ಅಕ್ಷಯ್ ಕುಮಾರ್ ಅವರ ‘ಬಚ್ಚನ್ ಪಾಂಡೆ’ಯಿಂದ ಕಠಿಣ ಸ್ಪರ್ಧೆಯ ಹೊರತಾಗಿಯೂ ‘ದಿ ಕಾಶ್ಮೀರ ಫೈಲ್ಸ್’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ತನ್ನ ಅದ್ಭುತ ಓಟವನ್ನು ಮುಂದುವರೆಸಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಚಿತ್ರವು ಎಲ್ಲಾ ದಾಖಲೆಗಳನ್ನು ಮುರಿದು ಕೇವಲ ಒಂದು ವಾರದಲ್ಲಿ 100 ಕೋಟಿ ರೂ. ಗಳಿಸಿದೆ. ಮಾರ್ಚ್ 18 ರಂದು ಹೋಳಿ ಹಬ್ಬದಂದು ಚಿತ್ರವು 19.15 ಕೋಟಿ ರೂಪಾಯಿಗಳನ್ನು ಗಳಿಸಿದೆ. ಮಾರ್ಚ್ 11ರಂದು ಬಿಡುಗಡೆಯಾದ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು 116.45 ಕೋಟಿಗೆ ತಲುಪಿದೆ.
ಇದನ್ನೂ ಓದಿ:ವ್ಯಾಟ್ಸಪ್ ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’; ಲಿಂಕ್ ಒತ್ತಿದರೆ ನಿಮ್ಮ ಬ್ಯಾಂಕ್ ಹಣಕ್ಕೆ ಕನ್ನ!
ದಿ ಕಾಶ್ಮೀರ್ ಫೈಲ್ಸ್ ಚಿತ್ರವು 1990 ರಲ್ಲಿ ಕಾಶ್ಮೀರಿ ದಂಗೆಯ ಸಮಯದಲ್ಲಿ ಕಾಶ್ಮೀರಿ ಹಿಂದೂಗಳ ವಲಸೆಯನ್ನು ಆಧರಿಸಿದೆ. ಚಿತ್ರದಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ನಟಿಸಿದ್ದಾರೆ.
Related Articles
ಕಡಿಮೆ ಬಜೆಟ್‌ನಲ್ಲಿ ತೆರೆಕಂಡ ‘ದಿ ಕಾಶ್ಮೀರ್ ಫೈಲ್ಸ್’ಸಿನಿಮಾ ಈಗಾಗಲೇ 100 ಕೋಟಿ ಗಡಿ ದಾಟಿದೆ. 32 ವರ್ಷಗಳ ಹಿಂದೆಯೇ ರಾಷ್ಟ್ರ ನೋಡಬೇಕಾದ ಪ್ರಜ್ಞೆಯನ್ನು ಇದು ಎದುರು ತಂದದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ‘ಕೂ’ ಮಾಡಿದ್ದಾರೆ.