Advertisement

ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ

12:54 AM Jan 03, 2025 | Team Udayavani |

ಹೊಸದಿಲ್ಲಿ: ಕಾರಾಗೃಹದಲ್ಲಿ ಕೈದಿಗಳ ನಡುವೆ ನಡೆಯುವ ಜಾತಿ ಆಧರಿತ ತಾರತಮ್ಯ ತಪ್ಪಿಸುವ ನಿಟ್ಟಿನಲ್ಲಿ 2016ರ ಮಾದರಿ ಕಾರಾಗೃಹ ಕೈಪಿಡಿ ಹಾಗೂ 2023ರ ಮಾದರಿ ಕಾರಾಗೃಹಗಳು ಮತ್ತು ಸುಧಾರಣ ಸೇವೆಗಳ ಕಾಯ್ದೆಗೆ ಕೇಂದ್ರ ಸರಕಾರ ತಿದ್ದುಪಡಿ ತಂದಿದೆ.

Advertisement

2016ರ ಮಾದರಿ ಕಾರಾಗೃಹ ಕೈಪಿಡಿಗೆ ತರಲಾದ ತಿದ್ದುಪಡಿಯಲ್ಲಿ – ಜೈಲು ಆಡಳಿತವು ಕೈದಿಗಳ ನಡುವೆ ಜಾತಿ ಆಧಾರದಲ್ಲಿ ಯಾವುದೇ ರೀತಿಯ ತಾರತಮ್ಯ ಆಗದಂತೆ ಖಾತರಿಪಡಿಸಿ ಕೊಳ್ಳಬೇಕು. ಯಾವುದೇ ಕೈದಿಯನ್ನು ಜಾತಿ ಆಧಾರದಲ್ಲಿ ಕೆಲಸಕ್ಕೆ ನಿಯೋಜಿಸ ಕೂಡದು ಎಂಬ ನಿಯಮ ಸೇರಿಸಿದೆ.

2023ರ ಮಾದರಿ ಕಾರಾಗೃಹಗಳು ಮತ್ತು ಸುಧಾರಣ ಸೇವೆಗಳ ಕಾಯ್ದೆಗೆ- “ಕಾರಾಗೃಹ ಮತ್ತು ಸುಧಾರಣ ಸಂಸ್ಥೆಗಳಲ್ಲಿ ತಾರತಮ್ಯ ನಿಷೇಧ’ ಎಂಬ ಹೊಸ ನಿಬಂಧನೆ (ಸೆಕ್ಷನ್‌ 55ಎ) ಸೇರಿಸಿದೆ. ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ-2013ರ ನಿಬಂಧನೆ ಕೈದಿಗಳಿಗೂ ಅನ್ವಯಿಸುತ್ತದೆ ಎಂದಿದೆ.

ದಮನಿತ ವರ್ಗದ ಕೈದಿಗಳನ್ನುಸ್ವಚ್ಛತಾ ಕೆಲಸಕ್ಕೆ ಮೀಸಲಿರಿಸಲಾಗುತ್ತಿದೆ ಎಂದು ಆರೋಪಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ, 2 ತಿಂಗಳ ಹಿಂದೆ ನಿಯಮ ಪರಿಶೀಲನೆಗೆ ಸೂಚಿಸಿತ್ತು. ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next