Advertisement

Kundapura: ಜೀವರಕ್ಷಣೆಗೆ ಊರ ಜನರ ಜಾಗೃತಿ

02:30 PM Jan 01, 2025 | Team Udayavani |

ಕುಂದಾಪುರ: ಕೋಡಿ ಕಡಲತಡಿ ಯಲ್ಲಿ ನಡೆದ ಕೆಲವು ದುರ್ಘ‌ಟನೆಗಳಿಂದ ವಿಚಲಿತರಾದ ಊರ ಮಂದಿ ಅಲ್ಲಲ್ಲಿ ಜಾಗೃತಿ ಫಲಕಗಳನ್ನು ಅಳವಡಿಸುತ್ತಿದ್ದಾರೆ. ಇಂತಹ ಕೆಲಸಕ್ಕೆ ಪ್ರವಾಸೋದ್ಯಮ ಇಲಾಖೆ, ಪೊಲೀಸ್‌ ಇಲಾಖೆ, ಕರಾವಳಿ ಕಾವಲು ಪಡೆ, ಪುರಸಭೆ ಎಂದು ಅನುದಾನಕ್ಕಾಗಿ ಕಾಯದೇ ತಾವೇ ಕೈಯಾರೆ ದೇಣಿಗೆ ಹಾಕಿ, ಒಂದಷ್ಟು ಮಂದಿಯಿಂದ ಸಂಗ್ರಹಿಸಿ ಫಲಕಗಳನ್ನು ಹಾಕುತ್ತಿದ್ದಾರೆ.

Advertisement

ಕೋಡಿ ಕಡಲ ತೀರ ಅತಿ ಉದ್ದದ ಸಮುದ್ರತೀರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಮುದ್ರ ದಂಡೆ ಯಾವುದೇ ಅಡಚಣೆಯಿಲ್ಲದೇ 5 ಕಿ.ಮೀ.ನಷ್ಟು ವಿಸ್ತಾರವಾಗಿದೆ. ಕೋಡಿಯಲ್ಲಿ 2 ಕಿ.ಮೀ. ಉದ್ದದ ಸೀವಾಕ್‌ ಹಾಗೂ ಗಂಗೊಳ್ಳಿಯಲ್ಲಿ ಅಷ್ಟೇ ಉದ್ದ ಸೀವಾಕ್‌ ಇದೆ. ಎರಡೂ ಸೀವಾಕ್‌ಗಳನ್ನು ಒಂದೇ ಕಡೆಯಿಂದ ಕಣ್ತುಂಬಿಕೊಳ್ಳಬಹುದು. ಜತೆಗೆ ಕೋಡಿಯಿಂದ ಗಂಗೊಳ್ಳಿಗೆ ದೋಣಿ ಮೂಲಕ ಹೋಗಬಹುದು.

ಕೋಡಿಯ ಹಿನೀ°ರಿನಲ್ಲಿ ಬೋಟ್‌, ಕಯಾಕಿಂಗ್‌ ನಡೆಸಬಹುದು. ಬೀಚ್‌ ಬದಿ ಉದ್ಯಾನವಿದೆ, ಬೀಚ್‌ ವಾಲಿಬಾಲ್‌ಗೆ ಅವಕಾಶವಿದೆ. ಲೈಟ್‌ ಹೌಸ್‌ ಹತ್ತಬಹುದು. ಸೀವಾಕ್‌ನ ಕಾಲುನಡಿಗೆ ಆಹ್ಲಾದವನ್ನು ನೀಡುತ್ತದೆ. ಇದರಿಂದಾಗಿ ಇಲ್ಲಿ ವಾರಾಂತ್ಯದಲ್ಲಿ ಸಾವಿರಾರು ಮಂದಿ ಸೇರುತ್ತಾರೆ. ಬೇರೆ ಬೇರೆ ಊರಿನಿಂದ ಬರುವ ಪ್ರವಾಸಿಗರು ಸಮುದ್ರ ಕಂಡು ಉಲ್ಲಸಿತರಾಗುತ್ತಾರೆ. ಸ್ಥಳೀಯರ, ಪೊಲೀಸರ ಮನವಿ, ಎಚ್ಚರಿಕೆಗೂ ಕಿವಿ ಕೊಡದೇ ಸಮುದ್ರಕ್ಕೆ ಇಳಿಯುತ್ತಾರೆ. ಇಲ್ಲಿ ಹೋಮ್‌ ಗಾರ್ಡ್‌ಗಳು ಇಲ್ಲ. ಜೀವರಕ್ಷಕರು ಇಲ್ಲ. ಎಚ್ಚರಿಕೆ ಫಲಕಗಳು ದೊಡ್ಡ ಪ್ರಮಾಣದಲ್ಲಿ ಇಲ್ಲ. ಹಾಗಿದ್ದರೂ ಸ್ಥಳೀಯರು ಎಚ್ಚರಿಸುವ ಕೆಲಸ ಮಾಡುತ್ತಾರೆ. ಆದರೂ ಯಾತ್ರಿಕರು ಮಾತು ಕೇಳುವುದಿಲ್ಲ. ಪೊಲೀಸರು ಬಂದಾಗ ಸುಮ್ಮನಿರುವ ಜನ ಮತ್ತೆ ಇಳಿಯುತ್ತಾರೆ. ಇದನ್ನು ಗಮನಿಸಿದ ಜನರು ಎಚ್ಚರಿಕೆ ಫ‌ಲಕಗಳ ಮೂಲಕ ಅಪಾಯದ ಮುನ್ಸೂಚನೆ ನೀಡುತ್ತಿದ್ದಾರೆ.

10ಕ್ಕೂ ಅಧಿಕ ಕಡೆ ಜಾಗೃತಿ ಫ‌ಲಕ
ಕೋಡಿಯ ಜನರು ಅದೆಷ್ಟೋ ಮಂದಿಯನ್ನು ರಕ್ಷಿಸಿದ್ದಾರೆ. ಕೆಲವರ ಪ್ರಾಣ ರಕ್ಷಣೆ ಸಾಧ್ಯವಾಗದೆ ಕೈಚೆಲ್ಲಿದ್ದಾರೆ. ಹಾಗಾಗಿ ಸ್ಥಳೀಯ ಉತ್ಸಾಹಿ ಯುವಕರು, ವಿವಿಧ ಸಂಘ ಸಂಸ್ಥೆಗಳ, ದಾನಿಗಳ ಜತೆಗೂಡಿ ಕೋಡಿ ಸೀವಾಕ್‌ನಿಂದ ಹಳೆ ಅಳಿವೆ ವರೆಗೆ ಹೆಚ್ಚು ಜನ ಬರುವ ಪ್ರದೇಶಗಳನ್ನು ಗುರುತಿಸಿ 10ಕ್ಕೂ ಅಧಿಕ ಕಡೆ ಕೆಲವು ದಿನಗಳಿಂದ ಎಚ್ಚರಿಕೆ ಫಲಕ ಅಳವಡಿಸುತ್ತಿದ್ದಾರೆ. ಇದು ಇನ್ನೂ ಮುಂದುವರಿಯಲಿದೆ.

ಪ್ರವಾಸಿಗರ ಜಾಗೃತಿಗಾಗಿ
ಕಣ್ಣೆದುರೇ ಎಲ್ಲೆಲ್ಲಿಂದಲೋ ಬಂದ ಜನ ಸಮುದ್ರದ ಆಳ, ಕರಾಳದ ಅರಿವಿಲ್ಲದೇ ಬಲಿಯಾಗುತ್ತಿರುವುದು ನೋಡಿ ಬೇಸರವಾಗುತ್ತಿದೆ. ಆದ್ದರಿಂದ ಶೀÅಕ್ಷೇತ್ರ ಕೋಡಿ ಎಂಬ ಸಮಾನಮನಸ್ಕರು ಜತೆಯಾಗಿ ಪ್ರವಾಸಿಗರ ಜಾಗೃತಿಗಾಗಿ ವಿವಿಧೆಡೆ ಜಾಗೃತಿ ಫಲಕ ಅಳವಡಿಸುವ ಕಾರ್ಯ ನಡೆಸುತ್ತಿದ್ದೇವೆ. ಇದಕ್ಕೆ ದಾನಿಗಳ ಸಹಕಾರವೇ ಮುಖ್ಯ ವಿನಾ ಸರಕಾರದ ಅನುದಾನವಲ್ಲ. ನಮ್ಮ ಊರಿನಲ್ಲಿ ದುರ್ಘ‌ಟನೆಗಳು ನಡೆಯಬಾರದು ಎನ್ನುವ ಕಾಳಜಿ.
-ಅಶೋಕ್‌ ಪೂಜಾರಿ ಕೋಡಿ, ಸ್ಥಳೀಯರು

Advertisement

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next