ಕಾಪು: ಗೌಡ ಸಾರಸ್ವತ ಸಮಾಜವು ದೇವತಾರಾಧನೆಗೆ ವಿಶೇಷ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ನೀಡುತ್ತಾ ಬರುತ್ತಿದೆ. ಕಾಪು ಪೇಟೆಗೆ ವೆಂಕಟರಮಣ ದೇವರು ಇಷ್ಠದೇವರಾಗಿ, ಮಾರಿಯಮ್ಮ ದೇವಿಯು ಜಗನ್ಮಾತೆಯಾಗಿದ್ದಾಳೆ. ಭಗವದನುಗ್ರಹ ಮತ್ತು ಹರಿಗುರುಗಳ ಆಶೀರ್ವಾದದಿಂದಾಗಿ ಇಲ್ಲಿ ನಿತ್ಯ ನಿರಂತರವಾಗಿ ವಿವಿಧ ಜೀರ್ಣೋದ್ಧಾರಾ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ, ಇದು ಮುಂದುವರಿಯಲಿ ಎಂದು ಶ್ರೀ ಕಾಶೀ ಮಠಾಧಿಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದರು ಹೇಳಿದರು.
ಕಾಪು ಪೇಟೆ ಕೊಂಕಣಿಮಠ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ದಿ| ಡಾ| ಬಾಲಕೃಷ್ಣ ಭಟ್ ಹಾಗೂ ದಿ| ಸುಗುಣಾ ಭಟ್ ಅವರ ಸ್ಮರಣಾರ್ಥ ಅವರ ಮಕ್ಕಳಾದ ಡಾ| ನಾಗಾನಂದ ಭಟ್ ಮತ್ತು ಸಹೋದರರು ಸೇವಾ ರೂಪದಲ್ಲಿ ಸಮರ್ಪಿಸಿದ ನೂತನ ಭಂಡಿ ರಥ, ರಜತ ಗರುಡ ವಾಹನ ಮತ್ತು ಶೇಷ ವಾಹನವನ್ನು ಶುಕ್ರವಾರ ದೇವರಿಗೆ ಸಮರ್ಪಿಸಿ, ಬಳಿಕ ಅವರು ಆಶೀರ್ವಚನ ನೀಡಿದರು.
ದೇವರ ಸಾನಿಧ್ಯವೃದ್ಧಿ, ಜನರ ಉತ್ಸಾಹವೃದ್ಧಿಗೆ ಉತ್ಸವಗಳು ಅತೀ ಅವಶ್ಯಕವಾಗಿವೆ. ಭಗವಂತನು ರಥಾರೂಢವಾಗಿ ಸಂಚರಿಸುವಾಗ ಎಲ್ಲರ ಮೇಲೆ ದೇವರ ದೃಷ್ಠಿ ಬೀಳಲು ಸಾಧ್ಯವಿದೆ. ವೆಂಕಟರಮಣ ದೇವರು ಉತ್ಸವ ಪ್ರಿಯನಾಗಿದ್ದು ಗರುಡ ವಾಹನನಾಗಿ, ಶೇಷ ಶಯನನಾಗಿ ಸಂಚರಿಸುವ ಮೂಲಕ ಕಾಪು ಪೇಟೆ ಮತ್ತು ಸಮಾಜಕ್ಕೆ ಬಂದಿರುವ ದುರಿತಗಳನ್ನು ದೂರ ಮಾಡುತ್ತಾನೆ. ನೂತನ ಭಂಡಿ ರಥ, ರಜತ ಗರುಡ ಮತ್ತು ಶೇಷ ಶಯನ ಸಮರ್ಪಣೆಯ ಮೂಲಕ ಡಾ| ನಾಗಾನಂದ ಭಟ್ ಮತ್ತು ಸಹೋದರರು ದೇವರಿಗೆ ಅತ್ಯಂತ ಪ್ರಿಯವಾದ ಸೇವೆಯನ್ನು ಮಾಡಿದ್ದಾರೆ ಎಂದರು.
ದೇವಸ್ಥಾನದ ಪ್ರಧಾನ ಅರ್ಚಕ ವೇ| ಮೂ| ಕಮಲಾಕ್ಷ ಭಟ್ ಮತ್ತು ವೈದಿಕ ವೃಂದದವರ ನೇತೃತ್ವದಲ್ಲಿ ನೂತನ ಭಂಡಿ ರಥ, ರಜತ ಗರುಡ ವಾಹನ ಮತ್ತು ಶೇಷ ವಾಹನ ಸಮರ್ಪಣಾಪೂರ್ವಕ ಧಾರ್ಮಿಕ ವಿಽ ವಿಧಾನಗಳನ್ನು ನೆರವೇರಿಸಲಾಯಿತು.
ಕಾಪು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಪ್ರಸಾದ್ ಗೋಕುಲ್ದಾಸ್ ಶೆಣೈ, ಮಾಜಿ ಆಡಳಿತ ಮೊಕ್ತೇಸರ ಶ್ರೀಧರ ಆನಂದರಾಯ ಶೆಣೈ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗೋಕುಲದಾಸ್ ಆನಂದರಾಯ ಶೆಣೈ, ಕೋಶಾಽಕಾರಿ ಕೆ. ಲಕ್ಷ್ಮೀ ನಾರಾಯಣ ನಾಯಕ್, ಮೊಕ್ತೇಸರರಾದ ಸದಾಶಿವ ರಾಧಾಕೃಷ್ಣ ಕಾಮತ್, ರಾಜೇಶ್ ಮಾಧವರಾಯ ಶೆಣೈ, ರಾಮ ಶಶಿಧರ ನಾಯಕ್, ಶ್ರೀಕಾಂತ್ ಲಕ್ಷ್ಮೀನಾರಾಯಣ ಭಟ್, ಆಡಳಿತ ಮಂಡಳಿ ಸದಸ್ಯರಾದ ಚಂದ್ರಕಾಂತ್ ಕಾಮತ್, ಮೋಹನದಾಸ್ ಕಿಣಿ, ಕೃಷ್ಣಾನಂದ ನಾಯಕ್, ರಾಜೇಶ್ ಶೆಣೈ ಮಜೂರು, ಸುನೀಲ್ ಪೈ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಲ್ಲೇಶ್ವರಂ ಕಾಶೀ ಮಠದ ಕಾರ್ಯದರ್ಶಿ ನಾರಾಯಣ ಶೆಣೈ, ಶಿರ್ವ ಮಹಾಲಸಾ ನಾರಾಯಣೀ ದೇವಸ್ಥಾನದ ಅರ್ಚಕ ವೇ| ಮೂ| ರವಿ ಭಟ್, ಮಹಾಲಸಾ ನಾರಾಯಣೀ ಭಜನಾ ಮಂಡಳಿ ಅಧ್ಯಕ್ಷ ಶ್ರೀನಿವಾಸ ಶೆಣೈ, ಮೂಲ್ಕಿ ವೆಂಕಟರಮಣ ದೇವಸ್ಥಾನ ಸಹಿತ ವಿವಿಧ ದೇವಸ್ಥಾನಗಳ ಆಡಳಿತ ಮಂಡಳಿ ಸದಸ್ಯರು, ಕಾಪು ಭಟ್ ಕುಟುಂಬದ ಹಿರಿಯರಾದ ಲಕ್ಷ್ಮೀ ನಾರಾಯಣ ಭಟ್, ಸೇವಾಕರ್ತರಾದ ಡಾ| ನಾಗಾನಂದ ಭಟ್ ಮತ್ತು ಡಾ| ಸುವರ್ಣ ಎನ್. ಭಟ್ ದಂಪತಿ, ಮಗ ಆಶ್ಲೇಷ್ ಭಟ್, ಸೊಸೆ ಲಾವಣ್ಯ ಭಟ್, ಸಹೋದರರಾದ ಉದಯ ಶಂಕರ ಭಟ್, ಬ್ರಹ್ಮಾನಂದ ಭಟ್, ಡಾ| ರಾಮ್ಪ್ರಸಾದ್ ಭಟ್, ಪರಮಾನಂದ ಭಟ್, ಪೂರ್ಣಾನಂದ ಭಟ್ ಹಾಗೂ ಕಾಪು ಪೇಟೆಯ ಹತ್ತು ಸಮಸ್ಥರು, ಊರ ಪರವೂರ ಭಜಕರು ಉಪಸ್ಥಿತರಿದ್ದರು.