Advertisement

Waqf Issue: ಶ್ರೀರಂಗಪಟ್ಟಣದ ಸರಕಾರಿ ಶಾಲೆ ಮೇಲೂ ವಕ್ಫ್ ವಕ್ರದೃಷ್ಟಿ!

01:51 AM Nov 04, 2024 | Team Udayavani |

ಶ್ರೀರಂಗಪಟ್ಟಣ: ರಾಜ್ಯದ ವಿವಿಧೆಡೆ ರೈತರ ಜಮೀನು, ಹಿಂದೂ ದೇಗುಲಗಳಿಗೆ ವಕ್ಫ್ ನೋಟಿಸ್‌ ಬೆನ್ನಲ್ಲೇ, ಸರಕಾರಿ ಶಾಲೆಗಳ ಜಾಗದ ಮೇಲೂ ವಕ್ರದೃಷ್ಟಿ ಬಿದ್ದಿದೆ.

Advertisement

ತಾಲೂಕಿನ ಚಂದಗಾಲು ಗ್ರಾಮದ ಸರಕಾರಿ ಶಾಲೆ ಜಾಗದ ಪಹಣಿ ಪತ್ರದಲ್ಲಿ ಖಬರಸ್ಥಾನ್‌ ಎಂದು ನಮೂದಾಗಿದ್ದು, ವಕ್ಫ್ ಆಸ್ತಿ ಎಂದು ದಾಖಲಾಗಿದೆ. ಗ್ರಾಮದ ಸರ್ವೇ ನಂ.215ರ 30 ಗುಂಟೆ ಜಮೀನು ವಕ್ಫ್ ಆಸ್ತಿ ಎಂದು ನಮೂದಾಗಿದೆ. 1943ರ ಅ. 15ರಂದು ಚಂದಗಾಲು ಶಾಲೆ ಆರಂಭಿಸಿರುವುದು ದಾಖಲೆಯಲ್ಲಿ ನಮೂದಾಗಿದೆ.

ಆದರೆ, 2014ರಲ್ಲಿ ಖಬರಸ್ಥಾನ ಎಂದು ದಾಖಲಿಸಲಾಗಿದ್ದು, ಎಂ.ಆರ್‌.ನಲ್ಲಿ (ವರ್ಗಾವಣೆ) 2014-15ರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನು ಖಂಡಿಸಿ ಗ್ರಾಮಸ್ಥರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಶ್ರೀರಂಗಪಟ್ಟಣಕ್ಕೂ ಪ್ರಥಮವಾಗಿ ವಕ್ಫ್ ಅವಾಂತರ ಕಾಲಿರಿಸಿದ್ದು, ಈ ಭಾಗದ ರೈತರಲ್ಲೂ ಆತಂಕ ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next