Advertisement

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ

09:39 AM Jul 28, 2020 | Suhan S |

ಯಲಬುರ್ಗಾ: ಬಂಡಿಹಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ಸಮಸ್ಯೆ ನೀಗಿಸುವಂತೆ ಆಗ್ರಹಿಸಿ ಬಂಡಿಹಾಳ ಗ್ರಾಮಸ್ಥರು ಸೋಮವಾರ ಕರಮುಡಿ ಗ್ರಾಪಂ ಕಾರ್ಯದರ್ಶಿ ಈರಣ್ಣ ಕುರ್ನಾಳಗೆ ಮನವಿ ಸಲ್ಲಿಸಿದರು.

Advertisement

ಪ್ರಸ್ತುತ ವರ್ಷದಲ್ಲಿ ಬಂಡಿಹಾಳ ಕೆರೆ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಕೆರೆಯಲ್ಲಿ ನೀರಿಲ್ಲದಂತಾಗಿದೆ. ಗ್ರಾಮದಲ್ಲಿ ಈ ಹಿಂದೆ ಕಾಟಾಚಾರಕ್ಕೆ ಬೇಕಾಬಿಟ್ಟಿ ಪೈಪ್‌ ಲೈನ್‌ ಕಾಮಗಾರಿ ಮಾಡಲಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಜನ ದೂರದ ಹೊಲಗಳಿಗೆ ಹೋಗಿ ಕೃಷಿ ಹೊಂಡದಲ್ಲಿರುವ ನೀರು ತರುವ ಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದ ಜಿಪಂ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಶೀಘ್ರ ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಗ್ರಾಪಂ ಕಾರ್ಯದರ್ಶಿ ಈರಣ್ಣ ಕುರ್ನಾಳ ಮನವಿ ಸ್ವೀಕರಿಸಿ ಮಾತನಾಡಿ, ಗ್ರಾಮದಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಈ ವೇಳೆ ಮಂಜು ಸಂಗಣ್ಣನವರ, ಭೀಮಪ್ಪ ಕೋಮಾರ, ಸಂತೋಷ ಚೆಂಡೂರು, ರಾಜು ವಾರಿ, ಬಸವರಾಜ ದೊಡ್ಡಮನಿ, ನವೀನ ಸಂಗಣ್ಣನವರ, ಗುರು ಮಳಗೌಡ್ರ, ಗವಿಸಿದ್ದಪ್ಪ ಪಟ್ಟೇದ, ಮಂಜುನಾಥ ತೋಟರ, ಮಂಜುನಾಥ ಭೂಸಣ್ಣನವರ, ಶರಣಪ್ಪ ಮಳಗೌಡ್ರ, ಚೆನ್ನಪ್ಪ ವಡ್ಡರ, ಬಸವರಾಜ ಲಿಂಗಣ್ಣನವರ, ರಾಜು ಚೆಂಡೂರು, ಪ್ರವೀಣ ಕಳಸಪ್ಪನವರ, ಬಸವರಾಜ ಬಂಡ್ರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next