Advertisement

ದೇವಾಲಯಗಳಲ್ಲಿ ತೀರ್ಥವಿಲ್ಲ; ಕೇಂದ್ರ ಸರಕಾರದಿಂದ ಹೊಸ ಮಾರ್ಗಸೂಚಿ

02:26 AM Jun 05, 2020 | Sriram |

ಹೊಸದಿಲ್ಲಿ: ದೇಶದ ಎಲ್ಲ ಆರಾಧನಾಲಯಗಳು, ಮಾಲ್‌, ಹೊಟೇಲ್‌ ಜೂ.8ರಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

Advertisement

ದೇವಸ್ಥಾನಗಳಲ್ಲಿ ಪ್ರಸಾದ, ತೀರ್ಥ ವಿತರಣೆಗೆ ಅವಕಾಶವಿಲ್ಲ. ವಿಗ್ರಹಗಳನ್ನೂ ಮುಟ್ಟುವಂತಿಲ್ಲ. 65 ವರ್ಷ ಮೇಲಿನ, 10 ವರ್ಷ ಕೆಳಗಿನವರು, ಗರ್ಭಿಣಿಯರು ಸಾಧ್ಯವಾದಷ್ಟು ಮನೆಯಲ್ಲೇ ಇರಲಿ ಎಂದು ಇದರಲ್ಲಿ ಉಲ್ಲೇಖೀಸಲಾಗಿದೆ.

6 ಅಡಿ ದೈಹಿಕ ಅಂತರ ಕಾಪಾಡಿಕೊಳ್ಳುವುದು, ಕಡ್ಡಾಯ ಮಾಸ್ಕ್, ಒಳ ಪ್ರವೇಶಿಸುವಾಗ ಕೈ-ಕಾಲು ತೊಳೆಯುವುದು, ಆರೋಗ್ಯ ಸೇತು ಆ್ಯಪ್‌ ಹೊಂದಿರುವುದು ಮುಂತಾದ ನಿಯಮಗಳನ್ನು ಎಲ್ಲ ಕಡೆಯೂ ಅನುಸರಿಸುವಂತೆ ಸೂಚಿಸಲಾಗಿದೆ. ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್‌ ಮತ್ತು ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ. ರೋಗ ಲಕ್ಷಣ ಇದ್ದವರಿಗೆ ಪ್ರವೇಶ ನಿಷೇಧಿಸಲಾಗಿದೆ.

ಶಾಪಿಂಗ್‌ ಮಾಲ್‌
ಸಾಮಾನ್ಯ ನಿಯಮಾವಳಿಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮವನ್ನು ಮಾಲ್‌ ಗಳು ತೆಗೆದುಕೊಳ್ಳಬೇಕು. ವ್ಯಾಲೆಟ್‌ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸುವ ವೇಳೆಯೂ ಸೂಕ್ತ ನಿಯಮಗಳನ್ನು ಪಾಲಿಸಬೇಕು. ವಾಹನಗಳ ಸ್ಟೇರಿಂಗ್‌,ಡೋರ್‌ ಹ್ಯಾಂಡಲ್‌ಗ‌ಳು, ಕೀಲಿಕೈ ಇತ್ಯಾದಿಗಳನ್ನು ಸೋಂಕು ನಿವಾರಕಗ ಳಿಂದ ಸ್ವತ್ಛಗೊಳಿಸಬೇಕು. ಶೌಚಾಲಯಗಳು, ಕುಡಿಯುವ ನೀರು, ಕೈತೊಳೆಯುವ ನೀರಿರುವ ಪ್ರದೇಶಗಳನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು.

ಫುಡ್‌ ಕೋರ್ಟ್‌ಗಳಲ್ಲಿ
ಶೇ. 50ಕ್ಕಿಂತ ಹೆಚ್ಚು ಆಸನಗಳು ಭರ್ತಿಯಾಗದಂತೆ ನೋಡಿಕೊಳ್ಳಬೇಕು, ಆಹಾರ ಆರ್ಡರ್‌ ಮಾಡಲು ಸಂಪರ್ಕರಹಿತ ವಿಧಾನ ಮತ್ತು ಡಿಜಿಟಲ್‌ ಪಾವತಿಗೆ ಒತ್ತು ಕೊಡಬೇಕು, ಅಡುಗೆ ಮನೆಯಲ್ಲಿಯೂ ಸಿಬಂದಿ ಸೂಕ್ತ ಶಾರೀರಿಕ ಅಂತರ ಕಾಯ್ದುಕೊಳ್ಳಬೇಕು.

Advertisement

ಸೋಂಕುಪೀಡಿತರು ಪತ್ತೆಯಾದರೆ?
ಮಾಲ್‌ಗ‌ಳು, ಫುಡ್‌ ಕೋರ್ಟ್‌ಗಳ ಆವರಣದಲ್ಲಿ ಸೋಂಕುಪೀಡಿತ ಅಥವಾ ಶಂಕಿತ ವ್ಯಕ್ತಿ ಪತ್ತೆಯಾದರೆ ಕೂಡಲೇ ಆತನನ್ನು ಪ್ರತ್ಯೇಕಿಸಿದ ಕೋಣೆಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ.

ರೆಸ್ಟಾರೆಂಟ್‌ಗಳಲ್ಲಿ: ಪಾರ್ಸೆಲ್‌ಗೆ ಒತ್ತು ನೀಡಬೇಕು, ಆಹಾರ ಡೆಲಿವರಿ ಮಾಡುವ ಸಿಬಂದಿ ಗ್ರಾಹಕರ ಮನೆ ಬಾಗಿಲಿನ ಹೊರಗೆ ಆಹಾರದ ಪ್ಯಾಕೆಟ್‌ ಇಟ್ಟು ವಾಪಸಾಗಬೇಕು.ಗ್ರಾಹಕರ ಕೈಗೆ ನೇರವಾಗಿ ಆಹಾರ ಹಸ್ತಾಂತರಿಸುವಂತಿಲ್ಲ. ಪ್ರತಿ ಸಿಬಂದಿಯನ್ನು ರೆಸ್ಟಾರೆಂಟ್‌ನವರೇ ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸ ಬೇಕು. ಬಳಸಿ ಬಿಸಾಡಬಹುದಾದ ಮೆನುಗಳನ್ನು ಬಳಸಿದರೆ ಉತ್ತಮ. ಬಟ್ಟೆಯ ನ್ಯಾಪಿRನ್‌ ಬದಲು ಉತ್ತಮ ಗುಣಮಟ್ಟದ ಪೇಪರ್‌ ನ್ಯಾಪಿRನ್‌ ಬಳಕೆಗೆ ಒತ್ತು ನೀಡಬೇಕು.

ಏನೇನು ನಿಯಮಗಳು?
-ಪ್ರಸಾದ ವಿತರಣೆ/ತೀರ್ಥ ನೀಡುವಂತಿಲ್ಲ.
-ಕೈ-ಕಾಲು ತೊಳೆದು ಪ್ರವೇಶಿಸಬೇಕು.
-ಮೂರ್ತಿ/ಪವಿತ್ರ ಗ್ರಂಥ ಸ್ಪರ್ಶಿಸುವಂತಿಲ್ಲ.
-ಹೆಚ್ಚು ಸಂಖ್ಯೆಯ ಜನರು ಸೇರುವಂತಿಲ್ಲ, ಸಾಮೂಹಿಕ ಭಜನೆ, ಗಾಯನ ಸಲ್ಲದು.
-ಎಲ್ಲರಿಗೂ ಒಂದೇ ಮ್ಯಾಟ್‌ ಹಾಸುವಂತಿಲ್ಲ, ಭಕ್ತರು ಸ್ವತಃ ಮ್ಯಾಟ್‌ ತರಬಹುದು.
-ಅನ್ನದಾನ ವ್ಯವಸ್ಥೆಯಿದ್ದರೆ ಅಲ್ಲೂ ಶಾರೀರಿಕ ಅಂತರ ಕಾಪಾಡಿಕೊಳ್ಳಬೇಕು.
=ಪಾದರಕ್ಷೆಗಳನ್ನು ಭಕ್ತರು ತಮ್ಮ ವಾಹನ ದೊಳಗೆ ಬಿಟ್ಟು ಬರುವುದು ಉತ್ತಮ.
ಕ್ಯೂ ನಿರ್ವಹಣೆಗಾಗಿ ನಿರ್ದಿಷ್ಟ ಮಾರ್ಕಿಂಗ್‌ಮಾಡಿ ಅಂತರ ಕಾಯಬೇಕು.
ಆರಾಧನಾಲಯಗಳಲ್ಲಿ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಕಲ್ಪಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next