Advertisement

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

11:37 PM Nov 25, 2024 | Team Udayavani |

ಮೈಸೂರು: ಕಂಸಾಳೆ ಕಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ನಗರದ ಬಂಡಿಕೇರಿ ನಿವಾಸಿ ಕುಮಾರಸ್ವಾಮಿ (73) ಸೋಮವಾರ ನಿಧನರಾದರು.

Advertisement

ಮೃತರು ನಾಡಿನ ಪ್ರಖ್ಯಾತ ಜನಪದ ಕಲಾವಿದ ಕಂಸಾಳೆ ಮಹಾದೇವಯ್ಯನವರ ಪುತ್ರ. ಇವರಿಗೆ ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಚಿತಾಗಾರದಲ್ಲಿ ಇವರ ಅಂತ್ಯಸಂಸ್ಕಾರ ನಡೆಯಲಿದೆ.

1951ರಲ್ಲಿ ಮೈಸೂರಿನ ಬಂಡಿಕೇರಿಯಲ್ಲಿ ಜನಿಸಿದ ಕುಮಾರ ಸ್ವಾಮಿ ಅವರು ಬಾಲ್ಯದಿಂದಲೇ ತಂದೆ ಜೊತೆ ಜನಪದ ಕಲೆ ಕಂಸಾಳೆಯನ್ನು ಮೈಗೂಡಿಸಿಕೊಂಡರು. ತಮ್ಮದೇ ತಂಡವನ್ನು ಕಟ್ಟಿಕೊಂಡು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಂಸಾಳೆ ಪ್ರದರ್ಶನ ನೀಡುವ ಮೂಲಕ ಕನ್ನಡ ನಾಡಿನ ಕಲೆಯನ್ನು ವಿಶ್ವದ ಎಲ್ಲೆಡೆ ಪಸರಿಸಿದ್ದರು. 2021ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು. ಇವರ ಸಾಧನೆಯನ್ನು ಮೆಚ್ಚಿ ಹಲವಾರು ಸಂಘ ಸಂಸ್ಥೆಗಳು ಪ್ರಶಸಿಗಳನ್ನು ನೀಡಿ ಗೌರವಿಸಿವೆ.

ಶಿವರಾಜ್‌ಕುಮಾರ್‌ ಚಿತ್ರದ ಹಾಡಿಗೆ ನೃತ್ಯ ಸಂಯೋಜನೆ:
ನಟ ಶಿವರಾಜ್‌ ಕುಮಾರ್‌ ಅಭಿನಯದ, ನಾಗಾಭರಣ ನಿರ್ದೇಶನದ ಸೂಪರ್‌ ಹಿಟ್‌ ಸಿನಿಮಾ “ಜನುಮದ ಜೋಡಿ’ಯ “ಕೋಲು ಮಂಡೆ ಜಂಗಮ..’ಹಾಡಿಗೆ ಕಂಸಾಳೆ ನೃತ್ಯ ಸಂಯೋಜನೆ ಮಾಡಿ ವರನಟ ಡಾ. ರಾಜಕುಮಾರ್‌ ಅವರಿಂದ ಶಹಬ್ಬಾಸ್‌ಗಿರಿ ಪಡೆದುಕೊಂಡಿದ್ದರು.

ಸಿಎಂ ಸಿದ್ದರಾಮಯ್ಯ ಸಂತಾಪ: 
“ಮೈಸೂರಿನ ಹಿರಿಯ ಜಾನಪದ ಕಲಾವಿದ ಕುಮಾರಸ್ವಾಮಿಯವರ ನಿಧನದಿಂದ ದುಃಖಿತನಾಗಿದ್ದೇನೆ. ತಮ್ಮ ತಂದೆ ಕಂಸಾಳೆ ಮಹಾದೇವಯ್ಯ ಅವರಂತೆ ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜಾನಪದ ಸೊಬಗನ್ನು ಕನ್ನಡಿಗರಿಗೆ ಉಣಬಡಿಸಿದ ಕುಮಾರಸ್ವಾಮಿ ಅವರ ಕಲಾಸೇವೆ ಅಜರಾಮರ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬವರ್ಗ ಮತ್ತು ಬಂಧುಮಿತ್ರರಿಗೆ ನನ್ನ ಸಂತಾಪಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next