Advertisement

ತಮಿಳುನಾಡಿನಿಂದ ಮತ್ತೆ ನೀರಿಗೆ ಬೇಡಿಕೆ 

10:38 AM Apr 01, 2017 | Team Udayavani |

ಬೆಂಗಳೂರು: ಬರದಿಂದ ರಾಜ್ಯದಲ್ಲಿ ಜಲಾಶಯಗಳೆಲ್ಲಾ ಖಾಲಿಯಾಗಿ, ಡೆಡ್‌ ಸ್ಟೋರೇಜ್‌ ನೀರನ್ನೇ ಕಾಲುವೆ ತೆಗೆದು ಜಾಕ್‌ವೆಲ್‌ಗ‌ಳಿಗೆ ಹರಿಸಿ ಕುಡಿಯಲು ಬಳಸುವಂತಹ ಸ್ಥಿತಿ ಇರುವಾಗ ಕಾವೇರಿ ನೀರು ಬಿಡುಗಡೆ ಕೋರಿ ಮನವಿ ಸಲ್ಲಿಸಲು ತಮಿಳುನಾಡು ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ನೇತೃತ್ವದ ನಿಯೋಗ ಶನಿವಾರ ರಾಜ್ಯಕ್ಕೆ ಆಗಮಿಸಲಿದೆ.

Advertisement

ವಿಧಾನಸೌಧದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ಅವರನ್ನು ಭೇಟಿ ಮಾಡಲಿರುವ ನಿಯೋಗ, ತಮಿಳುನಾಡಿಗೆ ತಕ್ಷಣ ಎರಡು ಟಿಎಂಸಿ ನೀರು ಬಿಡುಗಡೆಗೆ ಬೇಡಿಕೆ ಸಲ್ಲಿಸಲಿದೆ ಎಂದು ಹೇಳಲಾಗಿದೆ. 

ತ.ನಾಡು ನಿಯೋಗ ರಾಜ್ಯಕ್ಕೆ ಬಂದು ಮನವಿ ಸಲ್ಲಿಸಿದ ನಂತರ ಸೌಹಾರ್ದ ಸಂಬಂಧವಾಗಿ ಸ್ವಲ್ಪಮಟ್ಟಿನ ನೀರು ಬಿಡುಗಡೆ ಮಾಡುವುದು ಅನಿವಾರ್ಯವಾಗಬಹುದು ಎಂಬಮಾತುಗಳು ಕೇಳಿಬರುತ್ತಿವೆ.

ಆದರೆ, ಮತ್ತೂಂದು ಮೂಲಗಳ ಪ್ರಕಾರ, ನಮ್ಮ ಜಲಾಶಯಗಳಲ್ಲಿ ಡೆಡ್‌ ಸ್ಟೋರೇಜ್‌ವರೆಗೂ ತಲುಪಿರುವುದು ಸೇರಿದಂತೆ ತಮಿಳುನಾಡು ನಿಯೋಗಕ್ಕೆ ರಾಜ್ಯದ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟು ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಲಾಗುವುದು ಎಂದು ಹೇಳಲಾಗಿದೆ.

“ನೀರು ಹರಿಸೋಕೆ ಹೇಗೆ ಸಾಧ್ಯ?’
ಹಿರಿಯೂರು:
ಬರದಿಂದ ರಾಜ್ಯದ ಎಲ್ಲ ಜಲಾಶಯಗಳೂ ಖಾಲಿಯಾಗಿವೆ. ಹೀಗಿರುವಾಗ ತಮಿಳುನಾಡಿಗೆ ಪ್ರತಿ ದಿನ 2 ಸಾವಿರ ಕ್ಯೂಸೆಕ್‌ ನೀರು ಹರಿಸಲು ಹೇಗೆ ಸಾಧ್ಯ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಪ್ರಶ್ನಿಸಿದ್ದಾರೆ.

Advertisement

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ನಂದಿಹಳ್ಳಿ ಹಾಗೂ ಲಕ್ಕವ್ವನಹಳ್ಳಿ ಗ್ರಾಮಗಳಲ್ಲಿ ಒಣಗಿದ ತೆಂಗು, ಅಡಿಕೆ ತೋಟಗಳಿಗೆ ಶುಕ್ರವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾವೇರಿ ನೀರಿಗಾಗಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳು ಸುಪ್ರೀಂಕೋರ್ಟ್‌ನಲ್ಲಿ ರಿಟ್‌ ಹಾಕಿವೆ. 

ಸುಪ್ರೀಂಕೋರ್ಟ್‌ ಪ್ರತಿ ಸಲದ ವಿಚಾರಣೆಯಲ್ಲೂ ತಮಿಳುನಾಡಿಗೆ 2 ಸಾವಿರ ಕ್ಯುಸೆಕ್‌ ನೀರು ಹರಿಸುವಂತೆ ಸೂಚಿಸುತ್ತದೆ. ಆದರೆ, ಕಾವೇರಿ, ಹೇಮಾವತಿ, ಹಾರಂಗಿ ಮೊದಲಾದ ನದಿಗಳು ಬರಿದಾಗಿವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next