ್‌ಗಳಲ್ಲಿ 238 ರನ್‌ ಬಾರಿಸಿ ಆಲೌಟ್‌ ಆಯಿತು. ಭಾರತವಿನ್ನು ಡಿ.2ರ ಸೋಮವಾರ ಜಪಾನ್‌ ವಿರುದ್ಧ ಕಣಕ್ಕಿಳಿಯಲಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ಪರ ಆರಂಭಿಕ ಬ್ಯಾಟರ್‌ ಶಹಝೈಬ್‌ ಖಾನ್‌ 147 ಎಸೆತಗಳಲ್ಲಿ 10 ಸಿಕ್ಸರ್‌ ಸಹಿತ 159 ರನ್‌ ಸಿಡಿಸಿದರು. ಮತ್ತೂಬ್ಬ ಓಪನರ್‌ ಉಸ್ಮಾನ್‌ ಖಾನ್‌ 60 ರನ್‌ ಸೇರ್ಪಡೆಯೊಂದಿಗೆ ಪಾಕ್‌ ಸವಾಲಿನ ಮೊತ್ತ ಕಲೆ ಹಾಕಿತ್ತು. ಆದರೆ ಭಾರತ ಪರ ಮಧ್ಯಮ ಕ್ರಮಾಂಕದ ನಿಖೀಲ್‌ ಕುಮಾರ್‌ 67 ರನ್‌ ಬಾರಿಸಿದ್ದು ಬಿಟ್ಟರೆ ಇನ್ಯಾರಿಂದಲೂ ಗಣನೀಯ ರನ್‌ ಬರಲಿಲ್ಲ.

ಸಂಕ್ಷಿಪ್ತ ಸ್ಕೋರ್‌:

ಪಾಕಿಸ್ತಾನ 281/7 (ಉಸ್ಮಾನ್‌ 60, ಶಹಝೈಬ್‌ 159, ಸಮರ್ಥ್ 45ಕ್ಕೆ 3), ಭಾರತ 238/10 (ನಿಖೀಲ್‌ 67, ಇನಾನ್‌ 30, ಅಲಿ 36ಕ್ಕೆ 3).

Advertisement

1 ಕೋಟಿಯ ಸೂರ್ಯವಂಶಿ 1 ರನ್‌: 

ಐಪಿಎಲ್‌ ಹರಾಜಿನ ವೇಳೆ 1.1 ಕೋಟಿ ರೂ.ಗೆ ರಾಜಸ್ಥಾನ್‌ ಪಾಲಾಗಿದ್ದ 13 ವರ್ಷದ ವೈಭವ್‌ ಸೂರ್ಯವಂಶಿ ಈ ಪಂದ್ಯದಲ್ಲಿ ಕೇವಲ 1 ರನ್‌ಗೆ ವಿಕೆಟ್‌ ಒಪ್ಪಿಸಿ ನಿರಾಸೆ ಅನುಭವಿಸಿದರು.

ಶಹಝೈಬ್‌ 159: ಗರಿಷ್ಠ ರನ್‌ ದಾಖಲೆ:

ಪಂದ್ಯದಲ್ಲಿ 159 ರನ್‌ ಸಿಡಿಸಿರುವ ಪಾಕ್‌ನ ಶಹಝೈಬ್‌ ಖಾನ್‌, ಭಾರತ ಅಂಡರ್‌ 19 ತಂಡದ ವಿರುದ್ಧ ವೈಯಕ್ತಿಕ ಅತ್ಯಧಿಕ  ರನ್‌ ಬಾರಿಸಿದ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ಪಾಕ್‌ನವರೇ ಆದ ಸಮಿ ಅಸ್ಲಾಮ್‌ 2012ರಲ್ಲಿ ಭಾರತ ವಿರುದ್ಧ ನಿರ್ಮಿಸಿದ್ದ 134 ರನ್‌ ಸಾಧನೆಯನ್ನು ಹಿಂದಿಕ್ಕಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next