Advertisement

Indian Air Force: ಆತ್ಮನಿರ್ಭರ ಭಾರತಕ್ಕೆ “ತೇಜಸ್‌”

09:14 PM Oct 04, 2023 | Team Udayavani |

ರಕ್ಷಣಾ ಕ್ಷೇತ್ರವನ್ನು ಆತ್ಮನಿರ್ಭರಗೊಳಿಸುವ ಕೇಂದ್ರ ಸರ್ಕಾರದ ಯೋಜನೆಗೆ ಬುಧವಾರ ಹೊಸ ಹುರುಪು ಮೂಡಿದೆ. ಬೆಂಗಳೂರಿನಲ್ಲಿರುವ ಹಿಂದುಸ್ತಾನ್‌ ಏರೋನಾಟಿಕ್ಸ್‌ ಸಂಸ್ಥೆ ಮೊದಲ ಬಾರಿಗೆ ಅವಳಿ ಸೀಟ್‌ ಇರುವ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್‌ ಅನ್ನು ಭಾರತೀಯ ವಾಯುಪಡೆ (ಐಎಎಫ್)ಗೆ ಹಸ್ತಾಂತರಿಸಲಾಗಿದೆ.

Advertisement

ವಿಶೇಷತೆ ಏನು ?
– ತೇಜಸ್‌ ಟ್ವಿನ್‌ ಸೀಟರ್‌ 4.5(ಜಿ) ಪೀಳಿಗೆಯ ವಿಶೇಷ ಯುದ್ಧವಿಮಾನ.
– ಅತ್ಯಾಧುನಿಕ ವಿಶ್ವ ದರ್ಜೆ ಸಾಮರ್ಥ್ಯ ಹೊಂದಿರುವ ಎಲ್‌ಸಿಎ ಹೊಂದಿರುವ ದೇಶ ಭಾರತ.
– ಎಂಥ ಪ್ರತಿಕೂಲ ಹವಾಮಾನದಲ್ಲೂ ಕಾರ್ಯಾಚರಣೆಗೆ ಬಳಕೆ

ಯಾವೆಲ್ಲಾ ಆಧುನಿಕ ತಂತ್ರಜ್ಞಾನವಿದೆ ?
* ಕ್ವಾಡ್ರಾಪ್ಲೆಕ್ಸ್‌ ಫ್ಲೈ ಬೈ ವೈರ್‌ ಫೈಟ್‌ ಕಂಟ್ರೋಲ್‌
*ಅತ್ಯಾಧುನಿಕ ಗ್ಲಾಸ್‌ ಕಾಕ್‌ಪಿಟ್‌ ವಿನ್ಯಾಸ
* ಸುಧಾರಿತ ಡಿಜಿಟಲ್‌ ಏವಿಯಾನಿಕ್ಸ್‌ ಸಿಸ್ಟಮ್‌
* ಏರ್‌ಫ್ರೆàಮ್‌ ಕಾಂಪೋಸಿಟ್‌ ಮಟೀರಿಯಲ್ಸ್‌

2023-24ರಲ್ಲಿ 8 ತೇಜಸ್‌
ತೇಜಸ್‌ ಅವಳಿ ಎಂಜಿನ್‌ನ ಯುದ್ಧ ವಿಮಾನಗಳ ಉತ್ಪಾದನೆಯನ್ನು ಎಚ್‌ಎಎಲ್‌ ಮಾಡಲಿದೆ. 18 ವಿಮಾನಗಳ ಪೈಕಿ ಪ್ರಸಕ್ತ ವರ್ಷವೇ 8ನ್ನು ಐಎಎಫ್ಗೆ ನೀಡಲಿದೆ. ಉಳಿದ 10ನ್ನು 2026-27ರ ವೇಳೆಗೆ ನೀಡಲಿದೆ.

123– ಒಟ್ಟು ತೇಜಸ್‌ ವಿಮಾನ ಉತ್ಪಾದನೆ
32– ಈಗಾಗಲೇ ಐಎಎಫ್ಗೆ ನೀಡಿರುವುದು

Advertisement
Advertisement

Udayavani is now on Telegram. Click here to join our channel and stay updated with the latest news.

Next