Advertisement

Air India; ಮಂಗಳೂರು – ಅಬುಧಾಬಿ ವಿಮಾನ 12 ತಾಸು ವಿಳಂಬ!

10:07 AM Dec 18, 2024 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಪ್ರಯಾಣಿಸಬೇಕಿದ್ದ ಏರ್‌ಇಂಡಿಯಾ ವಿಮಾನ ಬರೋಬ್ಬರಿ 12 ಗಂಟೆ ತಡವಾಗಿ ತೆರಳಿದ ಘಟನೆ ಸೋಮವಾರ ಸಂಭವಿಸಿದೆ.

Advertisement

ಸೋಮವಾರ ರಾತ್ರಿ ಮಂಗಳೂರಿಗೆ ಆಗಮಿಸಲಿದ್ದ ಈ ವಿಮಾನವು ರಾತ್ರಿ 8.55ಕ್ಕೆ ಅಬುಧಾಬಿಗೆ ತೆರಳಬೇಕಿತ್ತು. ಆದರೆ ಈ ವಿಮಾನ ಮಂಗಳೂರಿಗೆ ಆಗಮಿಸುವಾಗಲೇ ತಡವಾಗಿತ್ತು. ಬಳಿಕ ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ವಿಮಾನ ನಿಗದಿತ ಸಮಯಕ್ಕೆ ಹಾರಾಟ ನಡೆಸಲಿಲ್ಲ. ಅನಂತರ ರಾತ್ರಿ 1 ಗಂಟೆ, ಮಧ್ಯರಾತ್ರಿ 3 ಗಂಟೆಗೆ ವಿಮಾನ ಹೊರಡಲಿದೆ ಎಂದು ತಿಳಿಸಿದರಾದರೂ ಆಗಲೂ ಸಂಚಾರ ನಡೆಸಲು ಸಾಧ್ಯವಾಗಿಲ್ಲ. ಅಂತಿಮವಾಗಿ ಮಂಗಳವಾರ ಬೆಳಗ್ಗೆ ಸುಮಾರು 8.45ರ ಸುಮಾರಿಗೆ ಅಬುಧಾಬಿಗೆ ತೆರಳಿತು.
ವಿಮಾನಯಾನ ವಿಳಂಬದಿಂದಾಗಿ ನಿಲ್ದಾಣದಲ್ಲಿ ಬಾಕಿಯಾಗಿದ್ದ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಯಿತು. ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿರಲಿಲ್ಲ ಎಂದು ಕೆಲವು ಪ್ರಯಾಣಿಕರು ಆರೋಪಿಸಿದರು.

ಅಬುಧಾಬಿ ವಿಮಾನ ತಡವಾದ ಕಾರಣದಿಂದ ಮಂಗಳವಾರ ಬೆಳಗ್ಗೆ ದುಬಾೖಗೆ ಹೊರಡಬೇಕಿದ್ದ ವಿಮಾನವು ತಡವಾಗಿ ಸಂಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next