Advertisement

Shirva: ಹಿಂದೂ ಜೂನಿಯರ್‌ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ

07:51 PM Nov 18, 2024 | Team Udayavani |

ಶಿರ್ವ: ಇಲ್ಲಿನ ಹಿಂದೂ ಜೂನಿಯರ್‌ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ದಶಮಾನೋತ್ಸವ ಕಾರ್ಯಕ್ರಮ ಡಿ. 29ರಂದು ನಡೆಯಲಿದ್ದು, ಪೂರ್ವಭಾವಿಯಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಮಾಲೋಚನಾ ಸಭೆಯು ನ.17 ರಂದು ದುಬೈಯ ಕರಾಮದ ಪ್ರಸಿಡೆಂಟ್‌ ಹೊಟೇಲ್‌ನ ಸಭಾಂಗಣದಲ್ಲಿ ನಡೆಯಿತು.

Advertisement

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿವಾಸಿ ಭಾರತೀಯ ಉದ್ಯಮಿ ಸರ್ವೋತ್ತಮ ಶೆಟ್ಟಿ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಇದೊಂದು ಮಾದರಿ ಹಳೆ ವಿದ್ಯಾರ್ಥಿ ಸಂಘವಾಗಿದ್ದು, ಎಲ್ಲರಿಗೂ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಘದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ನಿವೃತ್ತ ಪ್ರಾಂಶುಪಾಲ ರಾಜಗೋಪಾಲ್‌ .ಕೆ ಮಾತನಾಡಿ ಹಳೆ ವಿದ್ಯಾರ್ಥಿ ಸಂಘವು ಸಂಸ್ಥೆಗೆ ಕೊಡಮಾಡುವ ಶಾಶ್ವತ ಕೊಡುಗೆಗಳಿಗೆ ಅನಿವಾಸಿ ಹಳೆ ವಿದ್ಯಾರ್ಥಿಗಳು ಆರ್ಥಿಕ ಸಹಕಾರ ನೀಡುವಂತೆ ಮನವಿ ಮಾಡಿ ಹಳೆ ವಿದ್ಯಾರ್ಥಿಗಳು ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿಸಿದರು.

ದಶಮಾನೋತ್ಸವ ಸಮಿತಿಯ ಸಂಚಾಲಕ ಖಾಂದೇಶ್‌ ಭಾಸ್ಕರ ಶೆಟ್ಟಿ ಮಾತನಾಡಿದರು. ಸಂಘದ ದುಬೈ ಸಂಚಾಲಕ ಕೋಡು ದಿವಾಕರ ಶೆಟ್ಟಿ ಹಾಗೂ ಹಳೆ ವಿದ್ಯಾರ್ಥಿಗಳಾದ ರೊನಾಲ್ಡ್‌ ಅಂದ್ರಾದೆ ಮತ್ತು ಶಿರ್ವ ನಡಿಬೆಟ್ಟು ಸಂಗೀತಾ ಶೆಟ್ಟಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

Advertisement

ಸಂಘದ ಗೌರವ ಸಲಹೆಗಾರ ಕುತ್ಯಾರು ಕಿಶೋರ್‌ ಶೆಟ್ಟಿ ದುಬೈನಲ್ಲಿ ನಡೆದ ಸಮಾಲೋಚನಾ ಸಭೆ ನಡೆಸಲು ಉಚಿತವಾಗಿ ವ್ಯವಸ್ಥೆ ಕಲ್ಪಿಸಿದ ಪೆನಿನ್ಸುಲಾ ಗ್ರೂಪ ಆಫ್‌ ಹೊಟೇಲ್ಸ್‌ನ ಮಾಲಕರಾದ ಕರುಣಾಕರ ಶೆಟ್ಟಿ ಮತ್ತು ಸತೀಶ್‌ ಶೆಟ್ಟಿ ಸಹೋದರರ ಉಪಕಾರ ಸ್ಮರಣೆ ಮಾಡಿದರು. ಸ್ಮರಣ ಸಂಚಿಕೆ ಸಮಿತಿಯ ಪ್ರಧಾನ ಸಂಪಾದಕ ಕುತ್ಯಾರು ಪ್ರಸಾದ್‌ ಶೆಟ್ಟಿ ಪ್ರಸ್ತಾವನೆಗೈದರು.ಅಧ್ಯಕ್ಷತೆ ವಹಿಸಿದ್ದ ಹಳೆವಿದ್ಯಾರ್ಥಿಸಂಘದ ಅಧ್ಯಕ್ಷ ರಮಾನಂದ ಶೆಟ್ಟಿ ಗಾರ್‌ ಸ್ವಾಗತಿಸಿದರು. ಸುಜಯ ಶೆಟ್ಟಿ ಶಿರ್ವ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next