Advertisement

Mangaluru: ಮೂಡುಶೆಡ್ಡೆ; ಸರಕಾರಿ ಜಾಗದಲ್ಲಿ ಮರಗಳ ಮಾರಣ ಹೋಮ

08:36 PM Nov 06, 2024 | Team Udayavani |

ಮಂಗಳೂರು: ಮೂಡುಶೆಡ್ಡೆ ಗಾಲ್ಫ್ ಕೋರ್ಟ್‌ ಬಳಿಯ ಸರಕಾರಿ ಜಾಗದಲ್ಲಿ ಸುಮಾರು 300 ಮರಗಳ ಮಾರಣಹೋಮ ಮಾಡಲಾಗಿದೆ. ಅಕ್ರಮವಾಗಿ ಜೆಸಿಬಿ ಮೂಲಕ ಮರಗಳನ್ನು ನೆಲಸಮ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Advertisement

ಈ ಬಗ್ಗೆ ಮಾಹಿತಿ ಪಡೆದ ಎನ್‌ಇಸಿಎಫ್‌ನ ಸದಸ್ಯರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತು ಕಾರ್ಯಾಚರಣೆ ನಡೆಸಿ ಜೆಸಿಬಿ, ಹಿಟಾಚಿ ಮತ್ತು ಇತರ ಉಪಕರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸರಕಾರಿ ಜಾಗದಿಂದ ಮರಗಳನ್ನು ಕಡಿದವರ ವಿರುದ್ಧ ಸೂಕ್ತ ವಿಚಾರಣೆ ನಡೆಸಿ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸರಕಾರಿ ಜಾಗದಿಂದ ಪ್ರಭಾವಿಗಳು ಮರ ಕಡಿಯುವ ವೇಳೆ ಅರಣ್ಯ ಇಲಾಖೆ ಮೌನವಾಗಿತ್ತು. ನಾವು ದೂರು ನೀಡಿದ ಬಳಿಕ ಎಚ್ಚೆತ್ತುಕೊಂಡಿದ್ದಾರೆ. ಮರಗಳನ್ನು ಕಡಿದು ಪರಿಸರ ನಾಶಕ್ಕೆ ನಿರಂತರವಾಗಿ ಹುನ್ನಾರ ನಡೆಯುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ನಿಯಮ ರೂಪಿಸಿ ಇದಕ್ಕೆ ನಿಯಂತ್ರಣ ಹೇರಬೇಕು ಎಂದು ಪರಿಸರ ಹೋರಾಟಗಾರರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next