Advertisement

Asia Cup Champion: ಏಷ್ಯಾ ಕಪ್‌ ಹಾಕಿ: ಪ್ರಶಸ್ತಿ ಗೆದ್ದ ಭಾರತ ತಂಡಕ್ಕೆ ಮೋದಿ ಶ್ಲಾಘನೆ

02:06 AM Dec 06, 2024 | Team Udayavani |

ಹೊಸದಿಲ್ಲಿ: ಅದ್ಭುತವಾಗಿ ಆಡಿ ಪುರುಷರ ಜೂನಿಯರ್‌ ಏಷ್ಯಾ ಕಪ್‌ ಹಾಕಿ ಕೂಟದ ಪ್ರಶಸ್ತಿ ಗೆದ್ದ ಭಾರತೀಯ ಜೂನಿಯರ್‌ ಹಾಕಿ ತಂಡವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಹೊಗಳಿದ್ದಾರೆ.

Advertisement

ಇದೊಂದು ಭಾರತೀಯ ಹಾಕಿ ಕ್ರೀಡೆಯ ಐತಿಹಾಸಿಕ ಕ್ಷಣ, ಸಾಟಿಯಿಲ್ಲದ ಕೌಶಲ, ಅಸಾಮಾನ್ಯ ತಂಡ ಪ್ರಯತ್ನ ಮತ್ತು ದೃಢ ನಿಲುವಿನ ಹೋರಾಟದಿಂದ ಈ ಗೆಲುವು ಸಾಧ್ಯವಾಯಿತು ಎಂದು ಮೋದಿ ಅವರು “ಎಕ್ಸ್‌’ನಲ್ಲಿ ಬರೆದಿದ್ದಾರೆ.

ಅರೈಜೀತ್‌ ಸಿಂಗ್‌ ಹುಂಡಲ್‌ ಅವರ ನಾಲ್ಕು ಗೋಲುಗಳ ಸಾಧನೆಯಿಂದ ಹಾಲಿ ಚಾಂಪಿಯನ್‌ ಭಾರತವು ಬದ್ಧ ಎದುರಾಳಿ ಪಾಕಿಸ್ಥಾನವನ್ನು 5-3 ಗೋಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನಲ್ಲಿ ಉಳಿಸಿಕೊಂಡ ಸಾಧನೆ ಮಾಡಿತು. ಭಾರತವು ಈ ಪ್ರಶಸ್ತಿಯನ್ನು ಐದನೆ ಬಾರಿ ಪಡೆದಿದೆ. ಈ ಹಿಂದೆ 2004, 2008, 2015 ಮತ್ತು 2023ರಲ್ಲಿ ಜಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next