Advertisement

ಟೆಸ್ಟ್‌ ಸರಣಿ‌ : ಪಾಕಿಸ್ಥಾನ ಕ್ಲೀನ್‌ ಸ್ವೀಪ್‌ ಸಾಹಸ

11:05 PM Feb 08, 2021 | Team Udayavani |

ರಾವಲ್ಪಿಂಡಿ: ಹದಿನಾಲ್ಕು ವರ್ಷಗಳ ಬಳಿಕ ಪಾಕಿಸ್ಥಾನ ಪ್ರವಾಸ ಕೈಗೊಂಡು ಟೆಸ್ಟ್‌ ಸರಣಿ ಆಡಿದ ದಕ್ಷಿಣ ಆಫ್ರಿಕಾ ವೈಟ್‌ವಾಶ್‌ ಅವಮಾನಕ್ಕೆ ಸಿಲುಕಿದೆ. ದ್ವಿತೀಯ ಟೆಸ್ಟ್‌ ಪಂದ್ಯವನ್ನು 95 ರನ್ನುಗಳಿಂದ ಗೆಲ್ಲುವ ಮೂಲಕ ಪಾಕ್‌ 2-0 ಅಂತರದ ಕ್ಲೀನ್ ಸ್ವೀಪ್‌ ಸಾಧನೆಗೈದಿದೆ.

Advertisement

ಗೆಲುವಿಗೆ 370 ರನ್ನುಗಳ ಗುರಿ ಪಡೆದ ದಕ್ಷಿಣ ಆಫ್ರಿಕಾಕ್ಕೆ ಆರಂಭಕಾರ ಐಡನ್‌ ಮಾರ್ಕ್‌ರಮ್‌ ಶತಕದ ಮೂಲಕ ಆಸರೆಯಾಗಿ ನಿಂತಿದ್ದರು. ಒಂದು ಹಂತದಲ್ಲಿ ಹರಿಣಗಳ ಪಡೆ ಕೇವಲ 3 ವಿಕೆಟಿಗೆ 241 ರನ್‌ ಬಾರಿಸಿ ಮುನ್ನುಗ್ಗುತ್ತಿತ್ತು. ಆದರೆ ಹಸನ್‌ ಅಲಿ ಮತ್ತು ಶಾಹೀನ್‌ ಅಫ್ರಿದಿ ದಾಳಿಗೆ ದಿಕ್ಕು ತಪ್ಪಿ 274ಕ್ಕೆ ಸರ್ವಪತನ ಕಂಡಿತು. ಮೊದಲ ಟೆಸ್ಟ್‌ ಪಂದ್ಯವನ್ನು ಪಾಕಿಸ್ಥಾನ 7 ವಿಕೆಟ್‌ಗಳಿಂದ ಗೆದ್ದಿತ್ತು. ಇದು 2003ರ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ಥಾನ ಸಾಧಿಸಿದ ಮೊದಲ ಸರಣಿ ಗೆಲುವು.

ಮಾರ್ಕ್‌ರಮ್‌ 108 ರನ್‌ ಬಾರಿಸಿ ಹೋರಾಟವನ್ನು ಜಾರಿಯಲ್ಲಿರಿಸಿದರು (243 ಎಸೆತ, 13 ಫೋರ್‌, 3 ಸಿಕ್ಸರ್‌). ಟೆಂಬ ಬವುಮ 61 ರನ್‌ ಮಾಡಿದರು. ಆದರೆ ಉಳಿದವರಿಗೆ ಪಾಕ್‌ ಬೌಲಿಂಗ್‌ ದಾಳಿಯನ್ನು ಎದುರಿಸಿ ನಿಲ್ಲಲಾಗಲಿಲ್ಲ. ಹಸನ್‌ ಅಲಿ 60ಕ್ಕೆ 5, ಅಫ್ರಿದಿ 51ಕ್ಕೆ 4 ವಿಕೆಟ್‌ ಕಿತ್ತು ಪಾಕಿಸ್ಥಾನದ ಗೆಲುವನ್ನು ಸಾರಿದರು.
ಇತ್ತಂಡಗಳಿನ್ನು 3 ಪಂದ್ಯಗಳ ಟಿ20 ಸರಣಿಯಲ್ಲಿ ಎದುರಾಗಲಿವೆ.

ಇದನ್ನೂ ಓದಿ:ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಬಜೆಟ್ ಮಂಡನೆ, ದಿನಾಂಕ ಇನ್ನೂ ನಿರ್ಧಾರ ಮಾಡಿಲ್ಲ ‌: ಸಿಎಂ

ಸಂಕ್ಷಿಪ್ತ ಸ್ಕೋರ್‌
ಪಾಕಿಸ್ಥಾನ-272 ಮತ್ತು 298. ದಕ್ಷಿಣ ಆಫ್ರಿಕಾ-201 ಮತ್ತು 274 (ಮಾರ್ಕ್‌ರಮ್‌ 108, ಬವುಮ 61, ಡುಸೆನ್‌ 48, ಹಸನ್‌ ಅಲಿ 60ಕ್ಕೆ 5, ಅಫ್ರಿದಿ 51ಕ್ಕೆ 4).

Advertisement

ಪಂದ್ಯಶ್ರೇಷ್ಠ: ಹಸನ್‌ ಅಲಿ.

ಸರಣಿಶ್ರೇಷ್ಠ: ಮೊಹಮ್ಮದ್‌ ರಿಜ್ವಾನ್‌.

Advertisement

Udayavani is now on Telegram. Click here to join our channel and stay updated with the latest news.

Next