Advertisement

ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್‌ ಇವಿ ಸೇರ್ಪಡೆ

12:19 AM Nov 23, 2024 | |

ಬೆಂಗಳೂರು: ಇಂಟಿಗ್ರೇಟೆಡ್‌ ಎಲೆಕ್ಟ್ರಿಕ್‌ ಮೊಬಿಲಿಟಿ ಸೊಲ್ಯೂಶನ್ಸ್‌ ಪ್ರೊವೈಡರ್‌ ಆಗಿರುವ ಮೆಜೆಂಟಾ ಮೊಬಿಲಿಟಿ ಸಂಸ್ಥೆಯು ಟಾಟಾ ಏಸ್‌ ಇವಿಯನ್ನು ತಮ್ಮ ವಾಹನ ಬಳಗಕ್ಕೆ ಸೇರ್ಪಡೆಗೊಳಿಸಿದೆ. ಆ ಮೂಲಕ ಮೆಜೆಂಟಾ ಮೊಬಿಲಿಟಿಯು ಸಾಗಾಣಿಕಾ ಕ್ಷೇತ್ರದ ಕಾರ್ಯಾಚರಣೆಯ ದಕ್ಷತೆ ಮತ್ತು ಸುಸ್ಥಿರತೆಯಲ್ಲಿ ಯಶಸ್ಸು ಸಾಧಿಸಿದೆ.

Advertisement

ಟಾಟಾ ಮೋಟಾರ್ಸ್‌ನ ಅತ್ಯಂತ ಜನಪ್ರಿಯ, ಹೆಚ್ಚು ಗಳಿಕೆ ಸಾಮರ್ಥ್ಯ, ಕಡಿಮೆ ಮಾಲಕತ್ವ ವೆಚ್ಚ, ಅತ್ಯಾಧುನಿಕತೆ, ಝೀರೋ ಎಮಿಷನ್‌, ಫೋರ್‌ ವೀಲ್‌ ಸಣ್ಣ ವಾಣಿಜ್ಯ ವಾಹನವಾಗಿರುವ ಟಾಟಾ ಏಸ್‌ ಇವಿ ಈ ಬದಲಾವಣೆಗೆ ಕಾರಣವಾಗಿದೆ. ಟಾಟಾ ಏಸ್‌ ಇವಿ ಹೆಚ್ಚಿನ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುತ್ತಲೇ ತನ್ನ ಕಾರ್ಯಾಚರಣೆಗಳಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಿ, ಮೆಜೆಂಟಾ ಮೊಬಿಲಿಟಿ ಸಂಸ್ಥೆಗೆ ಬಲ ತುಂಬಿದೆ. ಇದು ಎಲ್ಲ ರೀತಿಯ ಮಾರ್ಗಗಳಲ್ಲಿ, ಕಡಿಮೆ ಸಮಯ ಹಾಗೂ ವೆಚ್ಚದಲ್ಲಿ ಕೊನೆಯ ಹಂತದ ಸಾಗಾಣಿಕಾ ವಲಯದ ಬೇಡಿಕೆಗಳನ್ನು ಸೂಕ್ತವಾಗಿ ನಿರ್ವಹಿಸಲು ಪೂರಕವಾಗಿದೆ.

ಮೆಜೆಂಟಾ ಮೊಬಿಲಿಟಿಯ ಸಂಸ್ಥಾಪಕ ಸಿಇಒ ಮ್ಯಾಕ್ಸನ್‌ ಲೆವಿಸ್‌ ಮಾತನಾಡಿ, ಬಹಳ ಹಿಂದಿನಿಂದಲೇ ಸಾಮಗ್ರಿ ಸಾಗಾಣಿಕಾ ಕ್ಷೇತ್ರದಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ಬಳಸುತ್ತಿದ್ದ ನಾವು ಈ ಮಾರುಕಟ್ಟೆಯಲ್ಲಿ ಬದಲಾವಣೆ ತರಲು ಸರಿಯಾದ ವಾಹನಕ್ಕಾಗಿ ಕಾಯುತ್ತಿದ್ದೆವು. ಈಗ ಬಂದ ಟಾಟಾ ಏಸ್‌ ಇವಿ ನಮ್ಮ ಅಗತ್ಯಕ್ಕೆ ಸಂಪೂರ್ಣವಾಗಿ ಸರಿಹೊಂದುತ್ತದೆ. ಹೆಚ್ಚು ಪೇಲೋಡ್‌ ಸಾಮರ್ಥ್ಯವನ್ನು ಹೊಂದಿದ್ದು, 4 ಚಕ್ರದ ಎಲೆಕ್ಟ್ರಿಕ್‌ ವಾಹನಕ್ಕೆ ಅವಶ್ಯವಾಗಿ ಬೇಕಾಗಿದ್ದ ಹೆಚ್ಚಿನ ರೇಂಜ್‌ಅನ್ನು ಒದಗಿಸುತ್ತದೆ. ಆ ಮೂಲಕ ವಾಹನದ ಕಾರ್ಯಾಚರಣೆಯನ್ನು ಹೆಚ್ಚಿಸಿ, ಲಾಭದಾಯಕವಾಗಿದೆ. ಇದರಿಂದ ಉತ್ತಮ ವ್ಯಾಪಾರ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

200ಕ್ಕೂ ಹೆಚ್ಚು ಮೀಸಲಾದ ಎಲೆಕ್ಟ್ರಿಕ್‌ ವಾಹನ ಸರ್ವಿಸ್‌ ಸೆಂಟರ್‌ಗಳನ್ನು ಹೊಂದಿದ್ದು, ಅತ್ಯಾಧುನಿಕ ಬ್ಯಾಟರಿ ನಿರ್ವಹಣೆ ಮತ್ತು “ಫ್ಲೀಟ್‌ ಎಡ್ಜ್’ ಟೆಲಿಮ್ಯಾಟಿಕ್ಸ್‌ ಹೊಂದಿದೆ. ಟಾಟಾ ಏಸ್‌ ಇವಿಗಳು ಶೇ.99ರಷ್ಟು ಅಪ್‌ ಟೈಮ್‌ನೊಂದಿಗೆ 5 ಕೋಟಿ ಕಿಮೀಗಿಂತ ಹೆಚ್ಚು ದೂರ ವನ್ನು ಕ್ರಮಿಸಿ ಸಾಧನೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next