Advertisement
2023ರ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳನ್ನು ಒಟ್ಟು 74.32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಿ, ಶೇ. 90ರಷ್ಟು ಪ್ರಗತಿ ಸಾಧಿಸಲಾಗಿತ್ತು. ಈ ಬಾರಿಯ ಮುಂಗಾರು ವೇಳೆ 81.53 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆಯಾಗಿ ಶೇ. 99ರಷ್ಟು ಪ್ರಗತಿ ಆಗಿದೆ. ಅಂದರೆ ಈ ಬಾರಿ ಅಂದಾಜು ಸರಾಸರಿ ಶೇ. 9ರಷ್ಟು ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ಅಕ್ಟೋಬರ್ನಲ್ಲಿ ಮಳೆಯಿಂದ ಸ್ವಲ್ಪ ಹಾನಿ ಬಿಟ್ಟರೆ ಈ ಬಾರಿ ಭರಪೂರ ಇಳುವರಿ ಬಂದಿದೆ.
Related Articles
ಕಳೆದ ವರ್ಷ ಪೂರ್ವ ಮುಂಗಾರು ಮಳೆ (ಮಾ. 1ರಿಂದ ಮೇ 31) ಅವಧಿಯಲ್ಲಿ 115 ಮಿ.ಮೀ.ಗೆ ವಾಡಿಕೆಯ ಮಳೆಗೆ ಪ್ರತಿಯಾಗಿ 116 ಮಿ.ಮೀ. ಮಳೆ ಸುರಿದು ಶೇ. 1ರಷ್ಟು ಮಳೆ ಹೆಚ್ಚಾಗಿತ್ತು. ಮುಂಗಾರು ಮಳೆ (ಜೂ. 1ರಿಂದ ಸೆ.30) ಅವಧಿಯಲ್ಲಿ 852 ಮಿ.ಮೀ. ವಾಡಿಕೆ ಮಳೆಗೆ ಪ್ರತಿಯಾಗಿ 642 ಮಿ.ಮೀ. ಮಳೆ ಸುರಿದು ಶೇ. 25ರಷ್ಟು ಮಳೆ ಕೊರತೆಯಾಗಿತ್ತು. ಒಟ್ಟು ಮಳೆ (ಜ. 1ರಿಂದ ಸೆ. 30ರ ವರೆಗೆ) ವಾಡಿಕೆಯ 971 ಮಿ.ಮೀ. ಮಳೆಗೆ ಪ್ರತಿಯಾಗಿ ಸರಾಸರಿ 758 ಮಿ.ಮೀ. ಮಳೆ ಸುರಿದು ಶೇ. 22ರಷ್ಟು ಮಳೆ ಕೊರತೆಯಾಗಿತ್ತು.
Advertisement
ಈ ಬಾರಿ ಪೂರ್ವ ಮುಂಗಾರು ಮಳೆ (ಮಾ. 1ರಿಂದ ಮೇ 31ರ ವರೆಗೆ) 115 ಮಿ.ಮೀ.ಗೆ ವಾಡಿಕೆ ಮಳೆಗೆ ಪ್ರತಿಯಾಗಿ 151 ಮಿ.ಮೀ. ಮಳೆ ಸುರಿದು ಶೇ. 31ರಷ್ಟು ಹೆಚ್ಚು ಮಳೆಯಾಗಿದೆ. ಮುಂಗಾರು ಅವಧಿಯಲ್ಲಿ (ಜೂ. 1ರಿಂದ ಸೆ. 30ರ ವರೆಗೆ) 852 ಮಿ.ಮೀ.ಗೆ ವಾಡಿಕೆ ಮಳೆಗೆ ಪ್ರತಿಯಾಗಿ ಸರಾಸರಿ 977 ಮಿ.ಮೀ. ಮಳೆ ಸುರಿದಿದ್ದು, ಶೇ. 15ರಷ್ಟು ಹೆಚ್ಚು ಮಳೆಯಾಗಿದೆ. ಮಳೆ ಹೆಚ್ಚಳದಿಂದಾಗಿ ಬಿತ್ತನೆ ಪ್ರದೇಶದ ಜತೆಗೆ ಇಳುವರಿಯೂ ಹೆಚ್ಚಾಗಿರುವುದರಿಂದ ಅನ್ನದಾತರ ಅನ್ನದ ಬಟ್ಟಲು ಸಮೃದ್ಧವಾದಂತಾಗಿದೆ. ಗುರಿ ಮೀರಿದ ಬಿತ್ತನೆ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಗುರಿ ಮೀರಿ ಬಿತ್ತನೆಯಾಗಿದ್ದು, ಗುರಿ ಮೀರಿ ಸಾಧನೆ ಮಾಡಲಾಗಿದೆ. ಬಾಗಲಕೋಟೆ (ಶೇ.108), ಬೆಂಗಳೂರು ಗ್ರಾಮಾಂತರ (ಶೇ.107), ಬೆಂಗಳೂರು ನಗರ (ಶೇ.114), ಬೀದರ್ (ಶೇ.109), ಚಿತ್ರದುರ್ಗ (ಶೇ.104), ದಾವಣಗೆರೆ (ಶೇ.104), ಧಾರವಾಡ (ಶೇ.112), ಗದಗ (ಶೇ.119), ಹಾಸನ (ಶೇ.107), ಕಲಬುರಗಿ (ಶೇ.112), ಕೊಪ್ಪಳ (ಶೇ.107), ಮಂಡ್ಯ (ಶೇ.106), ಮೈಸೂರು (ಶೇ.102), ರಾಯಚೂರು (ಶೇ.117), ತುಮಕೂರು (ಶೇ.107), ವಿಜಯನಗರ (ಶೇ.101), ವಿಜಯಪುರ (ಶೇ.118), ಯಾದಗಿರಿ (ಶೇ.106) ಬಿತ್ತನೆಯಾಗಿದೆ. ಈ ಬಾರಿ ಉತ್ತಮ ಮಳೆಯಾಗಿ ಎಲ್ಲೆಡೆ ಉತ್ತಮ ಇಳುವರಿ ಬಂದಿದೆ. ದಾವಣಗೆರೆ ಜಿÇÉೆಯಲ್ಲೂ ಭತ್ತ, ರಾಗಿ, ಮೆಕ್ಕೆಜೋಳದ ಇಳುವರಿ ಹೆಚ್ಚಾಗಿದೆ. ಭತ್ತ ಎಕ್ರೆಗೆ 25-30 ಕ್ವಿಂಟಾಲ್ ವರೆಗೂ ಇಳುವರಿ ಬಂದಿದೆ.
-ಶ್ರೀನಿವಾಸ್ ಚಿಂತಾಲ…, ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಬಹುತೇಕ ಎಲ್ಲ ಬೆಳೆಗಳ ಇಳುವರಿ ಚೆನ್ನಾಗಿ ಬಂದಿದೆ. ಸರಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕೃಷಿ ಉತ್ಪನ್ನದ ಲಾಭ ಮಧ್ಯವರ್ತಿಗಳ ಪಾಲಾಗದೆ ರೈತರಿಗೆ ಲಭಿಸುವಂತಾಗಬೇಕು.
– ಹನುಮಂತಗೌಡ ಗಾಜೀಗೌಡ್ರ, ಕನಕಾಪುರದ ರೈತ ಮುಂಗಾರಿನಲ್ಲಿ 50ರಿಂದ 1 ಲಕ್ಷ ಟನ್ ಉತ್ಪಾದನೆ ಹೆಚ್ಚಳ 81.53 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆಯಾಗಿ ಶೇ. 99ರಷ್ಟು ಪ್ರಗತಿ ವರುಣನ ಕೃಪೆಯಿಂದ ಶೇ. 9ರಷ್ಟು ಬಿತ್ತನೆ ಪ್ರದೇಶವೂ ವಿಸ್ತಾರ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು *ಎಚ್.ಕೆ. ನಟರಾಜ