Advertisement

ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ ಧೂಳೀಪಟ

06:05 AM May 10, 2018 | Team Udayavani |

ಬೆಂಗಳೂರು, ಕುಣಿಗಲ್‌, ತುಮಕೂರು ಹೊರವಲಯದ ಹೆಬ್ಬೂರಿನಲ್ಲಿ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, “ರಾಹುಲ್‌ ಗಾಂಧಿ ನೇತೃತ್ವ ವಹಿಸಿದ್ದ 14 ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲೂ ಕಾಂಗ್ರೆಸ್‌ ಧೂಳಿಪಟವಾಗಿದೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತ’ ಎಂದರು.

Advertisement

“ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋಲುವುದು ಖಚಿತ. ಸೋಲಿಗೆ ಹೆದರಿ ಬಾದಾಮಿಗೆ ಓಡಿ ಹೋಗಿದ್ದಾರೆ. ಅಲ್ಲಿಯೂ ನಮ್ಮ ಶ್ರೀರಾಮಲು ಅವರನ್ನು ಸೋಲಿಸಲಿದ್ದಾರೆ. ಹಣ ಹಂಚಿ, ಚುನಾವಣೆ ಗೆಲ್ಲಲು ಸಿದ್ದರಾಮಯ್ಯ ವಾಮಮಾರ್ಗ ಅನುಸರಿಸುತ್ತಿದ್ದು, ಅದು ಎಂದಿಗೂ ಸಾಧ್ಯವಾಗುವುದಿಲ್ಲ. ಬೆಂಗಳೂರಿನ ಮನೆಯೊಂದರಲ್ಲಿ ಪತ್ತೆಯಾಗಿರುವ 10 ಸಾವಿರಕ್ಕೂ ಹೆಚ್ಚು ನಕಲಿ ಮತದಾರರ ಗುರುತಿನ ಚೀಟಿ ಅಕ್ರಮಗಳಿಗೆ ಸಾಕ್ಷಿ ‘ಎಂದರು.

Advertisement

Udayavani is now on Telegram. Click here to join our channel and stay updated with the latest news.

Next