Advertisement

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

06:02 PM Dec 14, 2024 | Team Udayavani |

ಡೆಲಿವೇರಾ:ಅಮೆರಿಕದ (ಯುಎಸ್‌ಎ) ಡೆಲಿವೇರಾದಲ್ಲಿ ಹೊಯ್ಸಳ ಕನ್ನಡ ಸಂಘದ ಅಂಗ ಸಂಸ್ಥೆಯಾದ “ಯಕ್ಷಾಂಗಣ ಸಂಘ’ಕ್ಕೆ ಚಾಲನೆ ನೀಡಿ ಭಾರತೀಯ ಹಾಗೂ ವಿದೇಶೀಯ ಕಲಾವಿದರನ್ನು ರೂಪಿಸಿ ಗದಾಯುದ್ಧ ಯಕ್ಷಗಾನ ಪ್ರದರ್ಶನದ ನಡೆಯಿತು.

Advertisement

ಶ್ರೀ ದುರ್ಗಾಂಬಿಕ ಯಕ್ಷಗಾನ ಕೇಂದ್ರದ ಗುರು ಭಾಗವತ ಕರುಣಾಕರ ಆಚಾರ್ಯ ಅವರು ಭಾರತದಲ್ಲಿ ನೂರಾರು ಕಲಾವಿದರಿಗೆ ಕಲೆ ಮಾರ್ಗದರ್ಶನ ನೀಡಿದ್ದು ವಿದೇಶದಲ್ಲೂ ಗುರುತನ ಮುಂದುವರಿಸಿದರು. ಇವರಿಗೆ ವಿದೇಶದಲ್ಲಿ ವೇಷ ಭೂಷಣದಲ್ಲಿ ಸಹಕರಿಸಿದವರು ಪತ್ನಿ ಶಾಂತಾ ಕರುಣಾಕರ ಆಚಾರ್ಯ. ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.

ಭಾಗವತರಾಗಿ ಯಕ್ಷಗುರು ಕರುಣಾಕರ ಆಚಾರ್ಯ, ಸಂಗೀತದಲ್ಲಿ ಸೌಮ್ಯ ಸಂದೀಪ, ಮದ್ದಳೆಯಲ್ಲಿ ನವನೀತ್‌ ಗೋಪಿನಾಥ್‌, ಕೌರವನಾಗಿ ಶ್ರೀನಿಧಿ ಹೊಳ್ಳ , ಧರ್ಮರಾಯ- ರಾಜೇಶ್‌ ಕುಂದಾಪುರ, ಶ್ರೀ ಕೃಷ್ಣನಾಗಿ ಸಂದೀಪ್‌ ನಾರಾಯಣ್‌, ಭೀಮನಾಗಿ ಪಣಿರಾಜ್‌ ರಾವ್‌, ಅರ್ಜುನನಾಗಿ ನಂದನ್‌ ನಾಗಭೂಷಣ್‌, ಹಾಸ್ಯಗಾರನಾಗಿ ಅಶೋಕ್‌ ಕುಮಾರ್‌ ಪಾತ್ರಧಾರಿಗಳಾದರು. ಸಂಗೀತ, ಭರತನಾಟ್ಯ ವಿವಿಧ ಕಲಾವಿದರಿಂದ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next