Advertisement

139 ವರ್ಷ ಹಳೆಯ ವಿಟ್ಲ  ಶಾಲೆ ದಾಖಲೆ

06:00 AM Jun 17, 2018 | |

ವಿಟ್ಲ: ಕನ್ನಡ ಮಾಧ್ಯಮ ಸರಕಾರಿ ಶಾಲೆಗಳು ಮುಚ್ಚುತ್ತಿರುವಂತೆ 139 ವರ್ಷ ಹಳೆಯ ವಿಟ್ಲದ ಶಾಲೆ ದಾಖಲೆ ಬರೆದಿದೆ. ಇಲ್ಲಿನ 1ನೇ ತರಗತಿಗೆ ಬರೋಬ್ಬರಿ 124 ಮಕ್ಕಳು ದಾಖಲಾಗಿದ್ದಾರೆ. ಜತೆಗೆ 2ರಿಂದ 8ನೇ ತರಗತಿ ವರೆಗೆ ಈ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ದಾಖಲಾತಿ ಆಗಿದೆ. 

Advertisement

1ನೇ ತರಗತಿಗೆ 124 ಮಕ್ಕಳು
ಶುಕ್ರವಾರ ವರೆಗೆ 1ನೇ ತರಗತಿಗೆ 124 ಮಕ್ಕಳ ಸೇರ್ಪಡೆ ಆಗಿದೆ. 2ನೇ ತರಗತಿಗೆ 10, 3-12, 4-5, 5- 17, 6-49, 7-13, 8ನೇ ತರಗತಿಗೆ 16 ಮಕ್ಕಳು ಸೇರಿ ಒಟ್ಟು ಈ ವರ್ಷ 245 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಆಂಗ್ಲ ಮಾಧ್ಯಮದ 21 ಸಹಿತ ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ 953 ಆಗಿದೆ. ಪೂರ್ವ ಪ್ರಾಥಮಿಕದಲ್ಲಿ 205 ಮಕ್ಕಳು ಸೇರಿದ್ದಾರೆ. ಎಲ್‌ಕೆಜಿಗೆ 101, ಯುಕೆಜಿಗೆ 104 ಮಕ್ಕಳು ಸೇರ್ಪಡೆಗೊಂಡಿದ್ದಾರೆ. ನ್ಪೋಕನ್‌ ಇಂಗ್ಲಿಷ್‌ ತರಗತಿಗಳೂ ಇವೆ.

ಮುಖ್ಯ ಶಿಕ್ಷಕರೇ ಇಲ್ಲ!
ಈ ಶಾಲೆಯಲ್ಲಿ ಮುಖ್ಯ ಶಿಕ್ಷಕರೇ ಇಲ್ಲ. ಬಿ. ವಿಶ್ವನಾಥ ಗೌಡ ಪ್ರಭಾರ ಮುಖ್ಯೋಪಾಧ್ಯಾಯರಾಗಿದ್ದಾರೆ. ಸರಕಾರ ಒದಗಿಸಿದ ಶಿಕ್ಷಕರ ಸಂಖ್ಯೆ 15. ಈ ವರ್ಷ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಇನ್ನೂ 5 ಶಿಕ್ಷಕರ ಆವಶ್ಯಕತೆಯಿದೆ. 11 ಗೌರವ ಶಿಕ್ಷಕರಿದ್ದಾರೆ. ಪೂ. ಪ್ರಾ. ಶಿಕ್ಷಣಕ್ಕೆ ಸುಬ್ರಾಯ ಪೈ 4 ಶಿಕ್ಷಕರು ಮತ್ತು ಐವರು ಸಹಾಯಕರನ್ನು ಒದಗಿಸಿದ್ದಾರೆ.  

ದಾಖಲೆಗೆ ಪೈ-ರೈ ಕಾರಣ
ಶಾಲೆಯ ಹಳೆ ವಿದ್ಯಾರ್ಥಿ ಸುಬ್ರಾಯ ಪೈ ಭಾರತೀ ಜನಾರ್ದನ ಸೇವಾ ಟ್ರಸ್ಟ್‌ ಮೂಲಕ ಈ ಶಾಲೆಯನ್ನು ದತ್ತು ಸ್ವೀಕರಿಸಿ ಸೌಲಭ್ಯ ಕಲ್ಪಿಸಿದರು. ಹಳೆ ವಿದ್ಯಾರ್ಥಿ ಅಜಿತ್‌ ಕುಮಾರ್‌ ರೈ ಸುಪ್ರಜಿತ್‌ ಫೌಂಡೇಶನ್‌ ಮೂಲಕ ಈ ಶಾಲೆಗೆ ಅವರ ತಂದೆ ಡಾ| ಮಂಜುನಾಥ ರೈ ಮತ್ತು ತಾಯಿ ಹೇಮಾವತಿ ರೈ ಅವರ ನೆನಪಿಗಾಗಿ 1.25 ಕೋಟಿ ರೂ.ಗಳ ಮೂರು ಮಹಡಿಯ ಕಟ್ಟಡ ನೀಡಿದ್ದಾರೆ. ರೈ ಅವರ ಇಂಗ್ಲೆಂಡ್‌ ಗೆಳೆಯ ಪೀಠೊಪಕರಣ ನೀಡಿದ್ದಾರೆ.  ನಿವೃತ್ತ ಪ್ರಾಂಶುಪಾಲ ಎಂ. ಅನಂತಕೃಷ್ಣ ಹೆಬ್ಟಾರ್‌, ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ನ ಉಪಾಹಾರ, ಆರ್‌ಕೆ ಆರ್ಟ್ಸ್ ನಿರ್ದೇಶಕ ರಾಜೇಶ್‌ ವಿಟ್ಲ ಅವರಿಂದ ನಾಟ್ಯ ತರಬೇತಿ, ರಂಗ ತರಬೇತಿ ಇದೆ. ಸರಕಾರ 18 ಲಕ್ಷ ರೂ.ಗಳ ಅನುದಾನದಲ್ಲಿ ಎರಡು ಕೊಠಡಿಗಳನ್ನು ಒದಗಿಸಿದೆ.

ಸುಬ್ರಾಯ ಪೈ, ಅಜಿತ್‌ ಕುಮಾರ್‌ ರೈ, ಶಿಕ್ಷಣ ಇಲಾಖೆ ನಮ್ಮ ಶಾಲೆಗೆ ಸ್ಫೂರ್ತಿ ನೀಡಿದೆ.  ಶಿಕ್ಷಕರು ಒಂದೇ ತಂಡವಾಗಿ ಶ್ರಮಿಸುತ್ತಿದ್ದಾರೆ. ಸ್ಥಳೀಯರ ಸಹಕಾರವೂ ಸಿಕ್ಕಿದೆ. ಇದೆಲ್ಲವೂ  ಮಕ್ಕಳ ಭಾಗ್ಯ. 
ಬಿ. ವಿಶ್ವನಾಥ ಗೌಡ, ಪ್ರಭಾರ ಮುಖ್ಯೋಪಾಧ್ಯಾಯರು

Advertisement

ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next