Advertisement

Kasaragod: ಅಯೋಧ್ಯೆಯಿಂದ ಶಬರಿಮಲೆ ತೀರ್ಥಾಟನೆ ದಾರಿ ಮಧ್ಯೆ ಕೂಡ್ಲು ನಿವಾಸಿಯ ಸಾವು

08:32 PM Oct 31, 2024 | Team Udayavani |

ಕಾಸರಗೋಡು: ಅಯೋಧ್ಯೆಯಿಂದ ಕಾಲ್ನಡೆಯಾಗಿ ಶಬರಿಮಲೆಗೆ ತೀರ್ಥಾಟನೆ ನಡೆಸುತ್ತಿದ್ದ ಕೂಡ್ಲು ಪಚ್ಚಕ್ಕಾಡಿನ ಶಿವಪ್ರಸಾದ್‌(45) ದಾರಿ ಮಧ್ಯೆ ಸಾವಿಗೀಡಾದರು. ಅ.30 ರಂದು ಬೆಳಗ್ಗೆ 7 ಗಂಟೆಗೆ ಮಧ್ಯ ಪ್ರದೇಶದ ನಿಯೋಣಿ ಜಿಲ್ಲೆಗೆ ತಲುಪಿದಾಗ ಎದೆನೋವು ಕಾಣಿಸಿಕೊಂಡಿತು.

Advertisement

ತತ್‌ಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

ಸೆ.25 ರಂದು ಶಿವಪ್ರಸಾದ್‌ ಕಾಸರಗೋಡಿನಿಂದ ಅಯ್ಯಪ್ಪ ವ್ರತಾನುಷ್ಠಾನಗಳೊಂದಿಗೆ ರೈಲಿನಲ್ಲಿ ಅಯೋಧ್ಯೆಗೆ ಹೋಗಿದ್ದರು. ಅಲ್ಲಿಂದ ಅವರು ಅಕ್ಟೋಬರ್‌ 1 ರಂದು ತಮ್ಮ ಸ್ನೇಹಿತ ಕೂಡ್ಲು ನಿವಾಸಿ ಹಾಗು ಅಯ್ಯಪ್ಪ ವ್ರತಾಧಾರಿ ಹರೀಶ್‌ ಜತೆಗೆ ಶಬರಿಮಲೆಗೆ ಕಾಲ್ನಡೆಯಾಗಿ ಪ್ರಯಾಣ ಆರಂಭಿಸಿದ್ದರು.

ಕಳೆದ 24 ವರ್ಷಗಳಿಂದ ಶಬರಿಮಲೆ ದರ್ಶನ ನಡೆಸುತ್ತಾ ಬಂದಿರುವ ಅಯ್ಯಪ್ಪ ಭಕ್ತರಾಗಿದ್ದಾರೆ. ಕಳೆದ ಮೂರು ವರ್ಷ ಪಾದಯಾತ್ರೆ ಮೂಲಕ ಶಬರಿಮಲೆ ಕ್ಷೇತ್ರ ದರ್ಶನ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next