Advertisement
ಸನ್ 2011ರ ಜನಗಣತಿ ಪ್ರಕಾರ 5990 ಪುರುಷರು, 6075 ಮಹಿಳೆಯರು ಸೇರಿ ಒಟ್ಟು 12065 ಜನಸಂಖ್ಯೆ ಹೊಂದಿದೆ. ಭೌಗೋಳಿಕ ಕ್ಷೇತ್ರ 6767.12 ಎಕರೆ ಫಲವತ್ತಾದ ಕೆಂಪು ಮತ್ತು ಕಪ್ಪು ಕೃಷಿ ಭೂಮಿ ಇದ್ದು ಕಬ್ಬು, ಹತ್ತಿ, ಅರಿಷಿಣ, ಸೋಯಾಬಿನ್‌ದಂತಹ ವಾಣಿಜ್ಯ ಬೆಳೆಗಳಲ್ಲದೆ ಗೋವಿನಜೋಳ, ಗೋಧಿ, ಸದಕ, ಕಡಲೆ, ಶೇಂಗಾ ಬೆಳೆಯಲಾಗುತ್ತದೆ. ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ.
ಕ್ಯಾಪ್ಟನ್ ಮೂರ್ ಎಂಬ ಬ್ರಿಟಿಷ್ ಅಧಿಕಾರಿ ಆರ್ ಬೇಂಗ್ ಎಂದು ಕರೆದಿದ್ದಾನೆ. ಅರಭಾಂವಿಯ ಪಶ್ಚಿಮ ಭಾಗದಲ್ಲಿರುವ ಗುಡ್ಡದಲ್ಲಿ ಕೆಂಪು ಮತ್ತು ಬಿಳಿ ಮಿಶ್ರಿತ ಗಟ್ಟಿ ಮತ್ತು ಮೃದು ಕಲ್ಲಿನ ಕಣಿವೆಗಳಿದ್ದು ಈ ಭಾಗದಲ್ಲಿ ಮನೆ ಕಟ್ಟಲು ಇಲ್ಲಿಯ ಉತ್ಕೃಷ್ಟ ಕಲ್ಲುಗಳನ್ನು ಬಳಸುತ್ತಾರೆ. ಅರಭಾಂವಿ ಪರಿಸರದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದವು. ಈಗ ಅವು ನಶಿಸಿ ಹೋಗಿದ್ದು ಅಲ್ಲಲ್ಲಿ ವಿರಳವಾಗಿ ಕಾಣ ಸಿಗುತ್ತಿವೆ. ಇಲ್ಲಿಂದ 7 ಕಿ.ಮೀ ಅಂತರದಲ್ಲಿ ಘಟಪ್ರಭಾ ರೈಲು ನಿಲ್ದಾಣ ಇದ್ದು ರೈಲು ಸಾರಿಗೆ ಅನುಕೂಲವಿದೆ. ಅಂತೆಯೇ ಈ ಪ್ರದೇಶದಲ್ಲಿ ಗರಿಷ್ಟ ಪ್ರಮಾಣದಲ್ಲಿ ಬೆಳೆಯುವ ತರಕಾರಿಗಳನ್ನು ಮುಂಬೈ, ಪುಣೆ, ಸಾಂಗ್ಲಿ, ಮೀರಜ, ಕೊಲ್ಲಾಪೂರ, ಬೆಳಗಾವಿ, ಬೆಂಗಳೂರ ನಗರಗಳಿಗೆ ಕಳಿಸುತ್ತಾರೆ. ಅಲ್ಲದೆ ಇತ್ತೀಚೆಗೆ ನರ್ಸರಿಗಳು ಹುಟ್ಟಿಕೊಂಡಿದ್ದು ವಿವಿಧ ಜಾತಿಯ ಸಸಿಗಳನ್ನು ತಯಾರಿಸಿ ರವಾನಿಸುತ್ತಿದ್ದಾರೆ.
Related Articles
ಶಿಲೆಗಳಿಂದ ನಿರ್ಮಿತವಾದ ಭವ್ಯವಾದ ದುರದುಂಡೇಶ್ವರ ಪುರಾತನ ಮಠವಿದ್ದು ಆಕರ್ಷಣೀಯ ಪವಿತ್ರ ತಾಣವಾಗಿದೆ. ಈ ಮಠವು ಹಿಮಾಲಯದಲ್ಲಿ ತಪಸ್ಸನ್ನಾಚರಿಸಿ ಡಪಳಾಪೂರ ಪುಣ್ಯಾಶ್ರಮದ ಶ್ರೀ ಗುರುಲಿಂಗೇಶ್ವರರಿಂದ ಕೃಪಾಶೀರ್ವಾದ ಪಡೆದು ಮಹಾಲಿಂಗೇಶ್ವರ ರೊಡಗೂಡಿ ಅನೇಕ ಪವಾಡಗಳನ್ನು, ಲೀಲೆಗಳನ್ನು ಮಾಡುತ್ತ ಲೋಕಕಲ್ಯಾಣ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಶ್ರೀ ದುರದುಂಡೇಶ್ವರರ ಜಾಗೃತ ತಪೋಭೂಮಿಯಾಗಿದೆ.
Advertisement
ಮರಾಠಾ ಪೇಶ್ವೆಗಳ ಬಂಧಿಯಾಗಿ ಕಾರಾಗೃಹವಾಸದಲ್ಲಿದ್ದ ಕಿತ್ತೂರಿನ ದೊರೆ ಮಲ್ಲಸರ್ಜ ದೇಸಾಯಿ ತನ್ನ ಅಂತ್ಯಕಾಲದಲ್ಲಿಅನಾರೋಗ್ಯದಿಂದ ಬಳಲುತ್ತಿದ್ದ ಆತ ತನ್ನ ಕೊನೆಯ ಕ್ಷಣಗಳನ್ನು ದುರದುಂಡೇಶ್ವರ ಮಠದಲ್ಲಿ ಕಳೆಯಬೇಕೆಂಬ ಅಪೇಕ್ಷೆ ಮೇರೆಗೆ ಇಲ್ಲಿಗೆ ಕರೆತರಲಾಯಿತು. ಇಲ್ಲಿಗೆ ಬಂದ ಮಲ್ಲಸರ್ಜನು ಶ್ರೀ ದುರದುಂಡೇಶ್ವರ ದರ್ಶನಾಶೀವಾದ ಪಡೆದು ಪಾದೋದಕ,
ಅಂಬಲಿ ಸ್ವೀಕರಿಸಿ ಇಲ್ಲಿಯೇ ಪ್ರಾಣ ಬಿಟ್ಟನೆಂದು ದಾಖಲೆಗಳಿವೆ. ಅಂತೆಯೇ ಇಂದಿಗೂ ಮಠದ ಹಿಂಭಾಗದ ಕಟ್ಟೆ ಮೇಲೆ ಮಲ್ಲಸರ್ಜನ ಸ್ಮಾರಕ ಇದೆ. ಇಲ್ಲಿ ಅರಭಾಂವೆಪ್ಪ ಎಂದೇ ಪ್ರಸಿದ್ಧವಾದ ಆಂಜನೆಯನ ಪುರಾತನ ಮಂದಿರವಿದೆ. ಇದರ ಕಾಲ ಖಚಿತವಾಗಿ ತಿಳಿದು ಬಂದಿಲ್ಲ. ಈ ಮಂದಿರದ ಪ್ರವೇಶ ದ್ವಾರದ ಎಡಬದಿ(ಹೊರಗಿನ) ಗೋಡೆಯಲ್ಲಿ ಒಂದು ಶಾಸನ ಇತ್ತೆಂಬ ಕುರುಹು ಸಿಗುತ್ತದೆ. ಅರಭಾಂವಿ ಪರಿಸರದಲ್ಲಿ ಕೃಷಿ ವಿಜ್ಞಾನ ಕೇಂದ್ರ, ರೈತ ಸಲಹಾ ಕೇಂದ್ರ, ತೋಟಗಾರಿಕಾ ಮಹಾವಿದ್ಯಾಲಯ ಇದ್ದು ಕಾರ್ಯ ನಿರ್ವಹಿಸುತ್ತಿವೆ.