Advertisement

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

08:18 PM Jan 03, 2025 | Team Udayavani |

ನವದೆಹಲಿ: ಡೇರಾ ಸಚ್ಚಾ ಸೌಧದ ಮಾಜಿ ಮ್ಯಾನೇಜರ್‌ ರಂಜಿತ್‌ ಸಿಂಗ್‌ ಹತ್ಯೆ ಪ್ರಕರಣದಲ್ಲಿ ಡೇರಾದ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಂ ಸಿಂಗ್‌ ಹಾಗೂ ಇತರ ನಾಲ್ವರನ್ನು ಪಂಜಾಬ್‌ ಹರ್ಯಾಣ ಹೈಕೋರ್ಟ್‌ ಖುಲಾಸಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಸಲ್ಲಿಸಿದ್ದ ಅರ್ಜಿ ಆಲಿಸಲು ಸುಪ್ರೀಂಕೋರ್ಟ್‌ ಶುಕ್ರವಾರ ಸಮ್ಮತಿಸಿದೆ.

Advertisement

ಜತೆಗೆ ಈ ಸಂಬಂಧಿಸಿದಂತೆ ಡೇರಾ ಮುಖ್ಯಸ್ಥ ಗುರ್ಮೀತ್‌ ಹಾಗೂ ಖುಲಾಸೆಯಾಗಿದ್ದ ಇನ್ನಿತರ ನಾಲ್ವರಿಗೆ ನೋಟಿಸ್‌ ಕೂಡ ಜಾರಿಗೊಳಿಸಿ, ಪ್ರತಿಕ್ರಿಯಿಸುವಂತೆ ಸಿಜೆಐ ಸಂಜೀವ್‌ ಖನ್ನಾ ಹಾಗೂ ನ್ಯಾ. ಸಂಜಯ್‌ ಕುಮಾರ್‌ ಅವರ ಪೀಠ ಸೂಚಿಸಿದೆ. 2002ರ ಜುಲೈ 10ರಂದು ರಂಜಿತ್‌ ಸಿಂಗ್‌ರನ್ನು ಹರ್ಯಾಣದ ಕುರಕ್ಷೇತ್ರದಲ್ಲಿ ಹತ್ಯೆಗೈಯ್ಯಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next