ಬೆಂಗಳೂರು: ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ಯುವಕ ಮದುವೆಯಾ ಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ವಂಚಿಸಿದ ಸಂಬಂಧ ಸಂತ್ರಸ್ತೆ ಮಡಿವಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಡಿವಾಳ ನಿವಾಸಿ ಆರೋಪಿ ನಿಹಾಲ್ ಹುಸೇನ್ ವಿರುದ್ಧ 24 ವರ್ಷದ ಸಂತ್ರಸ್ತೆ ದೂರು ನೀಡಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಸಂತ್ರಸ್ತೆ ನೀಡಿದ ದೂರಿನಲ್ಲಿ ಕಳೆದ ಮಾರ್ಚ್ನಲ್ಲಿ ಡೇಟಿಂಗ್ ಆ್ಯಪ್ನಲ್ಲಿ ನಿಹಾಲ್ ಹುಸೇನ್ ಪರಿಚಯವಾಗಿದ್ದು, ಕೆಲ ದಿನಗಳ ಬಳಿಕ ಇಬ್ಬರು ಮೊಬೈಲ್ ನಂಬರ್ ಬದಲಾಯಿಸಿಕೊಂಡು ಚಾಟಿಂಗ್ ಆರಂಭಿಸಿದ್ದಾರೆ. ನಂತರ ಇಬ್ಬರ ನಡುವೆ ಆತ್ಮೀಯತೆ ಬೆಳೆದು ಪರಸ್ಪರ ಪ್ರೀತಿಸುತ್ತಿದ್ದರು. ಈ ಮಧ್ಯೆ ಕೆಲ ದಿನಗಳ ಹಿಂದೆ ಪಾರ್ಟಿ ನೆಪದಲ್ಲಿ ಯುವತಿಯನ್ನು ಹೋಟೆಲ್ವೊಂದಕ್ಕೆ ಕರೆದೊಯ್ದ ಆರೋಪಿ, ಜ್ಯೂಸ್ನಲ್ಲಿ ಮದ್ಯ ಬೆರೆಸಿ, ಆಕೆಗೆ ಕುಡಿಸಿದ್ದಾನೆ. ಆಕೆ ಅರೆಪ್ರಜ್ಞಾ ಸ್ಥಿತಿಯಲ್ಲಿ ದ್ದಾಗ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಅಲ್ಲದೆ, ಇದೀಗ ನಾನು ಗರ್ಭಿಣಿಯಾಗಿ ದ್ದು, ಮದುವೆಯಾಗುವಂತೆ ಆತನಿಗೆ ಕೇಳಿಕೊಂಡೆ. ಆದರೆ, ಆತ ಈಗಲೇ ಮಗು ಬೇಡ. ಖಂಡಿತ ಮದುವೆ ಆಗುತ್ತೇನೆ ಎಂದು ನಂಬಿಸಿ ನನಗೆ ಗರ್ಭಪಾತ ಮಾಡಿ ಸಿದ್ದಾನೆ. ಹೀಗಾಗಿ ನಿಹಾಲ್ ಹುಸೇನ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸಂತ್ರಸ್ತೆ ದೂರು ನೀಡಿದ್ದಾರೆ. ನಿಹಾಲ್ ಹುಸೇನ್ ಹಾಗೂ ಸಂತ್ರಸ್ತೆ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.