Advertisement

Pakistan; ನಾಯಕತ್ವ ತೊರೆದ ಬಾಬರ್ ಅಜಂ: ವೈಟ್ ಬಾಲ್ ಕಪ್ತಾನನಾಗಿ ರಿಜ್ವಾನ್

07:09 PM Oct 27, 2024 | Team Udayavani |

ಲಾಹೋರ್: ಆಸ್ಟ್ರೇಲಿಯ ಮತ್ತು ಜಿಂಬಾಬ್ವೆಯ ವೈಟ್ ಬಾಲ್ ಪ್ರವಾಸಗಳಿಗೆ ಪಾಕಿಸ್ಥಾನ ತಂಡವನ್ನು ಘೋಷಿಸಲಾಗಿದ್ದು, ಬಾಬರ್ ಅಜಮ್ ಬದಲಿಗೆ ವಿಕೆಟ್ ಕೀಪರ್-ಬ್ಯಾಟರ್ ಮುಹಮ್ಮದ್ ರಿಜ್ವಾನ್ ಅವರನ್ನು ಏಕದಿನ ಮತ್ತು ಟಿ20 ನಾಯಕರನ್ನಾಗಿ ನೇಮಿಸಲಾಗಿದೆ. ಸಲ್ಮಾನ್ ಅಲಿ ಅಘಾ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.

Advertisement

ಆಸ್ಟ್ರೇಲಿಯ ಪ್ರವಾಸದಲ್ಲಿ ಪಾಕಿಸ್ಥಾನ ಮೂರು ODI ಗಳು ಮತ್ತು ಟಿ20 ಗಳನ್ನು ಆಡಲಿದೆ. ನವೆಂಬರ್ 4 ರಂದು ಮೆಲ್ಬೋರ್ನ್‌ನಲ್ಲಿ ಮೊದಲ ಪಂದ್ಯ ನಡೆಯಲಿದ್ದು ನಾಯಕನಾಗಿ ರಿಜ್ವಾನ್‌ನ ತಂಡ ಮುನ್ನಡೆಸಲಿದ್ದಾರೆ.

ನವೆಂಬರ್ 24 ರಿಂದ ಡಿಸೆಂಬರ್ 5 ರವರೆಗೆ ಜಿಂಬಾಬ್ವೆ ಪ್ರವಾಸದಲ್ಲಿ ಮೂರು ODIಗಳು ಮತ್ತು ಮೂರು ಟಿ20 ಆಡಲಿದ್ದು, ಮೊದಲ ಪಂದ್ಯ ಬುಲವಾಯೊದಲ್ಲಿ ಆಡಲಾಗುತ್ತದೆ.

ಮಾಜಿ ನಾಯಕ ಬಾಬರ್ ಅಜಂ, ವೇಗಿಗಳಾದ ಶಾಹೀನ್ ಶಾ ಆಫ್ರಿದಿ ಮತ್ತು ನಸೀಮ್ ಶಾ ಅವರು ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್‌ಗಳಿಂದ ಹೊರಗುಳಿದ ನಂತರ ಆಸ್ಟ್ರೇಲಿಯ ಪ್ರವಾಸಕ್ಕಾಗಿ ತಂಡಕ್ಕೆ ಮರಳಿದ್ದಾರೆ. ಆದರೆ, ಜಿಂಬಾಬ್ವೆ ಪ್ರವಾಸಕ್ಕೆ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಹಲವು ಹೊಸ ಮುಖಗಳನ್ನು ತಂಡಕ್ಕೆ ಸೇರಿಸಲಾಗಿದ್ದು, ಹಿರಿಯ ಆಟಗಾರರಾದ ಫಖರ್ ಜಮಾನ್ ಮತ್ತು ಶಾದಾಬ್ ಖಾನ್ ಆಯ್ಕೆಯಿಂದ ವಂಚಿತರಾಗಿದ್ದಾರೆ. ಇಂಗ್ಲೆಂಡ್ ಟೆಸ್ಟ್‌ಗೆ ಆಯ್ಕೆಗಾರರು ಬಾಬರ್ ಅವರನ್ನು  ಕೈಬಿಡುವ ಮೊದಲು  ಬೆಂಬಲಿಸಿ ಟ್ವೀಟ್ ಮಾಡಿದ್ದಕ್ಕಾಗಿ ಫಖರ್ ಅವರು ಪಾಕಿಸ್ಥಾನ ಕ್ರಿಕೆಟ್ ಮಂಡಳಿಯಿಂದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

Advertisement

ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ”ಬಾಬರ್ ಅಜಂ ಅವರು ನಾಯಕರಾಗಿ ಮುಂದುವರಿಯಲು ಬಯಸಲಿಲ್ಲ. ಯಾರೂ ಅವರನ್ನು ನಾಯಕತ್ವಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಿಲ್ಲ” ಎಂದು ಹೇಳಿದ್ದಾರೆ.

“ಬಾಬರ್ ಒಂದು ಆಸ್ತಿ. ಅವರು ನನ್ನೊಂದಿಗೆ ಮಾತನಾಡಿ, ನಾಯಕನಾಗಿ ಮುಂದುವರಿಯಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಯಾರೂ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಇದು ಅವರ ವೈಯಕ್ತಿಕ ನಿರ್ಧಾರ. ರಾಜೀನಾಮೆ ನೀಡುವ ಮುನ್ನ ಸಲಹೆ ಕೇಳಿದ್ದರು. ಅವರು ತಮ್ಮ ಬ್ಯಾಟಿಂಗ್ ಮೇಲೆ ಕೇಂದ್ರೀಕರಿಸಲು ಬಯಸುತ್ತಾರೆ” ಎಂದು ಹೇಳಿದರು.

ಆಸ್ಟ್ರೇಲಿಯ ಪ್ರವಾಸ ಏಕದಿನ ತಂಡ: ಮೊಹಮ್ಮದ್ ರಿಜ್ವಾನ್ (ನಾಯಕ), ಸಲ್ಮಾನ್ ಅಲಿ ಅಘಾ (ಉಪನಾಯಕ), ಅಮೀರ್ ಜಮಾಲ್, ಅಬ್ದುಲ್ಲಾ ಶಫೀಕ್, ಅರಾಫತ್ ಮಿನ್ಹಾಸ್, ಬಾಬರ್ ಅಜಮ್, ಫೈಸಲ್ ಅಕ್ರಮ್, ಹ್ಯಾರಿಸ್ ರೌಫ್, ಹಸೀಬುಲ್ಲಾ (ವಿಕೆಟ್ ಕೀಪರ್), ಕಮ್ರಾನ್ ಗುಲಾಮ್, ಮೊಹಮ್ಮದ್ ಹಸ್ನೈನ್, ಮುಹಮ್ಮದ್ ಇರ್ಫಾನ್ ಖಾನ್, ನಸೀಮ್ ಶಾ, ಸೈಮ್ ಅಯೂಬ್, ಶಾಹೀನ್ ಶಾ ಅಫ್ರಿದಿ.

 ಟಿ20 ತಂಡ: ಮೊಹಮ್ಮದ್ ರಿಜ್ವಾನ್ (ನಾಯಕ), ಸಲ್ಮಾನ್ ಅಲಿ ಅಘಾ (ಉಪನಾಯಕ), ಅರಾಫತ್ ಮಿನ್ಹಾಸ್, ಬಾಬರ್ ಅಜಮ್, ಹ್ಯಾರಿಸ್ ರೌಫ್, ಹಸೀಬುಲ್ಲಾ (ವಿಕೆಟ್ ಕೀಪರ್), ಜಹಂದಾದ್ ಖಾನ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮುಹಮ್ಮದ್ ಇರ್ಫಾನ್ ಖಾನ್, ನಸೀಮ್ ಶಾ, ಒಮೈರ್ ಬಿನ್ ಯೂಸುಫ್, ಸಾಹಿಬ್ಜಾದಾ ಫರ್ಹಾನ್, ಶಾಹೀನ್ ಶಾ ಆಫ್ರಿದಿ, ಸುಫ್ಯಾನ್ ಮೊಕಿಮ್, ಉಸ್ಮಾನ್ ಖಾನ್.

ಜಿಂಬಾಬ್ವೆ ಪ್ರವಾಸಕ್ಕೆ ಏಕದಿನ ತಂಡ: ಮೊಹಮ್ಮದ್ ರಿಜ್ವಾನ್ (ನಾಯಕ), ಸಲ್ಮಾನ್ ಅಲಿ ಅಘಾ (ಉಪನಾಯಕ), ಅಮೀರ್ ಜಮಾಲ್, ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹ್ಮದ್, ಅಹ್ಮದ್ ದಾನಿಯಾಲ್, ಫೈಸಲ್ ಅಕ್ರಮ್, ಹ್ಯಾರಿಸ್ ರೌಫ್, ಹಸೀಬುಲ್ಲಾ (ವಿಕೆಟ್ ಕೀಪರ್), ಕಮ್ರಾನ್ ಗುಲಾಮ್, ಮೊಹಮ್ಮದ್ ಮುಹಮ್ಮದ್ ಇರ್ಫಾನ್ ಖಾನ್, ಸೈಮ್ ಅಯೂಬ್, ಶಾನವಾಜ್ ದಹಾನಿ ಮತ್ತು ತಯ್ಯಬ್ ತಾಹಿರ್.

 ಟಿ20 ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಹ್ಮದ್ ದನಿಯಾಲ್, ಅರಾಫತ್ ಮಿನ್ಹಾಸ್, ಹ್ಯಾರಿಸ್ ರೌಫ್, ಹಸೀಬುಲ್ಲಾ (ವಿಕೆಟ್ ಕೀಪರ್), ಜಹಾಂದದ್ ಖಾನ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಹಸನೈನ್, ಮುಹಮ್ಮದ್ ಇರ್ಫಾನ್ ಖಾನ್, ಒಮೈರ್ ಬಿನ್ ಯೂಸುಫ್, ಕ್ವಾಸ್ಹಿಮ್ ಯೂಸುಫ್ , ಸುಫ್ಯಾನ್ ಮೊಕಿಮ್, ತಯ್ಯಬ್ ತಾಹಿರ್ ಮತ್ತು ಉಸ್ಮಾನ್ ಖಾನ್.

Advertisement

Udayavani is now on Telegram. Click here to join our channel and stay updated with the latest news.

Next