Advertisement
ವೆಸ್ಟ್ ಇಂಡೀಸ್ ಅಜೇಯ ಓಟವೆಸ್ಟ್ ಇಂಡೀಸ್ ಮೊದಲೆರಡು ವಿಶ್ವಕಪ್ ಎತ್ತಿ ಹಿಡಿದಾಗ ಯಾವ ಪಂದ್ಯವನ್ನೂ ಸೋತಿರಲಿಲ್ಲ. ಕ್ಲೈವ್ ಲಾಯ್ಡ ಪಡೆಯದ್ದು ಅಜೇಯ ಅಭಿಯಾನವಾಗಿತ್ತು. ಲೀಗ್ ಹಂತದಲ್ಲಿ ಒಟ್ಟು 6, ಬಳಿಕ ಸೆಮಿಫೈನಲ್ ಹಾಗೂ ಫೈನಲ್… ಹೀಗೆ ಸತತ 8 ಪಂದ್ಯಗಳನ್ನು ಗೆದ್ದು ವಿಂಡೀಸ್ ಚಾಂಪಿಯನ್ ಆಗಿ ಮೆರೆದಿತ್ತು.
1975 ಮತ್ತು 1979ರಲ್ಲಿ ವೆಸ್ಟ್ ಇಂಡೀಸ್‌ನ ಅಜೇಯ ಅಭಿಯಾನದ ಬಳಿಕ ಶ್ರೀಲಂಕಾದ ಸರದಿ. ಅರ್ಜುನ ರಣತುಂಗ ಸಾರಥ್ಯದ ಲಂಕಾ ಪಡೆ 1996ರಲ್ಲಿ ಚಾಂಪಿಯನ್ ಆಗಿ ಮೂಡಿಬರುವ ಹಾದಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ. ಲೀಗ್ ಹಂತದ ಎಲ್ಲ 5 ಪಂದ್ಯಗಳಲ್ಲೂ ಲಂಕಾ ಅಜೇಯವಾಗಿತ್ತು. ಇಲ್ಲಿ ಆಸ್ಟ್ರೇಲಿಯ ಮತ್ತು ವೆಸ್ಟ್ ಇಂಡೀಸ್ ಲಂಕೆಗೆ ಹೋಗದೆ ಪಂದ್ಯವನ್ನು ಬಿಟ್ಟು ಕೊಟ್ಟಿದ್ದನ್ನು ಉಲ್ಲೇಖಿಸಬೇಕು. ಬಳಿಕ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್‌ನಲ್ಲೂ ಲಂಕೆಗೆ ಲಗಾಮು ತೊಡಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಅದು ಸತತ 8 ಪಂದ್ಯ ಗೆದ್ದು ವಿಶ್ವ ಚಾಂಪಿಯನ್ ಎನಿಸಿತು.
Related Articles
ಆಸ್ಟ್ರೇಲಿಯದ್ದು ಇವೆಲ್ಲಕ್ಕಿಂತ ಮಿಗಿಲಾದ ಸಾಧನೆ. ಅದು 2003 ಮತ್ತು 2007ರಲ್ಲಿ, ಸತತ 11 ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿ ಟ್ರೋಫಿ ಎತ್ತಿ¤ತ್ತು. ಇದು ಇಂದಿಗೂ ದಾಖಲೆಯಾಗಿ ಉಳಿದಿದೆ. ಈ ಎರಡೂ ಸಂದರ್ಭಗಳಲ್ಲಿ ರಿಕಿ ಪಾಂಟಿಂಗ್ ಆಸೀಸ್ ನಾಯಕರಾಗಿದ್ದರು.
2003ರ ಗ್ರೂಪ್ ಹಂತದ ಎಲ್ಲ 6 ಪಂದ್ಯಗಳನ್ನೂ ಪಾಂಟಿಂಗ್ ಪಡೆ ಜಯಿಸಿತ್ತು. ಬಳಿಕ ಸೂಪರ್ ಸಿಕ್ಸ್ ಹಂತದ ಮೂರರಲ್ಲೂ ಎದುರಾಳಿಗೆ ಸೋಲಿನ ರುಚಿ ತೋರಿಸಿತು. ಅನಂತರ ಸೆಮಿಫೈನಲ್ ಮತ್ತು ಫೈನಲ್ ಜಯಭೇರಿ.
Advertisement
2007ರಲ್ಲಿ ಮತ್ತೆ ಪಾಂಟಿಂಗ್ ಪಡೆ ಯದ್ದು ಸೋಲರಿಯದ ಸಾಧನೆ. ಗ್ರೂಪ್ ಹಂತದಲ್ಲಿ ಮೂರಕ್ಕೆ ಮೂರು, ಸೂಪರ್-8 ಹಂತದಲ್ಲಿ ಎಲ್ಲ 6, ಸೆಮಿಫೈನಲ್ ಮತ್ತು ಫೈನಲ್ ವಿಜಯೋತ್ಸವ.
ಪಾಂಟಿಂಗ್ ಅಸಾಮಾನ್ಯ ಸಾಧನೆನಾಯಕನಾಗಿ ರಿಕಿ ಪಾಂಟಿಂಗ್ ಅವರದು ಅಸಾಮಾನ್ಯ ಸಾಧನೆ. ತನ್ನ ನಾಯಕತ್ವದ ಮೊದಲೆರಡು ವಿಶ್ವಕಪ್ ಕೂಟದಲ್ಲಿ ಸೋಲನ್ನೇ ಕಾಣದೆ, ಸರ್ವಾಧಿಕ 22 ಪಂದ್ಯಗಳನ್ನು ಗೆದ್ದು, ಸತತ 2 ಸಲ ತಂಡವನ್ನು ಚಾಂಪಿ ಯನ್ ಪಟ್ಟಕ್ಕೆ ಏರಿಸಿದ ಏಕೈಕ ನಾಯಕನೆಂಬ ಹಿರಿಮೆಗೆ ಭಾಜನ ರಾಗಿದ್ದಾರೆ. 2011ರಲ್ಲಿ ಪಾಂಟಿಂಗ್ ವಿಫಲರಾಗಿರಬಹುದು, ಆದರೆ ಇವರ 22 ಪಂದ್ಯಗಳ ಅಜೇಯ ಗೆಲುವಿನ ದಾಖಲೆಯನ್ನು ಮುರಿಯುವುದು ಸುಲಭವಲ್ಲ.