Advertisement

ಅಯೋಧ್ಯೆಗೆ ಜೈನ ಅಧ್ಯಾತ್ಮ ಕೇಂದ್ರಗಳ ಮೃತ್ತಿಕೆ

09:46 AM Aug 01, 2020 | mahesh |

ಮೂಡುಬಿದಿರೆ: ಅಯೋಧ್ಯೆಯ ಶ್ರೀರಾಮ ಮಂದಿರ ಭೂಮಿಪೂಜೆಗಾಗಿ ಜೈನ ಅಧ್ಯಾತ್ಮ ಕೇಂದ್ರಗಳ ಪವಿತ್ರ ಮೃತ್ತಿಕೆಗಳನ್ನು ಮೂಡುಬಿದಿರೆ ಜೈನಮಠದ
ಸ್ವಸ್ತಿಶ್ರೀ ಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಅವರು ಸಾವಿರ ಕಂಬದ ಬಸದಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಎಂ. ಅವರಿಗೆ ಹಸ್ತಾಂತ ರಿಸಿದರು.

Advertisement

ಪವಿತ್ರ ಮೃತ್ತಿಕೆ ಹಸ್ತಾಂತರಕ್ಕೆ ಮುನ್ನ ಜೈನ ಸಿದ್ಧ ಕ್ಷೇತ್ರ ಕೈಲಾಸಗಿರಿ ಸಮ್ಮೇದ ಶಿಖರ್ಜಿ, ಗಿರಿನಾರ್‌, ಚಂಪಾಪುರಿ, ಪಾವಪುರಿ ಮತ್ತು ಮೂಡುಬಿದಿರೆ ಅತಿಶಯ
ಕ್ಷೇತ್ರ ಬಸದಿ ಸ್ಥಳದ ಪವಿತ್ರ ಮೃತ್ತಿಕೆ ಗಳನ್ನು ದೇವರ ಬಳಿ ಕಲಶದಲ್ಲಿ ಇರಿಸಿ ಸಂಕಲ್ಪ ಪ್ರಾರ್ಥನೆ ನೆರ ವೇರಿಸಲಾಯಿತು. ಧಾರ್ಮಿಕ ಸಭೆಯಲ್ಲಿ ಸಂದೇಶ ನೀಡಿದ ಸ್ವಾಮೀಜಿ, ಅಯೋಧ್ಯೆಯಲ್ಲಿ ರಾಮಮಂದಿರದ ಭೂಮಿಪೂಜೆ ನಿರ್ವಿಘ್ನವಾಗಿ ನಡೆಯಲಿ; ಆ ದಿನ ಎಲ್ಲರೂ ಶ್ರೀ ದೇವರ ಅನುಗ್ರಹ ಮತ್ತು ಶಾಂತಿ ಸೌಹಾರ್ದಕ್ಕಾಗಿ ಮನೆಯ ಹೊಸ್ತಿಲಿನಲ್ಲಿ ದೀಪ ಬೆಳಗಿ ಪ್ರಾರ್ಥನೆ ನಡೆಸಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಬಸದಿಗಳ ಮೊಕ್ತೇಸರರಾದ ಪಟ್ಣ ಶೆಟ್ಟಿ ಸುದೇಶ್‌ ಕುಮಾರ್‌, ದಿನೇಶ್‌ ಕುಮಾರ್‌, ಬಿಜೆಪಿ ಮುಖಂಡ ಕೆ.ಪಿ. ಜಗದೀಶ್‌ ಅಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ ಗೋಪಾಲ್‌ ಕುತ್ತಾರ್‌, ಮುಖಂಡರಾದ ಶರಣ್‌ ಪಂಪ್‌ವೆಲ್‌, ಎಂಸಿಎಸ್‌ ಬ್ಯಾಂಕ್‌ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್‌, ಎಂಜಿನಿಯರ್‌ ವೆಂಕಟೇಶ ಕಿಣಿ ಉಪಸ್ಥಿತರಿದ್ದರು.

ಮಂದಿರ ನಿರ್ಮಾಣಕ್ಕೆ ಜೈನ ಕಾಶಿ ಇಟ್ಟಿಗೆ
1991ರಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಪೂಜಿತ ಇಟ್ಟಿಗೆಯನ್ನು ದೇಶದ ನಾನಾ ಭಾಗಗಳಿಂದ ಕಳುಹಿಸಿದ ಸಂದರ್ಭ ಹಿಂದಿನ ಜ್ಞಾನ ಯೋಗಿ ಭಟ್ಟಾರಕರ ಉಪಸ್ಥಿತಿಯಲ್ಲಿ ಮೂಡುಬಿದಿರೆ ಸಾವಿರ ಕಂಬದ ಬಸದಿಯ ಮೂಲಕ ಕಳುಹಿಸಿ ಕೊಡಲಾಗಿತ್ತು
ಎಂದು ಎಂಜಿನಿಯರ್‌ ವೆಂಕಟೇಶ್‌ ಕಿಣಿ, ನ್ಯಾಯವಾದಿ ಬಾಹುಬಲಿ ಪ್ರಸಾದ್‌ ಸ್ಮರಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next