Advertisement

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

09:50 AM Nov 26, 2024 | Team Udayavani |

ಉತ್ತರಪ್ರದೇಶ: ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿದ ಗೂಳಿಯೊಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿ ಕೊಂಬಿನಿಂದ ಜನರನ್ನು ಎತ್ತಿ ಬಿಸಾಕಿ ಹದಿನೈದಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಜಲಾಲಾಬಾದ್ ನಲ್ಲಿ ನಡೆದಿದ್ದು, ಗೂಳಿಯ ದಾಳಿಗೆ ಜನ ಭಯಭೀತರಾಗಿದ್ದಾರೆ.

Advertisement

ಜಲಾಲಾಬಾದ್ ಪಟ್ಟಣದ ಪ್ರಮುಖ ರಸ್ತೆಗೆ ಬಂದ ಗೂಳಿಯೊಂದು ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದ್ದು ಸೊಂಟ, ಕಣ್ಣು, ಕೈ, ಕಾಲುಗಳಿಗೆ ಗಾಯಮಾಡಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೂಳಿ ದಾಳಿ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಅಲ್ಲದೆ ವೈರಲ್ ಆಗಿರುವ ವಿಡಿಯೋದಲ್ಲಿ ಗೂಳಿ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿದೆ ಆತ ಇನ್ನೇನು ಎದ್ದೇಳಬೇಕು ಎನ್ನುವಷ್ಟರಲ್ಲಿ ಮತ್ತೆ ತನ್ನ ಕೊಂಬಿನಿಂದ ಎತ್ತಿ ಬಿಸಾಡಿದೆ ಇದರಿಂದ ವ್ಯಕ್ತಿ ಕೆಲ ದೂರ ಎಸೆಯಲ್ಪಟ್ಟು ಕಣ್ಣು, ಸೊಂಟಕ್ಕೆ ಗಾಯಗಳಾಗಿವೆ.

ಇದಾದ ಬಳಿಕ ಮತ್ತೆ ರಸ್ತೆಯಲ್ಲಿ ತನ್ನ ಓಟ ಮುಂದುವರೆಸಿ ಹದಿನೈದು ಜನರ ಮೇಲೆ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ ಇದರಿಂದ ಭೀತರಾದ ಜಲಾಲಾಬಾದ್ ಮುನ್ಸಿಪಲ್ ಕೌನ್ಸಿಲ್ ಗೆ ಕರೆ ಮಾಡಿ ಗೂಳಿಯನ್ನು ಸೆರೆಹಿಡಿಯುವಂತೆ ಮನವಿ ಮಾಡಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸಿಬಂದಿಗಳು ಗೂಳಿಯನ್ನು ಸೆರೆಹಿಡಿಯಲು ಮುಂದಾಗಿದ್ದಾರೆ ಆದರೆ ಅವರ ಕೈಗೆ ಸಿಗದ ಗೂಳಿ ನಗರ ತುಂಬೆಲ್ಲಾ ಓಡಾಡಿ ಸುಮಾರು ಮೂರೂ ಗಂಟೆಗಳ ಕಾಲ ಸಿಬಂದಿಗಳನ್ನು ಸತಾಯಿಸಿ ಕೊನೆಗೆ ಸೆರೆಯಾಗಿದೆ. ಇದರಿಂದ ಅಲ್ಲಿಯ ಜನ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

 

Advertisement

ಈ ಗುಳಿ ಎಷ್ಟರ ಮಟ್ಟಿಗೆ ಜನರಿಗೆ ಭಯ ಹುಟ್ಟಿಸಿದೆ ಎಂದರೆ ಅಲ್ಲಿನ ಜನ ಮನೆ ಅಂಗಡಿಗಳಿಂದ ಹೊರ ಬರಲೂ ಹೆದರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೂ ಗೂಳಿ ಸೆರೆಯಿಂದ ಜನ ನಿರಾಳರಾಗಿದ್ದಾರೆ.

ಇದನ್ನೂ ಓದಿ: Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next