Advertisement

PM Modi; ವಿಕಸಿತ ಭಾರತಕ್ಕೆ 11 ನಿರ್ಣಯ: ಇಲ್ಲಿದೆ ಪಟ್ಟಿ

12:58 AM Dec 15, 2024 | Team Udayavani |

ವಿಕಸಿತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸಲು 11 ನಿರ್ಣಯಗಳನ್ನು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಪ್ರಸ್ತಾವಿಸಿದ್ದಾರೆ. ಅವೆಂದರೆ,

Advertisement

ಕರ್ತವ್ಯ ಪಾಲನೆ: ರಾಷ್ಟ್ರ ನಿರ್ಮಾಣಕ್ಕಾಗಿ ದೇಶದ ಪ್ರತೀ ಪ್ರಜೆ ಹಾಗೂ ಸರಕಾರದಿಂದ ಕರ್ತವ್ಯ ಪಾಲನೆ

ಸಬ್‌ ಕಾ ಸಾಥ್‌-ಸಬ್‌ ಕಾ ವಿಕಾಸ್‌: ಅಭಿವೃದ್ಧಿಯು ದೇಶದ ಪ್ರತಿಯೊಂದು ವರ್ಗವನ್ನೂ ತಲುಪುತ್ತಿದೆ ಎಂಬುದರ ಖಾತರಿ

ಭ್ರಷ್ಟಾಚಾರ ವಿರುದ್ಧ ಶೂನ್ಯ ಸಹಿಷ್ಣುತೆ: ಪ್ರತೀ ಹಂತದಲ್ಲೂ ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ

ಕಾನೂನು ನಿಯಮಕ್ಕೆ ಗೌರವ: ಬದ್ಧತೆ, ಹೆಮ್ಮೆಯೊಂದಿಗೆ ದೇಶದ ಕಾನೂನು ಹಾಗೂ ನಿಯಮಕ್ಕೆ ಗೌರವ ಸಲ್ಲಿಕೆ

Advertisement

ದಾಸ್ಯ ಮನೋಭಾವಕ್ಕೆ ಕೊನೆ: ದಾಸ್ಯ ಮನೋಭಾವದಿಂದ ಹೊರಬಂದು ದೇಶಕ್ಕಾಗಿ ಶ್ರಮಿಸುವ ದೃಢ ಸಂಕಲ್ಪ

ಕುಟುಂಬ ರಾಜಕಾರಣ ಅಳಿಯಲಿ: ಪರಿವಾರ ವಾದದಿಂದ ಭಾರತದ ರಾಜಕಾರಣವನ್ನು ಮುಕ್ತಗೊಳಿಸುವ ಗುರಿ

ಸಂವಿಧಾನದ ಸದ್ಬಳಕೆ: ದೇಶದ ಸಂವಿಧಾನವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳದಿರುವ ಸಂಕಲ್ಪ

ಮೀಸಲು ರಕ್ಷಣೆ: ಅಸ್ತಿತ್ವದಲ್ಲಿರುವ ಮೀಸಲಾತಿ ಕಸಿಯದಂತೆ ಧರ್ಮ ಆಧರಿತ ಮೀಸಲು ಪ್ರಸ್ತಾವ ಧಿಕ್ಕರಿಸುವ ನಿರ್ಧಾರ

ಅಭಿವೃದ್ಧಿಯಲ್ಲಿ ಮಹಿಳೆಯರಿಗೆ ಆದ್ಯತೆ: ಮಹಿಳಾ ನೇತೃತ್ವದ ಅಭಿವೃದ್ಧಿ ಯೋಜನೆ ಗಳಿಗೆ ಒತ್ತು, ಈ ನಿಟ್ಟಿನಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿಸುವ ಸಂಕಲ್ಪ

ರಾಜ್ಯ ಕೇಂದ್ರಿತ ಅಭಿವೃದ್ಧಿ: ಪ್ರತೀರಾಜ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ದೇಶದ ಅಭಿವೃದ್ಧಿಯನ್ನು ಸಾಧಿಸಬೇಕಿದೆ

ಏಕ ಭಾರತ-ಶ್ರೇಷ್ಠ ಭಾರತ: ಭಾರತದ ಏಕತೆ, ಸಮಗ್ರತೆ, ಸಾರ್ವಭೌಮತ್ವಕ್ಕಾಗಿ ಶ್ರಮಿಸುವ ಸಂಕಲ್ಪ

Advertisement

Udayavani is now on Telegram. Click here to join our channel and stay updated with the latest news.

Next