Advertisement
‘ವೇತನ ಪಾವತಿಸಲು ಸಾಕಷ್ಟು ನಿಧಿ ನಮ್ಮ ಬಳಿ ಇಲ್ಲದಿರುವುದರಿಂದ ನಮ್ಮೆಲ್ಲಾ ಸಿಬ್ಬಂದಿಗಳಿಗೆ ಫೆಬ್ರವರಿ ತಿಂಗಳಿನ ಮೂಲವೇತನದ ಅರ್ಧದಷ್ಟನ್ನು ಮಾತ್ರ ಪಾವತಿಸಲಾಗುವುದು ಮತ್ತು ಸೂಕ್ತ ನಿಧಿ ಸಂಗ್ರಹಗೊಂಡ ಬಳಿಕ ಉಳಿದ ಮೊತ್ತವನ್ನು ಪಾವತಿ ಮಾಡಲಾಗುವುದು’ ಎಂದು ಅವರು ತಿಳಿಸಿದರು.
ಅಣು ಶಕ್ತಿ ಸಚಿವಾಲಯದಡಿಯಲ್ಲಿ ಬರುವ ಟಿ.ಐ.ಎಫ್.ಆರ್. ಭಾರತ ಸರಕಾರದ ಅಧೀನಕ್ಕೊಳಪಡುವ ಸಂಸ್ಥೆಯಾಗಿದೆ ಮತ್ತು ಡಾಕ್ಟರೇಟ್ ಪದವಿಗಳನ್ನು ಪ್ರಧಾನಿಸುವ ಸ್ವಾಯತ್ತ ವಿಶ್ವವಿದ್ಯಾನಿಲಯವಾಗಿದೆ. ಡಾ. ಹೋಮಿ ಬಾಬಾ ಅವರ ದೂರದರ್ಶಿತ್ವದಲ್ಲಿ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಬೆಂಬಲದೊಂದಿಗೆ 1945ರಲ್ಲಿ ಟಿ.ಐ.ಎಫ್.ಆರ್. ಸಂಸ್ಥೆಯು ಸ್ಥಾಪಿಸಲ್ಪಟ್ಟಿತು. ಈ ಸಂಸ್ಥೆಯು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಮತ್ತು ವಿಜ್ಞಾನ ಶಿಕ್ಷಣ ವಿಷಯಗಳಲ್ಲಿ ಸಂಶೋಧನಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಈ ಸಂಸ್ಥೆಯ ಪ್ರಧಾನ ಕ್ಯಾಂಪಸ್ ಮುಂಬಯಿಯಲ್ಲಿದೆ ಮತ್ತು ಪುಣೆ, ಬೆಂಗಳೂರು ಹಾಗೂ ಹೈದ್ರಾಬಾದ್ ಗಳಲ್ಲಿಯೂ ಈ ಸಂಸ್ಥೆಯು ತನ್ನ ಕೇಂದ್ರಗಳನ್ನು ಹೊಂದಿದೆ.