Advertisement
ಪಂದ್ಯಾವಳಿ ಡಿ. 7ರಿಂದ 15ರ ತನಕ ನಡೆಯಲಿದೆ. ಭಾರತ “ಎ’ ವಿಭಾಗದಲ್ಲಿದ್ದು, ತನ್ನ ಮೊದಲ ಪಂದ್ಯವನ್ನು ರವಿವಾರ ಬಾಂಗ್ಲಾ ವಿರುದ್ಧ ಆಡಲಿದೆ. ಬಳಿಕ ಚೀನ, ಮಲೇಷ್ಯಾ, ಥಾಯ್ಲೆಂಡ್ ವಿರುದ್ಧ ಸೆಣಸಲಿದೆ. “ಬಿ’ ವಿಭಾಗದಲ್ಲಿ ದ. ಕೊರಿಯಾ, ಜಪಾನ್, ಚೈನೀಸ್ ತೈಪೆ, ಹಾಂಕಾಂಗ್ ಮತ್ತು ಶ್ರೀಲಂಕಾ ತಂಡಗಳಿವೆ. ಇಲ್ಲಿ ಅಗ್ರ 3 ಸ್ಥಾನ ಪಡೆದ ತಂಡ ಗಳು ಎಫ್ಐಎಚ್ ಜೂನಿಯರ್ ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತವೆ.
ಭಾರತ ತಂಡವನ್ನು ಜ್ಯೋತಿ ಸಿಂಗ್ ಮುನ್ನಡೆಸಲಿದ್ದಾರೆ. ಸಾಕ್ಷಿ ರಾಣಾ ಉಪನಾಯಕಿಯಾಗಿದ್ದಾರೆ. ವೈಷ್ಣವಿ ವಿಟ್ಠಲ ಫಾಲ್ಕೆ, ಸುನೇಲಿಯಾ ಟೋಪೊ, ಮಮ್ತಾಜ್ ಖಾನ್, ದೀಪಿಕಾ, ಬ್ಯೂಟಿ ಡುಂಗ್‌ಡುಂಗ್ ಅವರಂಥ ಅನುಭವಿ ಆಟಗಾರ್ತಿಯರು ತಂಡದಲ್ಲಿದ್ದಾರೆ. “ನಾವು ತುಂಬು ವಿಶ್ವಾಸದಲ್ಲಿದ್ದೇವೆ. ಅನುಭವಿಗಳನ್ನು ಹೊಂದಿ ರುವ ತಂಡ ನಮ್ಮದಾಗಿದೆ. ಕಳೆದ ಕೆಲವು ಸಮಯ ದಿಂದ ಕಠಿನ ಅಭ್ಯಾಸ ನಡೆಸುತ್ತಲೇ ಇದ್ದೇವೆ. ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವುದು ನಮ್ಮ ಗುರಿ’ ಎಂದು ನಾಯಕಿ ಜ್ಯೋತಿ ಸಿಂಗ್ ಹೇಳಿದರು.