Advertisement
ಬಣ್ಣ ಬಣ್ಣದ ಕಾಗದಗಳನ್ನು ಬಳಸಿ ಕೊಂಡಿರುವ ವಿದ್ಯಾರ್ಥಿಗಳು ಅವುಗಳಿಂದ ಗೂಡುದೀಪಗಳನ್ನು ತಯಾರಿಸಿದ್ದಾರೆ. ಪ್ರತಿ ವರ್ಷ ತರಹೆವಾರು ಗೂಡುದೀಪ ತಯಾರಿಸುವುದನ್ನು ರೂಢಿಸಿಕೊಂಡಿದ್ದಾರೆ. ಅಧ್ಯಾಪಕರ ಸಹಕಾರ ಹಾಗೂ ಮಾರ್ಗ ದರ್ಶನದಿಂದ ವಿದ್ಯಾರ್ಥಿಗಳಲ್ಲಿ ಹುದು ಗಿರುವ ಕಲೆಗೆ ವೇದಿಕೆ ದೊರೆತಂತಾಗಿದೆ.
ಸರಕಾರದ ಸೂಚನೆಯಂತೆ ತಿಂಗಳಲ್ಲಿ ಒಂದು ಶನಿವಾರ ನೋ ಬ್ಯಾಗ್ ಡೇ ಆಚರಿಸಲಾಗುತ್ತದೆ. ಅದೇ ದಿನ ಗೂಡು ದೀಪಗಳನ್ನು ತಯಾರಿಸಲಾಗಿದೆ. ಅಲ್ಲದೆ ವಾರದಲ್ಲಿ 3 ದಿನ ಸಾಮಾಜಿಕ ಉಪಯುಕ್ತ ಉತ್ಪಾದನ ಕಾರ್ಯ ನಡೆಸಲಾಗುತ್ತದೆ. ಅಂದು ಕಸದಿಂದ ರಸ ತಯಾರಿ, ಬಿಸಾಕುವ ವಸ್ತುಗಳಿಂದ ವಿವಿಧ ಅಲಂಕಾರಿಕೆಗಳನ್ನು ವಿದ್ಯಾರ್ಥಿಗಳು ನಡೆಸುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕಿ ಮಾಲತಿ ತಿಳಿಸಿದ್ದಾರೆ.
Related Articles
Advertisement
ಪ್ರೋತ್ಸಾಹ ಮುಖ್ಯ11 ವರ್ಷಗಳ ಹಿಂದೆ ಬೋಳಾರ ಶಾಲೆಗೆ ಶಿಕ್ಷಕಿ ಯಾಗಿ ಸೇರ್ಪಡೆಗೊಂಡು ನಿರಂತರವಾಗಿ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಿ ಕೊಂಡು ಬರುತ್ತಿದ್ದೇನೆ. ಮುಖ್ಯ ಶಿಕ್ಷಕಿ ಹಾಗೂ ಇತರ ಶಿಕ್ಷಕರ ಸಹಕಾರದೊಂದಿಗೆ ಗೂಡು ದೀಪ ತಯಾರಿಸಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದಾರೆ. ಪಠ್ಯ ವಿಚಾರಗಳೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದಾಗ ವಿದ್ಯಾರ್ಥಿಗಳ ಆಸಕ್ತಿಯ ವಿಚಾರ ಬೆಳಕಿಗೆ ಬರಲಿದೆ.
-ಸುಜಾತಾ ಏಕನಾಥ್, ಸಹಶಿಕ್ಷಕಿ ಗೂಡು ದೀಪಕ್ಕೆ 35 ರೂಪಾಯಿ!
ಅಂಗಡಿಗಳಲ್ಲಿ ಭಿನ್ನ ವಿಭಿನ್ನವಾಗಿ ಗೂಡುದೀಪಗಳನ್ನು ಮಾರಾಟ ಮಾಡಲಾಗು ತ್ತಿದೆ. ಅವುಗಳ ಮೌಲ್ಯ ವಿಭಿನ್ನವಾಗಿರುತ್ತದೆ. ಆದರೆ ವಿದ್ಯಾರ್ಥಿಗಳು ತಯಾರಿಸುವ ಗೂಡು ದೀಪ ಗಳ ಮೌಲ್ಯವೂ ಕಡಿಮೆಯೆ. 1 ಗೂಡು ದೀಪ ತಯಾರಿಗೆ ತಗಲುವ ಖರ್ಚು ಕೇವಲ 35 ರೂ. ಅಲ್ಲದೆ ತಾವೇ ತಯಾರಿಸಿರುವ ಗೂಡು ದೀಪ ಎನ್ನುವ ಖುಷಿಯು ಕೂಡ ವಿದ್ಯಾರ್ಥಿಗಳಿಗೆ ಸಿಗುತ್ತದೆ. 30 ಗೂಡು ದೀಪಗಳು ತಯಾರಿ
ಬೋಳಾರ ಸರಕಾರಿ ಶಾಲೆಯಲ್ಲಿ ಒಟ್ಟು 70 ಮಕ್ಕಳಿದ್ದು ಈ ಪೈಕಿ 5, 6, 7ನೇ ತರಗತಿಯ ವಿದ್ಯಾರ್ಥಿಗಳು ಗೂಡು ದೀಪ ತಯಾರಿಸಿದ್ದಾರೆ. ಬಿಡುವಿನ ಸಮಯದಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಸಹಕಾರದೊಂದಿಗೆ ಗೂಡು ದೀಪಗಳನ್ನು ತಯಾರಿಸಿದ್ದು ಒಟ್ಟು 30 ಗೂಡು ದೀಪಗಳನ್ನು ಶಾಲೆಯಲ್ಲಿ ಅಲಂಕಾರಿಕೆಯಾಗಿ ಬಳಸಲಾಗಿದೆ. ಉಳಿದಂತೆ ಮನೆಯ ಬಳಕೆಗಾಗಿ ಮನೆಯಲ್ಲೇ ವಿದ್ಯಾರ್ಥಿಗಳು ತಯಾರಿಸುತ್ತಿದ್ದು, ವಿದ್ಯಾರ್ಥಿಗಳು, ಪೋಷಕರಲ್ಲೂ ಪರಿಸರ ಜಾಗೃತಿ ಮೂಡಿಸುವ ಕೆಲಸವಾಗಿದೆ.