Advertisement
ಭೂಮಿ ಪೂಜೆಗೆ ಮೊದಲು ಅಯೋಧ್ಯೆಯಲ್ಲಿ ದೀಪಾವಳಿಯ ವಾತಾವರಣ ಮನೆಮಾಡಿದೆ.
Related Articles
Advertisement
3 ದಶಕಗಳಿಂದ ಕಲ್ಲು ಕೆತ್ತನೆವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಗಾರವು ಅಯೋಧ್ಯೆಯ ಕರಸೇವಕಪುರಂನಿಂದ ಆಣತಿ ದೂರದಲ್ಲಿದೆ. 30 ವರ್ಷಗಳಿಂದ ರಾಮ ದೇವಾಲಯದ ಕಲ್ಲಿನ ಕೆಲಸ ನಡೆಯುತ್ತಿದ್ದ ಸ್ಥಳ ಇದಾಗಿದೆ. ಇನ್ನೂ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ನಿರ್ಧಾರವಾಗುವ ಮೊದಲೇ ನೂರಾರು ಜನರು ಪ್ರತಿದಿನ ಈ ಕಾರ್ಯಾಗಾರಕ್ಕೆ ಕಲ್ಲುಗಳನ್ನು ಕೆತ್ತುತ್ತಿದ್ದರು. ಅವರ ಎಲ್ಲರ ಶ್ರಮವಾಗಿ 3-4 ವರ್ಷದಲ್ಲಿ ಅಯೋಧ್ಯೆಯಲ್ಲಿ ಭವ್ಯ ಮಂದಿರ ಎದ್ದು ನಿಲ್ಲಲಿದೆ. ಕೆತ್ತನೆ ಕಾರ್ಯದಲ್ಲಿ ತೊಡಗಿದ ಎರಡು ಕೈಗಳ ಪರಿಚಯ ಇಲ್ಲಿದೆ. 80 ವರ್ಷ ವಯಸ್ಸಿನ ಆನು ಸೊಂಪೂರ ಎಂಬವರು ಅವರಲ್ಲಿ ಒಬ್ಬರು. ಅವರು 50 ವರ್ಷದವರಾಗಿದ್ದಾಗ ಅಯೋಧ್ಯೆಗೆ ಬಂದವರು. ಇಲ್ಲಿಗೆ ಬೆಉವ ಮೊದಲು ಅಹಮದಾಬಾದ್‌ನಲ್ಲಿ ದೇವಾಲಯವನ್ನು ನಿರ್ಮಿಸುತ್ತಿದ್ದರು. 1990ರ ಸೆಪ್ಟೆಂಬರ್‌ನಲ್ಲಿ ರಾಮ ಮಂದಿರದ ಶಿಲೆಗಳ ಕೆತ್ತನೆ ಕಾರ್ಯವನ್ನು ಮಾಡುತ್ತಿದ್ದಾರೆ. ಮಿರ್ಜಾಪುರ ಮೂಲದ ಜಂಗೂರ್ ಎಂಬವರೂ ಕೆಲಸ ಮಾಡುತ್ತಾರೆ. ಅವರಿಗೆ 50 ವರ್ಷ. ಅವರು 2001ರಿಂದ ಇಲ್ಲಿ ಕಲ್ಲು ಕೆತ್ತನೆ ಕೆಲಸ ಮಾಡುತ್ತಿದ್ದಾರೆ. ವಿಶೇಷ ಎಂದರೆ ಅವರ ಮಗನೂ ಇಲ್ಲಿ ಕಲ್ಲಿನ ಕೆತ್ತನೆಯಲ್ಲಿ ನಿರತನಾಗಿದ್ದಾನೆ. 5 ತಲೆಮಾರಿನ ಸೇವೆ ಇದು
ರಾಮ ಮಂದಿರದ ಹೋರಾಟಗಾರ ಜತೆ ಒಂದು ಕುಟುಂಬ ತನ್ನನ್ನು ಮಂದಿರಕ್ಕಾಗಿ ಅರ್ಪಿಸಿದೆ. ಮುನ್ನಾ ಮಾಲಿ ಎಂಬವರು ಅಯೋಧ್ಯೆಯಲ್ಲಿ ಪುಟ್ಟ ಅಂಗಡಿಯೊಂದನ್ನು ನಡೆಸುತ್ತಾರೆ. ಇದು ರಾಮ್ ಜನ್ಮಭೂಮಿಯ ಪಕ್ಕದಲ್ಲಿರುವ ಡೋರಾಹಿ ಕುನ್ವಾ ಮೊಹಲ್ಲಾದ ಬೀದಿಯಲ್ಲಿದೆ. ಅಲ್ಲಿ ಮುನ್ನಾ ಮಾಲಿ ಅವರ ತಾಯಿ ಮತ್ತು ಸಹೋದರಿಗೆ ಹೂವಿನ ಮಾಲೆ ಮಾಡಿ ಅದನ್ನು ಮಾರಾಟ ಮಾಡುತ್ತಾರೆ. ಅವರ ಕುಟಂಬ ರಾಮನಿಗೆ ಹೂವಿನ ಮಾಲೆಯನ್ನು ಹಾಕುತ್ತಾ ಬಂದಿದ್ದಾರೆ. “ಮೂರು ತಲೆಮಾರುಗಳಿಂದ ನಾವು ರಾಮ್‌ಲಲ್ಲಾಗೆ ಹೂ ಮಾಲೆಗಳನ್ನು ಹಾಕುತ್ತಾ ಬಂದಿದ್ದೇವೆ’ ಎಂದು ಮುನ್ನಾ ಮಾಲಿಯ ತಾಯಿ ಸುಕೃತಿ ದೇವಿ ಹೆಮ್ಮೆಯಿಂದ ಹೇಳುತ್ತಾರೆ. ಈ ಮೊದಲು ನಮ್ಮ ಮಾವ ಈ ಕೆಲಸವನ್ನು ಮಾಡುತ್ತಿದ್ದರು. ಆದರೆ ಅವರು ನಿಧನರಾದ ಬಳಿಕ ಮುನ್ನಾ ಈ ಕೆಲಸವನ್ನು ವಹಿಸಿಕೊಂಡರು. ಪ್ರತಿದಿನ ಬೆಳಗ್ಗೆ 10 ಗಂಟೆಗೆ ಇಪ್ಪತ್ತು ಮಾಲೆಗಳನ್ನು ದೇವಸ್ಥಾನಕ್ಕೆ ಕಳುಹಿಸಲಾಗುತ್ತದೆ. ಮತ್ತೂಂದು ಉದಾಹರಣೆ ಇದೆ. ಅದು ಇಲ್ಲಿನ ಜೈನ ದೇವಾಲಯದ ಬಳಿ ಪಾನ್ ಅಂಗಡಿಯೊಂದರದು. ಇದನ್ನು ದೀಪಕ್ ಚೌರಾಸಿಯಾ ಎಂಬವರು ನಡೆಸುತ್ತಿದ್ದಾರೆ. ಅವರ ತಂದೆ ಖುಷಿಗಾಗಿ ದೇವಾಲಯಕ್ಕೆ ವೀಳ್ಯದ ಎಲೆಗಳನ್ನು ನೀಡುತ್ತಿದ್ದರಂತೆ. ಬಳಿಕ ಈ ಸಂಪ್ರದಾಯ ಮುಂದುವರಿದೆ. ದೀಪಕ್ ಚೌರಾಸಿಯಾ ಅವರ ತಂದೆ ಕಾಲಾಧಿನರಾದ ಬಳಿಕ ಈ ಜವಾಬ್ದಾರಿ ಮಗನ ಮೇಲೆ ಬಿದ್ದಿದೆ. ಬೆಳಗ್ಗೆ 8.30ರಿಂದ 9 ಗಂಟೆಯ ಮಧ್ಯೆ ದೇವರಿಗೆ 20 ಸಿಹಿ ಪಾನ್ ತಯಾರಿಸುತ್ತಾರೆ. ಬಳಿಕ 10.30ರ ಸುಮಾರಿಗೆ ಅವನ್ನು ದೇವಸ್ಥಾನಕ್ಕೆ ತಲುಪಿಸುತ್ತಾರಂತೆ. ನಮಗೆ ಸಿಕ್ಕ ಭೂಮಿಯಲ್ಲಿ ಶಾಲೆ ಅಥವಾ ಆಸ್ಪತ್ರೆ ನಿರ್ಮಿಸಿ
ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಮಂಡಳಿಗೆ ದೊರೆತ ಜಮೀನು ಕೃಷಿ ಇಲಾಖೆಯ ಫಾರ್ಮ್ ಹೌಸ್‌ಗೆ ಸೇರಿದೆ. ಅಲ್ಲಿ ಭತ್ತದ ಬೆಳೆಯಲಾಗುತ್ತದೆ. ಆ ಹೊಲದಲ್ಲಿ ಕೃಷಿ ಮಾಡುವ ಕೆಲವು ಕಾರ್ಮಿಕರಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಅನಂತರ ಉತ್ತರ ಪ್ರದೇಶ ಮಸೀದಿಗೆ ಸುನ್ನಿ ವಕ್ಫ್ ಮಂಡಳಿಗೆ ನೀಡಿದೆ. ಈ ಭೂಮಿ ಧನ್ನಿಪುರ ಗ್ರಾಮದಲ್ಲಿ ಬರುತ್ತದೆ. ಅಲ್ಲಿನ ಸ್ಥಳೀಯರೊಬ್ಬರು ಇಲ್ಲಿ ಅನೇಕ ಮಸೀದಿಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಆದರೆ ಮಕ್ಕಳಿಗೆ ಉತ್ತಮ ಆಸ್ಪತ್ರೆ ಅಥವಾ ಶಾಲೆ ಇಲ್ಲ. ನಮಗೆ ಮಸೀದಿಗಿಂತ ಇಲ್ಲಿ ಶಿಕ್ಷಣ ಹಾಗೂ ಆರೋಗ್ಯದ ಅಭಾವ ಇದೆ ಎನ್ನುತ್ತಾರೆ ಎಂದು ದೈನಿಕ್ ಬಾಸ್ಕರ್ ವರದಿ ಮಾಡಿದೆ.