ಹಲ್ಲು ಫಳಫಳ ಅಂತಿದ್ರೆ, ಮುಖಕ್ಕೂ ಒಂದು ಹೊಳಪು. ಆದರೆ, ಮುಖದ ಕಾಂತಿಗೆ ನೀಡುವಷ್ಟು ಆದ್ಯತೆಯನ್ನು ನಾವು ದಂತಪಂಕ್ತಿಗೆ ನೀಡುವುದು ಬಹಳ ಕಡಿಮೆ. ನಿಮ್ಮ ಹಲ್ಲು ಸದಾ ಚಂದ್ರನ ತುಣುಕಿನಂತೆ ಬೆಳ್ಳಗಿರಲು ಮಾಡಬೇಕಾದ್ದೇನು ಗೊತ್ತಾ?
1. ತುಸು ಬೆಚ್ಚನೆಯ ನೀರಿಗೆ ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ಮಿಕ್ಸ್ ಮಾಡಿ, 3- 4 ಸಲ ಬಾಯಿ ಮುಕ್ಕಳಿಸಬೇಕು. ಇಲ್ಲವೇ ಒಂದೆರಡು ಹನಿ ಕೊಬ್ಬರಿ ಎಣ್ಣೆಯನ್ನು ಟೂತ್‌ಬ್ರಶ್ ಮೇಲೆ ಸಿಂಪಡಿಸಿ, ಚೆನ್ನಾಗಿ ಹಲ್ಲುಜ್ಜಬೇಕು. ಇದರಿಂದ ಹಲ್ಲುಗಳು ಶುಭ್ರತೆ ಹೊಂದುವುದಲ್ಲದೇ, ಕಾಂತಿಯನ್ನೂ ಪಡೆದುಕೊಳ್ಳುತ್ತವೆ.
2.ಸೇಬಿನಿಂದ ತಯಾರಿಸಿದಂಥ ವಿನೇಗರ್‌ಗೆ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಶಕ್ತಿ ಇರುವುದರಿಂದ, ಹಲ್ಲುಗಳನ್ನು ಇದರಿಂದಲೂ ಸ್ವತ್ಛಗೊಳಿಸಬಹುದು. 5 ನಿಮಿಷದ ಬಳಿಕ ಬಾಯಿ ಮುಕ್ಕಳಿಸಿದರೆ, ದುರ್ವಾಸನೆ ದೂರವಾಗಿ, ಹಲ್ಲುಗಳು ಹೊಳಪು ಹೊಂದುತ್ತವೆ.
3.ಲಿಂಬೆಹಣ್ಣಿನ ಸಿಪ್ಪೆಗಿಂತ ಅತ್ಯುತ್ತಮ ಬ್ರಶ್ ಬೇಕೇ? ಸಿಪ್ಪೆಯಿಂದ ಹಲ್ಲನ್ನು ಸಂಪೂರ್ಣವಾಗಿ ಸ್ವತ್ಛಗೊಳಿಸಿ, 10 ನಿಮಿಷದ ನಂತರ ಬೆಚ್ಚಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ನಿತ್ಯವೂ ಈ ಅಭ್ಯಾಸ ರೂಢಿಸಿಕೊಂಡರೆ,
ಹಲ್ಲುಗಳು ಫಳಫಳ ಹೊಳೆಯುತ್ತವೆ.
4.ನೀರಿನಲ್ಲಿ ಬೇಕಿಂಗ್ ಸೋಡಾವನ್ನು ಹಾಕಿ, ಪೇಸ್ಟ್ ಮಾಡಿ, ಅದನ್ನು ಟೂತ್ ಪೇಸ್ಟ್‌ನಂತೆಯೇ ಬಳಸಬೇಕು. ಹಲ್ಲಿನ ಕಾಂತಿಯನ್ನು ಹೆಚ್ಚಿಸಲು ಇದು ಕೂಡ ಒಂದು ಸರಳ ಮಾರ್ಗ.