Advertisement

ತಿಲಕ್‌ ವರ್ಮ ಚೊಚ್ಚಲ ಶತಕ; “ಎ’ತಂಡಗಳ ಟೆಸ್ಟ್‌ ಡ್ರಾ

11:49 PM Sep 04, 2022 | Team Udayavani |

ಬೆಂಗಳೂರು: ಭಾರತ “ಎ’ ಮತ್ತು ಪ್ರವಾಸಿ ನ್ಯೂಜಿಲ್ಯಾಂಡ್‌ “ಎ’ ತಂಡಗಳ ನಡುವಿನ ಮೊದಲ ಅನಧಿಕೃತ ಟೆಸ್ಟ್‌ ಪಂದ್ಯ ಡ್ರಾಗೊಂಡಿದೆ. ತಿಲಕ್‌ ವರ್ಮ ಅವರ ಚೊಚ್ಚಲ ಪ್ರಥಮ ದರ್ಜೆ ಶತಕ ಕೊನೆಯ ದಿನದಾಟದ ಆಕರ್ಷಣೆ ಆಗಿತ್ತು. ಅವರು 121 ರನ್‌ ಹೊಡೆದರು.

Advertisement

ನ್ಯೂಜಿಲ್ಯಾಂಡ್‌ನ‌ 400 ರನ್ನುಗಳ ಮೊದಲ ಇನ್ನಿಂಗ್ಸ್‌ ಮೊತ್ತಕ್ಕೆ ಜವಾಬಾಗಿ ಭಾರತ 6 ವಿಕೆಟಿಗೆ 571 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತು. ಆತಿಥೇಯರ ಸರದಿಯಲ್ಲಿ ಒಟ್ಟು 3 ಶತಕಗಳು ದಾಖಲಾದವು. ಅಭಿಮನ್ಯು ಈಶ್ವರನ್‌ 132, ರಜತ್‌ ಪಾಟೀದಾರ್‌ 176 ರನ್‌ ಬಾರಿಸಿದರು. ಎಡಗೈ ಬ್ಯಾಟರ್‌ ತಿಲಕ್‌ ವರ್ಮ ಈ ಪಂದ್ಯಕ್ಕೂ ಮೊದಲು ಕೇವಲ 4 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದರು. ಈ ವರ್ಷದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಭರವಸೆಯ ಪ್ರದರ್ಶನ ನೀಡಿದ್ದರು.

ಪಂದ್ಯಕ್ಕೆ ಡ್ರಾ ಮುದ್ರೆ ಬೀಳುವ ವೇಳೆ ನ್ಯೂಜಿಲ್ಯಾಂಡ್‌ ದ್ವಿತೀಯ ಸರದಿಯಲ್ಲಿ 4 ವಿಕೆಟ್‌ ನಷ್ಟಕ್ಕೆ 133 ರನ್‌ ಮಾಡಿತ್ತು. ಕುಲದೀಪ್‌ ಯಾದವ್‌ 2 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next