Advertisement

ವಿಷ ಬೀಜ ಬಿತ್ತುವವರ ಆಟ ನಡೆಯಲ್ಲ

01:39 PM Mar 04, 2018 | |

ಬಸವನಬಾಗೇವಾಡಿ: ಬಸವಣ್ಣನವರು ಜಾತಿರಹಿತ ನವ ಸಮಾಜ ನಿರ್ಮಾಣ ಮಾಡಿದ್ದಾರೆ. ಇಲ್ಲಿ ಯಾರೆ ಬಂದು ಜಾತಿ, ಧರ್ಮದ ವಿಷ ಬೀಜ ಬಿತ್ತಿದರು ಕೂಡಾ ಅದು ನಾಟಿಯಾಗಿ ಬೆಳೆದು ಹೆಮ್ಮರವಾಗುವ ಸಾಧ್ಯವಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದರು.

Advertisement

ತಾಲೂಕಿನ ಮಸಿಬಿನಾಳ ಗ್ರಾಮದಲ್ಲಿ ದರ್ಗಾ ಹಜರತ್‌ ಮೈಹಿಬೂಸುಬಾನಿ ಮತ್ತು ಜಾಮೀಯಾ ಮಸಜಿದ್‌ ಕಮಿಟಿ ವತಿಯಿಂದ ನಿರ್ಮಿಸಲಾದ ನೂತನ ಶಾದಿಮಹಲ್‌ ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾತದಲ್ಲಿ ಅಣ್ಣ ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿ ಜಾತಿ ರಹಿತ ಸಮಾಜ ಕಟ್ಟಿದ್ದಾರೆ. ಇಂತಹ ದೇಶದಲ್ಲಿ ಜಾತಿ ಧರ್ಮದ ಬಗ್ಗೆ ವಿಷ ಬೀಜ ಬಿತ್ತುವರ ಆಟ ನಡೆಯುವುದಿಲ್ಲ. ಆ ಆಟಕ್ಕೆ ಕಡಿವಾಣ ಹಾಕುವುದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ ಎಂದರು.

ಬಿಜೆಪಿಗೆ ಚುನಾವಣೆ ಬಂದಾಗ ಮಾತ್ರ ಹಿಂದೂಗಳು ನೆನಪಾಗುತ್ತಾರೆ. ಹಿಂದೂ ಧರ್ಮದ ಮಾತುಗಳನ್ನು ಬಳಸುತ್ತಾರೆ. ಚುನಾವಣೆ ಬಳಿಕ ಅನಂತಕುಮಾರ ಮುಂದೆ ಮುಂದೆ ಯಡಿಯೂರಪ್ಪ ಹಿಂದೆ ಹಿಂದೆ ಧರ್ಮ ಹೋಗುತ್ತದೆ ಎಂದು ಟೀಕೆ ಮಾಡಿದ ಅವರು, ಭಾರತ ದೇಶದಲ್ಲಿ ಬದುಕುವ ಪ್ರತಿಯೊಬ್ಬ ಹಿಂದು ಮುಸ್ಲಿಂರು ಒಂದೇ ತಾಯಿ ಮಕ್ಕಳ ಹಾಗೆ ಬಾಳಬೇಕು. ಅಂದಾಗ ಮಾತ್ರ ದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಾನು ಯೋಜನಾ ಆಯೋಗದ ಊಪಾಧ್ಯಕ್ಷನಾಗಿದ್ದಾಗ ಬಳಿಕ ಬಸವತತ್ವ ಆಧಾರದ ಮೇಲೆ ನಡೆದುಕೊಂಡಿದ್ದೇನೆ. ನಾನು ಮುಸ್ಲಿಂ ಧರ್ಮದಲ್ಲಿ ಜನಿಸಿದರು ಕೂಡಾ ಬಸವ ತತ್ವದ ಪ್ರತಿಪಾದಕ. ಹೀಗಾಗಿಯೇ ನಾನು ಯೋಜನಾ ಆಯೋಗದ ಅಧ್ಯಕ್ಷನಾದ ಬಳಿಕ ಮಠ, ಮಂದಿರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ 400 ರೂ. ಇದ್ದ ಭತ್ಯೆಉನ್ನು 5 ಸಾವಿರ ರೂ.ಗೆ ಏರಿಸಿದ್ದೇನೆ ಮತ್ತು ಮಠ, ಮಂದಿರಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿದ್ದೇನೆ ಎಂದರು.
 
ಬಿಜೆಪಿಯವರು ಸಂವಿಧಾನ ಬದಲು ಮಾಡಲು ಬಂದಿದ್ದೇವೆ ಎಂದು ಹೇಳುತ್ತಿರುವುದು ತಪ್ಪು. ಸಂವಿಧಾನ ಬದಲಾದರೆ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ. ನಿನ್ನ ಧರ್ಮ ಇಷ್ಟ ಪಡು ಪರ ಧರ್ಮ ಗೌರವಿಸಬೇಕು ಹೊರತು ಬೇರೆ ಧರ್ಮದ ಬಗ್ಗೆ ಅ ಗೌರವ ತೋರಬಾರದು. ಅದು ಮನುಷ್ಯನ ಧರ್ಮವೇ ಅಲ್ಲ. ಅದಕ್ಕಾಗಿಯೇ ಬಸವಣ್ಣನವರ ತತ್ವಗಳು ಅವರ ಆಚಾರ ವಿಚಾರಗಳು. ಪ್ರತಿಯೊಬ್ಬರು ಪಠಣ ಮಾಡಿದ ವ್ಯಕ್ತಿ ಬಾಯಲ್ಲಿ ಇಂತಹ ಮಾತುಗಳು ಬರುವುದಿಲ್ಲ ಎಂದು ಹೇಳಿದರು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಹಿಂದ ಮಾಡುವ ಮೊದಲು ನಾನು ಅವರಿಗೆ ಒಂದು ಸಲಹೆ ನೀಡಿದ್ದೆ. ನೀವು ಅಹಿಂದ ಸ್ಥಾಪಿಸಿ ಆದರೆ ಅದರಲ್ಲಿ ಬಸವಣ್ಣನವರ ತತ್ವ ಇರಲಿ ಎಂದು ಹೇಳಿದ್ದೆ. ನಾನು ಹೇಳಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ 5 ವರ್ಷದಿಂದ ರಾಜ್ಯದಲ್ಲಿ ಬಸವತತ್ವದ ಆಧಾರದ ಮೇಲೆ ಆಡಳಿತ ನಡೆಸುತ್ತಿದ್ದಾರೆ ಎಂದರು. 

ಪ್ರಧಾನಿ ನರೇಂದ್ರ ಮೋದಿ ಅವರು ಮನ್‌ ಕಿ ಬಾತ್‌ ಹೇಳುವ ಬದಲು ಕಾಯಕ ಮಾಡಲಿ, ಅಂದಾಗ ಮಾತ್ರ ದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ. ಕೇವಲ ಮಾತಿನಲ್ಲಿ ಹೊಟ್ಟೆ ತುಂಬಲ್ಲ. ಈ ದೇಶದ ಬೆನ್ನೆಲಬುವಾದ ರೈತರ ಸಾಲ ಮನ್ನಾ ಮಾಡಲಿ, ಅದನ್ನು ಬಿಟ್ಟು ದೇಶದ ಉದ್ಯಮಿಗಳ ಸಾಲ ಮನ್ನಾ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಯರನಾಳ ಮಠದ ಸಂಗನಬಸವ ಶ್ರೀಗಳು, ಮಸಬಿನಾಳದ ವಿರಕ್ತಮಠದ ಸಿದ್ದರಾಮ ಶ್ರೀಗಳು ಸಾನ್ನಿಧ್ಯ, ಶಾಸಕ ಶಿವಾನಂದ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕೊಲ್ಹಾರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಬಿ. ಪಕಾಲಿ, ಬಸವನಬಾಗೇವಾಡಿ ಬ್ಲಾಕ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಪಾಟೀಲ, ರಾಜುಗೌಡ ಪಾಟೀಲ, ಹನಿಫ್‌ ಮಕಾನದಾರ, ಉಸ್ಮಾನ ಪಟೇಲ್‌, ಎಸ್‌.ಎಂ. ಪಟೇಲ್‌ (ಗಣಿಯಾರ), ಎ.ಬಿ. ಪಾಟೀಲ, ಸಲೀಂ ನಾಗಠಾಣ, ಎಂ.ಸಿ. ಮುಲ್ಲಾ, ಬೀರಪ್ಪ ಸಾಸನೂರ, ಬಾಬುಗೌಡ ಪಾಟೀಲ, ಜಿ.ಎಂ. ದೊಡ್ಡಮನಿ, ಎ.ಎಂ. ಹಿಪ್ಪರಗಿ, ಬಸವರಾಜ ಸೋಮಪು, ಡಿ.ಎಂ. ಬಡಿದಾಳ, ಈರನಗೌಡ ಪಾಟೀಲ, ಎಂ.ಎಚ್‌.
ಹತ್ತರಕಿಹಾಳ, ಐ.ಎನ್‌. ಕರ್ನಾಳ, ಮೌಲಾಸಾಬ ಅತ್ತಾರ, ಶಾಂತಪ್ಪ ಬೈಚನಳ, ಬಾಬಾಗೌಡ ಪಾಟೀಲ, ದಾನಪ್ಪ ತೋಟದ, ಮೈಬೂಬಸಾಬ ಗಣಿ, ಎ.ಎಲ್‌. ಗಂಗೂರ, ಕೆ.ಸಿ. ಕಾರಜೋಳ ಇದ್ದರು. ಜಮೀರ ಸೈಯದ್‌ ಸ್ವಾಗತಿಸಿದರು. ಬಿ.ಎಸ್‌. ಅಗಸಬಾಳ ನಿರೂಪಿಸಿದರು. ದಾದಾಪಿರ್‌ ಜೌರಸಂಗ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next