ಪಡೀಲ್: ಪ್ರಯಾಣಿಕರಿಗೆ ಅನುಕೂಲವಾಗಲು ಇರುವ ನಗರದ ಬಸ್ ತಂಗುದಾಣಗಳು ಒಂದೊಂದು ಸಮಸ್ಯೆಗಳನ್ನೇ ಹೊದ್ದುಕೊಂಡಿದೆ; ಈ ಪೈಕಿ ಪಡೀಲ್‌ನಲ್ಲಿರುವ ಬಸ್ ತಂಗುದಾಣದ ಮುಂಭಾಗದಲ್ಲಿ ಪೈಪ್‌ಲೈನ್‌ನಿಂದಾಗಿ ಪ್ರಯಾಣಿಕರಿಗೆ ಸಮಸ್ಯೆ ಸೃಷ್ಟಿಸಿದೆ.
ಗ್ಯಾಸ್ ಸರಬರಾಜು ಮಾಡುವ ಪೈಪ್‌ಲೈನ್ ಅನ್ನು ಪಡೀಲ್ ರಾ. ಹೆದ್ದಾರಿ ಪಕ್ಕದಲ್ಲಿ ಜೋಡಿಸುವ ಕಾಮಗಾರಿ ಸದ್ಯ ನಡೆಯುತ್ತಿದೆ. ಪಡೀಲ್ ಜಂಕ್ಷನ್ ಸಮೀಪದಲ್ಲಿ ರಾ. ಹೆದ್ದಾರಿ ಇಲಾಖೆಯ ಬಸ್‌ತಂಗು ದಾಣದ ಮುಂಭಾಗದಿಂದಲೇ ಈ ಪೈಪ್‌ಲೈನ್ ಸಾಗುತ್ತದೆ. ಇಲ್ಲಿ ನೆಲಕ್ಕೆ ತಾಗಿಕೊಂಡಂತೆ ಇಡಬೇಕಾದ ಪೈಪ್ ಅನ್ನು ಎತ್ತರವಾಗಿ ಜೋಡಿಸಲಾಗಿದೆ. ಹೀಗಾಗಿ ಪ್ರಯಾ ಣಿಕರಿಗೆ ಬಸ್‌ತಂಗುದಾಣಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ.
ಅಡ್ಡಲಾಗಿ ಪೈಪ್ ಇಟ್ಟಿರುವ ಕಾರ ಣದಿಂದ ಮಹಿಳೆಯರು, ಹಿರಿಯರು ಬಸ್ ತಂಗುದಾಣ ಪ್ರವೇಶಿಸಲು ಕಷ್ಟಪಡುವಂತಾಗಿದೆ. ಹೀಗಾಗಿ ಮಳೆ ಬರುವಾಗ ರಸ್ತೆ ಬದಿ ಯಲ್ಲಿಯೇ ನಿಲ್ಲಬೇಕಾಗಿದೆ. ತಾತ್ಕಾಲಿಕವಾಗಿ ಮಾತ್ರ ಈಗ ಪೈಪ್‌ಲೈನ್ ಇಲ್ಲಿ ಜೋಡಿಸಲಾಗಿದೆ. ಬಳಿಕ ಇದನ್ನು ಬಸ್ ತಂಗುದಾಣಕ್ಕೆ ಯಾವುದೇ ಸಮಸ್ಯೆ ಆಗದಂತೆಯೇ ಅಳವಡಿಸಲಾಗುವುದು. ಸದ್ಯ ಪರಿಶೀಲನೆ ಕಾರ್ಯಕ್ಕೆ ಮಾತ್ರ ಇಡಲಾಗಿದೆ ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ತಾತ್ಕಾಲಿಕವಾಗಿಯೂ ಬಸ್ ತಂಗುದಾಣಕ್ಕೆ ಪ್ರಯಾಣಿಕರು ಬರಲು ಅಡ್ಡಿಯಾಗುವ ರೀತಿಯಲ್ಲಿ ಪೈಪ್ ಗಳನ್ನು ಜೊಡಿಸಿರುವುದು ಸರಿಯಲ್ಲ ಎಂಬುದು ಸ್ಥಳೀಯರ ಆಕ್ಷೇಪ.
ನಿರ್ವಹಣೆ ಇಲ್ಲದೆ ಸೊರಗುತ್ತಿದೆ ಬಸ್ ತಂಗುದಾಣ!
ರಾಷ್ಟ್ರೀಯ ಹೆದ್ದಾರಿ ಬದಿಯ ಹಲವು ಬಸ್‌ತಂಗುದಾಣವು ನಿರ್ವಹಣೆ ಕಾಣದೆ ಸೊರಗಿದೆ. ಅದರಲ್ಲಿಯೂ ಪಡೀಲ್‌ನಿಂದ ಕುಲಶೇಖರ ಭಾಗಕ್ಕೆ ತೆರಳುವಾಗ ಎರಡೂ ಬದಿಯಲ್ಲಿ ಸಿಗುವ ರಾ.ಹೆದ್ದಾರಿಗೆ ಸೇರಿದ ಬಸ್ ತಂಗುದಾಣ ಪ್ರಯಾಣಿಕ ಯೋಗ್ಯವಾಗಿಲ್ಲ. ತಂಗುದಾಣದ ಸುತ್ತ ಗಿಡ ಬಳ್ಳಿ ತುಂಬಿಕೊಂಡಿದ್ದು, ಪ್ರಯಾಣಿಕರಿಗೆ ಕಿರಿಕಿರಿ ತಪ್ಪಿದ್ದಲ್ಲ. ಜತೆಗೆ ಇಲ್ಲಿ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆಯೂ ಇಲ್ಲ. ಹೆಸರಿಗೆ ಮಾತ್ರ ಇದು ಬಸ್‌ನಿಲ್ದಾಣವಾಗಿದ್ದು, ಬಳಕೆಗೆ ಮಾತ್ರ ಅಷ್ಟಕ್ಕಷ್ಟೆ!