Advertisement

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

05:56 PM Nov 13, 2024 | Team Udayavani |

ಅದೊಂದು ಪುಟ್ಟ ಊರು. ಆ ಊರಿಗೆ ಮುಕುಟದಂತಿರುವ ಪುಟ್ಟದೊಂದು ನಾ ಕಲಿತ ಸರಕಾರಿ ಶಾಲೆ. ದೊಡ್ಡ ಮಹಡಿಗಳಿಲ್ಲದಿದ್ದರೂ ಕೂಡ ಹಂಚಿನ ಕೆಳಗೆ ಕಲಿತ ಪಾಠಗಳು ಅದೆಷ್ಟೋ? ದೊಡ್ಡ ಸೌಲಭ್ಯ ಭರಿತ ಆಟದ ಮೈದಾನ ಇಲ್ಲದಿದ್ದರೂ ಕೂಡ ಸಣ್ಣದೊಂದು ಮೈದಾನದಲ್ಲಿ ಆಡಿದ ಆಟಗಳು, ಉಚಿ ತ ವಾಗಿ ಸಿಕ್ಕ ಕಡು ನೀಲಿ ಬಣ್ಣದ ಸಮವಸ್ತ್ರ ಹೊತ್ತ ಕನಸುಗಳು, ಶಿಕ್ಷಕರು ಟಸ್‌ ಪುಸ್‌ ಇಂಗ್ಲಿಷ್‌ ಹೇಳಿಕೊಡದಿದ್ದರೂ ಕೂಡ ಜೀವನ ಸಾಗಿಸಲು ಬೇಕಾದಷ್ಟು ಕಷ್ಟದ ಇಂಗ್ಲಿಷ್‌ ಹೇಳಿಕೊಟ್ಟದ್ದು ಅದೆಷ್ಟೋ?

Advertisement

ಉತ್ತಮ ಶಿಕ್ಷಕ ವೃಂದ, ಮಧ್ಯಾಹ್ನದ ಬಿಸಿಯೂಟ ಸೌಕರ್ಯ, ಕ್ಷೀರ ಭಾಗ್ಯ, ಉಚಿತ ಪುಸ್ತಕಗಳು,ಉಚಿತ ಸಮವಸ್ತ್ರ ಹೀಗೆ ಒಂದು ರೂಪಾಯಿಯೂ ಖರ್ಚಿಲ್ಲದೆ ಆ ಸರಕಾರಿ ಶಾಲೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿತ್ತು. ಆದರೆ ಇದೀಗ ಆ ಶಾಲೆಯನ್ನೇ ಮುಚ್ಚುವ ಪರಿಸ್ಥಿತಿ ಬಂದಿದೆ. ಕಾರಣವಿಷ್ಟೇ; ಆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.

ಹಾಗಾಗಿ ಈ ಶಾಲೆಗೆ ಸರಕಾರ ನೀಡುವ ಸವಲತ್ತುಗಳನ್ನು ಹಿಂಪಡೆಯುತ್ತಿದೆ. ಇದು ಕೇವಲ ನನ್ನನೂರ ಸಮಸ್ಯೆಯಲ್ಲ ಅದೆಷ್ಟೋ ಊರುಗಳಲ್ಲಿ ಸರಕಾರಿ ಶಾಲೆಗಳು ಈಗಾಗಲೇ ಮುಚ್ಚಿದೆ. ಸರಕಾರಿ ಶಾಲೆಯಲ್ಲಿ ಕಲಿತ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲೇ ಓದಿಸಬೇಕೆಂಬ ಹಠ; ಸರಕಾರಿ ಶಾಲೆಯಲ್ಲಿ ಸರಿಯಾಗಿ ವಿದ್ಯಾಭ್ಯಾಸ ಸಿಗುವುದಿಲ್ಲವೆಂಬ ಭಯ!

ಈ ಎಲ್ಲ ಕಾರಣಗಳಿಂದ ಪೋಷಕರ ಒಲವು ಖಾಸಗಿ ಶಾಲೆಯತ್ತ. ಸರಕಾರಿ ಶಾಲೆಗಳು ದಿನೇ ದಿನೇ ಉತ್ತಮವಾಗುತ್ತಿದೆ. ಅಲ್ಲದೆ ಇಂದಿಗೂ ಅದೆಷ್ಟೋ ಕಡುಬಡತನದಲ್ಲಿ ಇರುವ ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದೆ. ಈ ಸರಕಾರಿ ಶಾಲೆಗಳು. ಆದರೆ ಇಷ್ಟೆಲ್ಲ ಸೌಕರ್ಯ ಇರುವ ಶಾಲೆಗಳ ಬಗ್ಗೆ ಜನರಲ್ಲಿ ಅದ್ಯಾಕೋ ಎಲ್ಲಿಲ್ಲದ ತಾತ್ಸಾರ.

ಒಂದು ವೇಳೆ ಸರಕಾರಿ ಶಾಲೆಗಳು ತನ್ನ ಬಾಗಿಲನ್ನು ಮುಚ್ಚಿದ್ದಲ್ಲಿ ಮುಂದೆ ಶಿಕ್ಷಣದ ಬಗ್ಗೆ ಬೆಟ್ಟದಸ್ಟು ಕನಸು ಹೊತ್ತ ಬಡ ವಿದ್ಯಾರ್ಥಿಗಳ ಕಥೆ ಏನು ಎಂಬುದನ್ನು ಯೋಚಿಸುರೇ ಇಲ್ಲ. ಹೌದು ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್‌ ಶಿಕ್ಷಣ ಅಗತ್ಯ. ಆದರೆ ಇಂಗ್ಲಿಷ್‌ ಶಿಕ್ಷಣವೇ ಸಕಲವು ಆಗಿ ಸರಕಾರಿ ಶಾಲೆಗಳ ಅಳಿವಿಗೆ ಕಾರಣವಾಗದೆ ಇರಲಿ ಎಂಬುವುದು ಪ್ರತಿಯೊಬ್ಬ ನಾಗರಿಕರಲ್ಲಿ ಚಿಂತನೆ ಮೂಡುವುದ ಅಗತ್ಯ.

Advertisement

ಇಂತಹ ಯೋಚನೆ ಮತ್ತು ಯೋಜನೆಗಳಿಂದ ಮಾತ್ರ ಅಳಿವಿನಂಚಿನಲ್ಲಿರುವ ಸರಕಾರಿ ಶಾಲೆಗಳನ್ನ ಉಳಿಸಲು ಸಾಧ್ಯ. ಊರಿನಲ್ಲಿರುವ ಸರಕಾರಿ ಶಾಲೆಗಳು ನಮ್ಮ ಹೆಮ್ಮೆಯಾಗಲಿ.! ಯುವ ಜನತೆಯಾದ ನಾವು ಸರಕಾರಿ ಉಚಿತವಾಗಿ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ನಾಗರಿಕರಾಗಿ ಮುಂದಿನ ಜನತೆಗೆ ಉದಾಹರಣೆಯಾಗುವ.

-ತನುಶ್ರೀ

ಎಸ್‌ಡಿಎಂ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next