Advertisement

Sabarimala; ಅರಣ್ಯ ಮಾರ್ಗದಲ್ಲಿ ಬಂದವರಿಗೆ ವಿಶೇಷ ದರ್ಶನ ಸೌಲಭ್ಯ?

12:35 AM Dec 17, 2024 | Team Udayavani |

ತಿರುವನಂತಪುರ: ಸಾಂಪ್ರದಾಯಿಕ ಅರಣ್ಯ ಮಾರ್ಗ­ವಾದ ಪುಲ್ಲುಮೇಡು ಮತ್ತು ಎರುಮೇಲಿ ಮೂಲಕ ಕಾಲ್ನಡಿಗೆಯಲ್ಲಿ ದೀರ್ಘ‌ ಪ್ರಯಾಣ ಬೆಳೆಸಿ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಬರುವ ಯಾತ್ರಿಗಳಿಗೆ ಸದ್ಯದಲ್ಲೇ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಹೇಳಿದೆ. ಈ ಯಾತ್ರಿಕರು ಪಂಪಾದಿಂದ ಸ್ವಾಮಿ ಅಯ್ಯಪ್ಪ ರಸ್ತೆ ಮೂಲಕ ಸನ್ನಿಧಾನಂ ತಲುಪಬಹುದು ಅಥವಾ ನೀಲಿಮಲೆ ಮಾರ್ಗವಾಗಿಯೂ ಬರಬಹುದು. ಮರಕ್ಕೂಟಂನಲ್ಲಿ ಈ ಟ್ಯಾಗ್‌ ಹೊಂದಿರುವವರು ಶರಂಕುಥಿ ರಸ್ತೆಯ ಬದಲಿಗೆ ಚಂದ್ರನಂದನ ರಸ್ತೆ ಮೂಲಕ ಸನ್ನಿಧಾನಂಗೆ ಪ್ರವೇಶಿಸಬಹುದು ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next