Advertisement

ರೈತರ ಸಮಸ್ಯೆ ಕೇಳುವವರೇ ಇಲ್ಲ

05:01 AM Jun 06, 2020 | Lakshmi GovindaRaj |

ನಂಜನಗೂಡು: ತಾಲೂಕಿನಲ್ಲಿ ರೈತರ ಸಮಸ್ಯೆಗಳನ್ನು ಕೇಳುವವರೇ ಇಲ್ಲವಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾ ಸಾಗರ ಆರೋಪಿಸಿದರು. ನಗರದಲ್ಲಿ ರೈತರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ರೈತರು ಮತ್ತು ಕೃಷಿ ಸಮಸ್ಯೆಗಳ ಬಗ್ಗೆ ನಿರ್ಲಕ್ಷ ವಹಿಸಿದ್ದಾರೆ.

Advertisement

ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅಗತ್ಯ, ರಸಗೊಬ್ಬರ, ಬಿತ್ತನೆ ಬೀಜ, ಮತ್ತಿತರೆ ಕೃಷಿ ಪರಿಕರಗಳು  ಸಿಗುತ್ತಿಲ್ಲ ಎಂದು ಹೇಳಿದರು. ತಾಲೂಕು ಕೃಷಿ ಅಧಿಕಾರಿ ದೀಪಕ್‌ ಕುಮಾರ್‌ ಮಾತನಾಡಿ, ಸರ್ಕಾರ ನೀಡುವ ಸಹಾಯ ದನದ ಗೊಂದಲಕ್ಕೆ ನಾಲ್ಕಾರು ಬ್ಯಾಂಕುಗಳಲ್ಲಿ ರೈತರು ಖಾತೆ ಹೊಂದಿರು ವುದೂ ಸೇರಿದಂತೆ ಆಧಾರ್‌ ಸಂಖ್ಯೆ ಜೋಡಿಸುವಾಗ ಆಗಿರುವ ಲೋಪಗಳೂ ಕಾರಣವಾಗಿದೆ.

ಹುಲ್ಲಹಳ್ಳಿ ರೈತ ಸಂಪರ್ಕ ಕೇಂದ್ರದ ವಿರುದ ಸಾಕಷ್ಟು ದೂರುಗಳಿದ್ದು, ಸಿಬ್ಬಂದಿ ಕೂಡಲೇ ಲೋಪದೋಷಗಳನ್ನು ಸರಿಪಡಿಸಿ ಕೊಳ್ಳುವಂತೆ ತಾಕೀತು ಮಾಡಿದರು. ಸಭೆಯಲ್ಲಿ  ತಾಲೂಕು ತೋಟಗಾರಿಕಾ ಅಧಿಕಾರಿ ಗುರುಸ್ವಾಮಿ, ಅರಣ್ಯಾಧಿಕಾರಿ ಲೋಕೇಶಮೂರ್ತಿ, ಶಿವಪ್ರಸಾದ, ಕಂದಾಯ, ತಾಲೂಕು ರೈತ ಸಂಘದ ಅಧ್ಯಕ್ಷ ಸತೀಶ, ರೈತ ಸಂಘಟನೆಯ ಹಿಮ್ಮಾವು ರಘು, ಮಂಜುನಾಥ್‌, ಪುಟ್ಟಬಸಪ್ಪ, ಕತ್ವಾಡಿಪುರದ ಶಿವಣ್ಣ, ಮಹದೇವಸ್ವಾಮಿ, ರಂಗಸ್ವಾಮಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next