Advertisement

BGT Finale: ಪಂದ್ಯಕ್ಕಿಲ್ಲ ರೋಹಿತ್ ಶರ್ಮ? ಬುಮ್ರಾ ನಾಯಕತ್ವಕ್ಕೆ ಸಿದ್ಧ!

05:22 PM Jan 02, 2025 | Team Udayavani |

ಸಿಡ್ನಿ: ನಾಯಕತ್ವದ ಕುರಿತಾಗಿ ಕಟು ಟೀಕೆಗಳೊಂದಿಗೆ ಜರ್ಜರಿತರಾಗಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮ ಆಸ್ಟ್ರೇಲಿಯ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್‌ನಿಂದ ಹೊರಗುಳಿಯುವ ಊಹಾಪೋಹಗಳಿವೆ. ನಾಳೆ (ಶುಕ್ರವಾರ, ಜ3) ಪ್ರಾರಂಭವಾಗುವ ಪಂದ್ಯದಲ್ಲಿ ರೋಹಿತ್ ಅವರು ಆಡುವ ಬಗ್ಗೆ ಬಲವಾದ ಅನುಮಾನಗಳು ಮೂಡಿವೆ.

Advertisement

ರೋಹಿತ್ ಆಡುತ್ತಾರೆಯೇ ಎಂಬ ನೇರ ಪ್ರಶ್ನೆಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ರಹಸ್ಯ ಉತ್ತರವನ್ನು ನೀಡಿದ್ದು,”ಪಿಚ್ ನೋಡಿದ ನಂತರ ನಾವು ಆಡುವ 11 ರ ಬಳಗ ನಿರ್ಣಯ ಮಾಡುತ್ತೇವೆ” ಎಂದಿರುವುದು ಎಲ್ಲಾ ಊಹಾಪೋಹಗಳಿಗೆ ಕಾರಣವಾಗಿದೆ.

ಪಂದ್ಯದಿಂದ ಹೊರ ಬಿದ್ದಲ್ಲಿ ಕಳಪೆ ಫಾರ್ಮ್‌ನ ಕಾರಣಕ್ಕಾಗಿ ಕೈಬಿಡಲ್ಪಟ್ಟ ಮೊದಲ ಭಾರತೀಯ ನಾಯಕ ಎನ್ನುವ ಅಪಖ್ಯಾತಿಗೆ ರೋಹಿತ್ ಪಾತ್ರರಾಗಬೇಕಾಗುತ್ತದೆ. ಆಸೀಸ್ ಸರಣಿಯ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 31 ರನ್‌ಗಳನ್ನಷ್ಟೇ ಗಳಿಸಿ ಹೀನಾಯ ನಿರ್ವಹಣೆ ತೋರಿದ್ದಾರೆ.

ನಾಲ್ಕು ಪಂದ್ಯಗಳಲ್ಲಿ 30 ವಿಕೆಟ್‌ಗಳನ್ನು ಕಿತ್ತು ಬೆರಗುಗೊಳಿಸಿರುವ ತಂಡದ ಅಗ್ರ ಆಟಗಾರರಾಗಿರುವ ವೇಗಿ ಜಸ್ಪ್ರೀತ್ ಬುಮ್ರಾ ನಾಯಕತ್ವವನ್ನು ಆಸೀಸ್ ನಲ್ಲಿ ಮತ್ತೊಮ್ಮೆ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಬುಮ್ರಾ ಅವರ ನಾಯಕತ್ವದಲ್ಲಿ ಪರ್ತ್‌ನಲ್ಲಿ ಭಾರತ ಮೊದಲ ಟೆಸ್ಟ್ ಗೆದ್ದಿತ್ತು, ಆಬಳಿಕ ಸೋಲಿನ ಸುಳಿಗೆ ಸಿಲುಕಿದೆ. ಎರಡು ಪಂದ್ಯ ಸೋತಿರುವ ಭಾರತಕ್ಕೆ ಸರಣಿ ಸಮಬಲ ಮಾಡಿಕೊಳ್ಳಲು ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next