Advertisement
ಹಳ್ಳಿ ಬದುಕಿನ ಚಿತ್ರಣ ನೀಡುವ ಕೃತಿ “ಒಂದು ಸೇತುವೆಯ ಕಥೆ’ ಹಾಗೂ ಉರುಂಬಿ ಜಲ ವಿದ್ಯುತ್ ಯೋಜನೆಯ ವಿರುದ್ಧ ನಡೆದ ಹೋರಾಟದ ಹಾದಿಯನ್ನು ನೆನಪಿಸುವ “ಉರುಂಬಿ ಸಂರಕ್ಷಣೆಯ ಯಶಸ್ಸಿನಲ್ಲಿ’ ಎನ್ನುವ ಪುಸ್ತಕಗಳನ್ನು ಬರೆದಿರುವ ಅವರು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು.
Related Articles
Advertisement
ಲಕ್ಷಾಂತರ ರೂ. ಖರ್ಚು ಮಾಡಿ ನಡೆಸುವ ಈ ಸಾಹಿತ್ಯ ಸಮ್ಮೇಳನಗಳಿಂದ ಏನು ನಿರೀಕ್ಷೆ ಮಾಡಬಹುದು?
ಇಂದಿನ ಕಾಲಮಾನದಲ್ಲಿ ಎಲ್ಲಾ ಕಾರ್ಯಕ್ರಮಗಳು ಕೂಡ ಅದ್ದೂರಿಯಾಗಿ ನಡೆಯುತ್ತಿರುವಾಗ ಖರ್ಚಿನ ಬಗ್ಗೆ ಯೋಚಿಸುವುದಕ್ಕಿಂತ ತಮ್ಮ ಮೂಲ ಉದ್ದೇಶಗಳ ಸಫಲತೆಯಾಗಿದೆಯೇ? ಎಂಬ ಚಿಂತನೆ ಅಗತ್ಯ. ಆ ನಿಟ್ಟಿನಲ್ಲಿ ಕಾರ್ಯಕ್ರಮಗಳ ಸಂಯೋಜನೆ ಅಗತ್ಯ.
ಕನ್ನಡ ಹಾಗೂ ಇಂಗ್ಲಿಷ್ ಶಿಕ್ಷಣ ಮಾಧ್ಯಮದ ಗೊಂದಲದಲ್ಲಿರುವ ಈ ಸಂಧಿ ಕಾಲದಲ್ಲಿ ನಿಮ್ಮ ಅಭಿಪ್ರಾಯ ಏನು?
ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರಷ್ಟೇ ಸಾಧನೆ ಸಾಧ್ಯ ಎಂಬ ಭ್ರಮೆಯಲ್ಲಿದ್ದೇವೆ. ಇದು ಸರಿಯಲ್ಲ. ಕನ್ನಡ ಮಾಧ್ಯಮದೊಂದಿಗೆ ಇತರ ಭಾಷೆಗಳೊಂದಿಗಿನ ಶಿಕ್ಷಣವನ್ನು ಪಡೆಯೋಣ. ಭಾಷೆಯು ಸಂಪರ್ಕವನ್ನು ಸಾಧಿಸುವ ಮಾಧ್ಯಮವಾಗಬೇಕೇ ಹೊರತು ಕಂದಕ ಸೃಷ್ಟಿಸಬಾರದು.
ಕನ್ನಡದಲ್ಲಿ ಕಲಿತರೆ ಮಕ್ಕಳ ಭವಿಷ್ಯ ಹಾಳು ಎಂಬ ವಾದಗಳು ಖಂಡನೀಯ. ಹಾಗೆ ಹೇಳಿದರೆ ಕಳೆದ ಶತಮಾನದಿಂದೀಚೆಗೆ ಕನ್ನಡದಲ್ಲಿ ಕಲಿತ ಅದೆಷ್ಟೋ ಸಾಧಕರನ್ನು ವಿವಿಧ ಕ್ಷೇತ್ರಗಳಲ್ಲಿನ ಸಾಧನೆ ಮಾಡಿದ ಮಹನೀಯರನ್ನು ಅವಮಾನಿಸಿದಂತಲ್ಲವೇ?
ಸರಕಾರಿ ಶಾಲೆಗಳಲ್ಲಿ ಸೌಲಭ್ಯಗಳಿದ್ದರೂ ಆಕರ್ಷಣೆ ಕಳೆದುಕೊಂಡಿವೆಯಲ್ಲ..
ಸೌಲಭ್ಯಗಳೆಲ್ಲ ಇದ್ದರೂ ವಿದ್ಯಾರ್ಥಿಗಳ ಕೊರತೆಯಿಂದಾಗಿ ಶಿಕ್ಷಕರ ನೇಮಕಾತಿ ವಿಳಂಬವೋ?,ಶಿಕ್ಷಕರು ಸಾಕಷ್ಟು ಇಲ್ಲದಿದ್ದಾಗ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರ ನಿರಾಸಕ್ತಿಯೋ? ಕನ್ನಡ ಶಾಲೆ ಎಂಬ ಕೀಳರಿಮೆಯೋ? ಅಂತೂ ಕನ್ನಡ ಶಾಲೆಗಳ ಬಲವರ್ಧನೆ ಅನಿವಾರ್ಯ. ಅದಕ್ಕೆ ಪೂರಕವಾದ ಎಲ್ಲಾ ಸೌಕರ್ಯಗಳನ್ನು ಸರಕಾರ ನೀಡಲಿದೆ ಎಂಬ ಆಶಾಭಾವನೆ ಹೊಂದಿದ್ದೇನೆ.
ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಅದನ್ನು ಉತ್ತೇಜಿಸುವುದು ಹೇಗೆ?
ಶಿವರಾಮ ಕಾರಂತರ ಅಭಿಮತದಂತೆ 8 ವರ್ಷದವರೆಗೆ ಮಗು ತಾಯಿಯ ಜೊತೆ ಆಡಿಕೊಂಡಿರಬೇಕು. ತಾಯಿ, ಅಜ್ಜಿ ಹೇಳುವ ಕಥೆಗಳು ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸದ ಬಗ್ಗೆ ಜಾಗೃತವಾಗಿ ಆ ಮೂಲಕ ಓದುವ ಹವ್ಯಾಸ ಚಿಗುರೊಡೆಯುತ್ತದೆ. ಈ ಪ್ರವೃತ್ತಿ ಪೋಷಕರ ಅಧ್ಯಾಪಕರ ಸಹಕಾರ ಅಗತ್ಯ. ಪ್ರಸ್ತುತ ಎಲ್ಲಾ ವಯೋಮಾನದವರಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿ ಓದುವ ಪ್ರವೃತ್ತಿ ಕಡಿಮೆಯಾಗಿರುವುದು ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಹಿನ್ನಡೆಯಾಗಿದೆ.
ಸಾಹಿತ್ಯ ಬದುಕಿಗೆ ಹೇಗೆ ಪೂರಕ?
ಮನುಷ್ಯನ ವೃತ್ತಿ , ಪ್ರವೃತ್ತಿ, ಉದ್ಯೋಗ, ಕಾಯಕ, ಅಧ್ಯಯನ, ಅಧ್ಯಾಪನ, ಆಸಕ್ತಿ, ಕುಲಕಸುಬು, ಕೃಷಿ, ಆಚಾರ, ವಿಚಾರ, ಹಬ್ಬ ಹರಿ ದಿನಗಳಲ್ಲಿ ಸಾಹಿತ್ಯ ಅಡಕವಾಗಿರುವುದರಿಂದ ಮಾನವನ ಬದುಕು ಸಾಹಿತ್ಯಸಹಿತವಾಗಿಯೇ ಇದೆ. ಭಾರತೀಯ ಸಂಸ್ಕೃತಿ ಆಚಾರ ವಿಚಾರ ಇವೆಲ್ಲವೂ ಸಾಹಿತ್ಯದೊಂದಿಗೆ ಹಾಸುಹೊಕ್ಕಾಗಿದೆ.
-ನಾಗರಾಜ್ ಎನ್.ಕೆ.