ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳ ಹಿಂದೆ ವೋ ಕಾರ್ಡ್ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ಡಿ. 14ರಂದು ಅವರು ತಮ್ಮ 90ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು ಎಂದು ಅವರ ಪುತ್ರಿ ಪಿಯಾ ಬೆನೆಗಲ್ ಅವರು ಹೇಳಿದ್ದಾರೆ.
Advertisement
1934ರಲ್ಲಿ ಅಂದಿನ ಹೈದರಾಬಾದ್ ಪ್ರಾಂತ್ಯದ ತಿರುಮಲಗಿರಿಯಲ್ಲಿ ಅವರು ಜನಿಸಿದ್ದರು. ಕಾಪಿರೈಟರ್ ಆಗಿ ವೃತ್ತಿಜೀವನ ಆರಂಭಿಸಿದ ಅವರು, ಗುಜರಾತಿಯಲ್ಲಿ ಮೊದಲ ಸಾಕ್ಷ್ಯಚಿತ್ರ “ಘೇರ್ ಬೇತಾ ಗಂಗಾ’ವನ್ನು 1962ರಲ್ಲಿ ನಿರ್ಮಿಸಿದರು. ಅಲ್ಲದೆ 1980ರಿಂದ 1986ರವರೆಗೆ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಮಂಡಿ ಸಿನಿಮಾ ರಾಜಕೀಯ ಮತ್ತು ವೇಶ್ಯಾವಾಟಿಕೆ ವಿಷಯಗಳಿಗೆ ಸಂಬಂಧಿಸಿದ ಕಥಾಹಂದರವನ್ನು ಒಳಗೊಂಡಿದೆ.
Related Articles
Advertisement
ಉಡುಪಿಯ ಬೆನಗಲ್ ಮೂಲದ ಶ್ಯಾಮ್
ಉಡುಪಿ/ಬ್ರಹ್ಮಾವರ: ಶ್ಯಾಮ್ ಬೆನಗಲ್ ಅವರ ತಂದೆ ಶ್ರೀಧರ ಬಿ. ಬೆನಗಲ್ ಅವರು ಬ್ರಹ್ಮಾವರ ಕೊಕ್ಕರ್ಣೆ ಸಮೀಪದ ಬೆನಗಲ್ನವರು. ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಇವರ ಮೂಲ ನಾಗಬನ ಬೆನಗಲ್ನಲ್ಲಿದೆ. ಇಂದಿಗೂ ಶ್ಯಾಮ್ ಬೆನಗಲ್ ಕುಟುಂಬಸ್ಥರು ಮೂಲಸ್ಥಾನಕ್ಕೆ ಆಗಮಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಹತ್ತಾರು ವರ್ಷಗಳ ಹಿಂದೆ ಶ್ಯಾಮ್ ಬೆನಗಲ್ ಇಲ್ಲಿಗೆ ಆಗಮಿಸಿದ್ದರು ಎಂದು ಸ್ಥಳೀಯರು ನೆನಪಿಸುತ್ತಾರೆ.
ಹಲವು ವರ್ಷಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡಾಗ ಪ್ರಶ್ನಾಚಿಂತನೆಯಂತೆ ಬೆನಗಲ್ ಅವರು ಕುಟುಂಬದವರ ಜತೆ ತಮ್ಮ ಮೂಲ ನಾಗಬನಕ್ಕೆ ಆಗಮಿಸಿ ಆಶ್ಲೇಷಾ ಸೇವೆ ಸಲ್ಲಿಸಿದ್ದರು. ಅನಂತರದಿಂದ ಪ್ರತೀ ವರ್ಷ ಕುಟುಂಬದವರಿಂದ ಸೇವೆ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಿರೀಶ್ ಕಾರ್ನಾಡ್ ಅವರು ನಿರ್ದೇಶನದ ಹಿಂದಿ ಚಿತ್ರವೊಂದರ ಚಿತ್ರೀಕರಣ ಉಡುಪಿ/ ಕುಂದಾಪುರದಲ್ಲಿ ನಡೆದಿತ್ತು. ಆ ವೇಳೆ ಶ್ಯಾಮ್ ಬೆನಗಲ್ ಅವರು ಉಡುಪಿಗೆ ಬಂದಿದ್ದರು. 1984ರ ಉತ್ಸವ್ ಸಿನೆಮಾದ ಚಿತ್ರೀಕರಣದ ಸಂದರ್ಭ ಬಂದಿದ್ದಾರೆ ಎನ್ನಲಾಗಿದೆಯಾದರೂ ಈ ಬಗ್ಗೆ ಯಾರಲ್ಲೂ ಖಚಿತವಾದ ಮಾಹಿತಿ ಇಲ್ಲ. ಅನಂತ್ ನಾಗ್ ಜೊತೆ ಹಿಂದಿ ಸಿನೆಮಾ
ಕನ್ನಡದ ಹಿರಿಯ ನಟ ಅನಂತ್ನಾಗ್ ಅಭಿನಯದಲ್ಲಿ ಹಲವು ಚಿತ್ರಗಳ ನಿರ್ದೇಶನ ಮಾಡುವ ಮೂಲಕ ಅನಂತ್ನಾಗ್ ಅವರನ್ನು ಹಿಂದಿಯಲ್ಲಿ ಪರಿಚಯಿಸಿದ ಖ್ಯಾತಿ ಕೂಡಾ ಬೆನಗಲ್ ಅವರದ್ದು. ಅಂಕುರ್, ನಿಶಾಂತ್, ಮಂಥನ್, ಭೂಮಿಕಾ, ಕೊಂಡೂರಾ, ಕಲಿಯುಗ್ ಮುಂತಾದ ಶ್ಯಾಮ್ ಬೆನೆಗಲ್ ನಿರ್ದೇಶನದ ಚಿತ್ರಗಳಲ್ಲಿ ಅನಂತ್ ನಾಗ್ ಅಭಿನಯಿಸಿದ್ದಾರೆ. ಅನಂತ್ನಾಗ್ ಅವರ ಮೊದಲ ಹಿಂದಿ ಚಿತ್ರ ಅಂದಿನ ಕಾಲಕ್ಕೆ ಸಾಕಷ್ಟು ಬೋಲ್ಡ್ ದೃಶ್ಯಗಳನ್ನು ಹೊಂದಿ, ಆ ಕಾಲಕ್ಕೆ “ಮುಂದುವರಿದ ಚಿತ್ರ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಚಿತ್ರ 3 ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದೆ. ಅನಂತ್ ನಾಗ್ ಹಾಗೂ ಬೆನಗಲ್ ಜೋಡಿಯ ಕೊನೆಯ ಚಿತ್ರ “ಕಲಿಯುಗ್’. ಈ ಸಿನೆಮಾ ಮಹಾಭಾರತದ ಆಧುನಿಕ ರೂಪವಾಗಿತ್ತು. ಹಾಲಿನ ಕ್ರಾಂತಿ ಕುರಿತಾದ ಮಂಥನ ಚಿತ್ರ ಮೊದಲು ಸಾಕ್ಷ್ಯ ಚಿತ್ರವಾಗಿತ್ತು. ಗುಜರಾತ್ ಹಾಲು ಉತ್ಪಾದಕರ ಸಂಘದ 5 ಲಕ್ಷ ಮಂದಿ ಸದಸ್ಯರು 2 ರೂಪಾಯಿಯಂತೆ ಹಾಕುವ ಮೂಲಕ ನಿರ್ಮಾಣಕ್ಕೆ ಸಾಥ್ ನೀಡಿದರು. ಶ್ಯಾಮ್ ಬೆನಗಲ್ ಅವರ ನಿಧನದಿಂದಾಗಿ, ಒಬ್ಬ ಸೃಜನಶೀಲ ಕಲಾವಿದರ ಅಂತ್ಯವಾಗಿದೆ. ನಾನು ಅವರ ಸ್ಮತಿಗೆ ಗೌರವ ಸಲ್ಲಿಸುತ್ತೇನೆ ಮತ್ತು ಅವರ ಕುಟುಂಬ ಮತ್ತು ಪ್ರಿಯಜನರಿಗೆ ನನ್ನ ಹೃತೂ³ರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅಗಲಿದ ಆತ್ಮಕ್ಕೆ ದೇವರು ಮೋಕ್ಷ ನೀಡಲಿ ಎಂದು ಪ್ರಾರ್ಥನೆ.
ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ಸರಕಾರ್ಯವಾಹ