Advertisement

Karnataka ಪಠ್ಯಪುಸ್ತಕ ಬೇಡಿಕೆ: ಜ.10ರೊಳಗೆ ದೃಢೀಕರಣ ರಾಜ್ಯಹಂತಕ್ಕೆ ಕಳುಹಿಸಿ

11:37 PM Jan 01, 2025 | Team Udayavani |

 

Advertisement

ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕ ಬೇಡಿಕೆ ಸಂಬಂಧ ಅಂತಿಮವಾಗಿ ಜಿಲ್ಲಾ ಹಂತದ ದೃಢೀಕರಣವನ್ನು ರಾಜ್ಯ ಹಂತಕ್ಕೆ ಜ.10ರೊಳಗೆ ಕಳುಹಿಸಿಕೊಡಲು ಶಾಲಾ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ.

2025-26ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ಸ್ಯಾಟ್ಸ್‌ ಮೂಲಕ ಬೇಡಿಕೆ ಸಲ್ಲಿಸಲು ಶಾಲೆಗಳಿಗೆ ಅವಕಾಶ ನೀಡಲಾಗಿತ್ತು. ಇದರಂತೆ ಶಾಲೆಗಳು ಸಲ್ಲಿಸಿರುವ ಬೇಡಿಕೆಯನ್ನು ಉಲ್ಲೇಖಿತ ಮಾರ್ಗಸೂಚಿಯನ್ವಯ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮ

ನ್ವಯಾಧಿಕಾರಿ ಹಾಗೂ ತಾಲೂಕು ಪಠ್ಯಪುಸ್ತಕ ನೋಡಲ್‌ ಅಧಿಕಾರಿಗಳು ಎಸ್‌.ಎ.ಟಿ.ಎಸ್‌ ತಂತ್ರಾಂಶದಲ್ಲಿನ ಮಾಹಿತಿಯನ್ನು ದೃಢಪಡಿಸಿಕೊಳ್ಳಬೇಕು. ಅನಂತರ ಪಠ್ಯಪುಸ್ತಕಗಳ ಬೇಡಿಕೆಯನ್ನು ಸೂಕ್ತವಾಗಿ ಸಲ್ಲಿಸಿರುವ ಬಗ್ಗೆ ಪ್ರತಿ ಶಾಲೆಯಿಂದ ಸಿಆರ್‌ಪಿ ಅವರು, ಪ್ರತಿ ಕ್ಲಸ್ಟರ್‌ನಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪ್ರತಿ ತಾಲೂಕು ವ್ಯಾಪ್ತಿಯಿಂದ ಉಪನಿರ್ದೇಶಕರು ಅಡಕದಲ್ಲಿರುವ ನಿಗದಿತ ನಮೂನೆಯಲ್ಲಿ ಲಿಖೀತ ದೃಢೀಕರಣವನ್ನು ತಮ್ಮ ಹಂತದಲ್ಲಿ ಸಂಗ್ರಹಿಸಿಕೊಳ್ಳಬೇಕು. ಅಂತಿಮವಾಗಿ ಜಿಲ್ಲಾ ಹಂತದ ದೃಢೀಕರಣವನ್ನು ರಾಜ್ಯ ಹಂತಕ್ಕೆ ಜ.10ರೊಳಗೆ ಉಪನಿರ್ದೇಶಕರು ಕಳುಹಿಸಿ ಕೊಡಲು ಈ ಮೂಲಕ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next