Advertisement
ಮಣಿಪಾಲ ಆಸ್ಪತ್ರೆಗೆ ಬರುವ ವಾಹನಗಳು, ವಾಪಸು ಹೋಗುವ ವಾಹನಗಳು ಹೆಚ್ಚಿಗೆ ಇದೆ. ಮಣಿಪಾಲಕ್ಕೆ ನಿತ್ಯ ಬರುವ ಜನರು ಅಷ್ಟಿಷ್ಟಲ್ಲ. ಆ್ಯಂಬುಲೆನ್ಸ್‌ಗಳೂ ಹಾರ್ನ್ ಹೊಡೆದು ಮುಂದಕ್ಕೆ ಚಲಿಸಲಾಗದ ಸ್ಥಿತಿ ಸಂಭವಿಸುತ್ತಿದೆ. ಎಂತಹ ಬುದ್ಧಿವಂತ ದ್ವಿಚಕ್ರವಾಹನ ಚಾಲಕರೂ ಇಲ್ಲಿ ಚಲಿಸಿದರೆ ಬೀಳಲು ಸಾಧ್ಯ.
ನಗರದ ನಿವಾಸಿ ಕೆ.ಎಸ್.ರೈ, ಗಣೇಶರಾಜ್ ಸರಳೆಬೆಟ್ಟು ಅವರು ಪ್ರಧಾನಮಂತ್ರಿಯವರಿಗೆ ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ರಸ್ತೆಯನ್ನು ಮೇಲ್ದರ್ಜೆಗೇರಿಸಿದರೂ ರಸ್ತೆ ದುಃಸ್ಥಿತಿ ಮುಂದುವರಿಯುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಪ್ರಧಾನಿಯವರಿಗೆ ದೂರು ಸಲ್ಲಿಸಿದರೆ ತ್ವರಿತವಾಗಿ ಪರಿಹಾರ ಸಿಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. ಪರ್ಕಳಕ್ಕೂ ಇದು ಅನ್ವಯವಾಗುತ್ತದೋ ನೋಡಬೇಕು…ಅಂತೂ ಒಟ್ಟಾರೆ ಪ್ರಧಾನಮಂತ್ರಿ ಕಚೇರಿ ತಲುಪುವ ಭಾಗ್ಯ ಪರ್ಕಳ ಬಸ್ ನಿಲ್ದಾಣಕ್ಕೆ ದಕ್ಕಿದೆ!