Advertisement
ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ 6 ನಕ್ಸಲರು ಶರಣಾದ ಬೆನ್ನಲ್ಲೇ ಸುದ್ದಿಗಾರರ ಜೊತೆಗೆ ಈ ಕುರಿತು ಮಾತನಾಡಿ, ಶರಣಾಗಿರುವ ನಕ್ಸಲರ ಎಲ್ಲ ಒತ್ತಾಯ ಗಳನ್ನೂ ಸಹ ಸಹಾನುಭೂತಿಯಿಂದ ಸರ್ಕಾರ ಪರಿಗಣಿಸುತ್ತದೆ. ಶರಣಾದ 6 ಮಂದಿ ನಕ್ಸಲರ ಪೈಕಿ ಕೇರಳ ಹಾಗೂ ತಮಿಳುನಾಡಿನ ಇಬ್ಬರು ಸೇರಿದ್ದು, ಈ ಬಗ್ಗೆ ತಮಿಳುನಾಡು ಹಾಗೂ ಕೇರಳ ಮುಖ್ಯಮಂತ್ರಿಗಳ ಜೊತೆಗೂ ಈ ವಿಚಾರ ಚರ್ಚಿಸಲಾಗುವುದು.
Related Articles
ತ್ವರಿತ ನ್ಯಾಯಾಲಯ ಮಾಡಿ ಅವರ ಮೇಲೆ ಇರುವ ಮೊಕದ್ದಮೆ ಇತ್ಯರ್ಥವಾಗುವ ರೀತಿಯಲ್ಲಿ ಮಾಡುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ. ಶರಣಾಗಿರುವ ನಕ್ಸಲರ ಎಲ್ಲ ಒತ್ತಾಯಗಳನ್ನೂ ಸಹ ಸಹಾನುಭೂತಿಯಿಂದ ಸರಕಾರ ಪರಿಗಣಿಸುತ್ತದೆ. 6 ಮಂದಿ ನಕ್ಸಲರ ಪೈಕಿ ಕೇರಳ ಹಾಗೂ ತಮಿಳುನಾಡಿನ ಇಬ್ಬರು ಸೇರಿದ್ದು, ಈ ಬಗ್ಗೆ ತಮಿಳುನಾಡು ಹಾಗೂ ಕೇರಳ ಮುಖ್ಯಮಂತ್ರಿಗಳ ಜತೆಗೂ ಈ ವಿಚಾರ ಚರ್ಚಿಸಲಾಗುವುದು ಎಂದರು.
Advertisement
ನಕ್ಸಲರು ಶರಣಾಗುವುದರ ಮೂಲಕ ಕರ್ನಾ ಟಕವು ಕಾಂಗ್ರೆಸ್ ಸರ್ಕಾ ರದ ಆಡಳಿತದಲ್ಲಿ ನಕ್ಸಲ್ ಮುಕ್ತವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿ ದರು. ಸರ್ಕಾರ, ಪೊಲೀಸ್ ಅಧಿಕಾರಿಗಳ ಹಾಗೂ ಸರ್ಕಾರ ರಚಿಸಿದ್ದ ಶಾಂತಿ ಪಾಲನ ಸಮಿತಿ ಫಲದಿಂದ ಈ ಕಾರ್ಯ ಯಶಸ್ವಿಯಾಗಿದೆ. ಅವರು ಒಂದಷ್ಟು ಬೇಡಿಕೆಗಳನ್ನು ಮುಂದಿಟ್ಟು ಶರಣಾಗಿರುವುದು ಸಂತಸ ತಂದಿದೆ. ಎಲ್ಲರ ಪರಿಶ್ರಮದಿಂದ ಅವರೆಲ್ಲಾ ಮುಂದೆ ಬಂದು ಶರಣಾಗಿದ್ದಾರೆ. ನಾವು ಶರಣಾದ ನಕ್ಸಲರ ಎಲ್ಲ ಬೇಡಿಕೆಗಳನ್ನು ಗೌರವಿಸುತ್ತೇವೆ ಎಂದರು. ವಿಕ್ರಂ ಎನ್ಕೌಂಟರ್ ತನಿಖೆ ಮಾಡಿ
ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ವಿಚಾರಕ್ಕೆ ಸಂಬಂಧಿ ಸಿದಂತೆ ಕೆಲವೊಂದು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.
– ವಿಕ್ರಮ್ ಗೌಡ ಅವರನ್ನು ಮನೆಯವರ ಸಹಾಯದಿಂದ ಮನೆ ಒಳಗೆ ಕೈಗೆಟಕುವ ಅಂತರದಲ್ಲಿ ಎಎನ್ಎಫ್ ಪಡೆ ಕ್ರೂರ ವಾಗಿ ಗುಂಡಿನ ಸುರಿಮಳೆಗರೆದು ಹತ್ಯೆಗೈದಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. – 3 ರಾಜ್ಯಗಳ ಜೈಲಿನಲ್ಲಿರುವ ನಮ್ಮ ಎಲ್ಲ ಕಾಮ್ರೆಡ್ಗಳ ಕೇಸುಗಳನ್ನು ಶೀಘ್ರವಾಗಿ ಮುಗಿಸಬೇಕು. ಅವರನ್ನು ಬಿಡುಗಡೆಗೊಳಿಸಬೇಕು. – ಆದಿವಾಸಿ ಮುಗ್ಧ ಮಹಿಳೆಯರಾದ ಶೋಭಾ, ಕನ್ಯಾಕುಮಾರಿ, ಸಾವಿತ್ರಿ, ಶ್ರೀಮತಿ ಇವರ ಮೇಲಿನ ಕೇಸುಗಳನ್ನು ಶೀಘ್ರವೇ ಮುಗಿಸಿ ಅವರಿಗೂ ನಕ್ಸಲ್ ಪ್ಯಾಕೇಜಿನಡಿಯಲ್ಲಿ ಪುನರ್ವಸತಿ ಮತ್ತು ಸಹಾಯಧನವನ್ನು ಕಲ್ಪಿಸಬೇಕು. – ಮುಖ್ಯ ವಾಹಿನಿಗೆ ಬಂದು 15 ದಿನಗಳೊಳಗೆ ನಮ್ಮ ಎಲ್ಲ ಕಾಮ್ರೇಡ್ಗಳ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ರೀತಿಯ ಚಿಕಿತ್ಸೆ ಕೊಡಿಸಬೇಕು.
6 ನಕ್ಸಲರು ಶರಣಾಗತರಾಗಿದ್ದು ಕಿಗ್ಗಾ ಮೂಲದ ರವೀಂದ್ರ ಮಾತ್ರ ಇದರಿಂದ ಹೊರಗುಳಿದಿ ದ್ದಾನೆ. ಈತನನ್ನು ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಕಮಿಟಿ ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗದ ಕಾರಣ ಬುಧವಾರ ಶರಣಾಗಬೇಕಿದ್ದ ಈತ ಹೊರಗುಳಿದಿದ್ದಾನೆ. ಈತನು ಕೂಡ ಶೀಘ್ರದಲ್ಲಿಯೇ ಮುಖ್ಯವಾಹಿನಿಗೆ ಮರಳಲಿದ್ದಾ ನೆಂದು ತಿಳಿದು ಬಂದಿದ್ದು ಈ ಸಂಬಂಧ ಆತನನ್ನು ಸಂಪರ್ಕಿಸುವ ಕಾರ್ಯ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ. ಯಾರ ಮೇಲೆ ಎಷ್ಟು ಕೇಸ್? ಮುಂಡಗಾರು ಲತಾ - 85 ಸುಂದರಿ ಕುತ್ಲೂರು – 71 ವನಜಾಕ್ಷಿ ಬಾಳೆಹೊಳೆ – 29 ಮಾರೆಪ್ಪ ಅರೋಲಿ (ಜಯಣ್ಣ) – 50 ತಮಿಳುನಾಡಿನ ವಸಂತ – 8 ಕೇರಳದ ಜಿಷಾ- 17
ನಾನು ಮುಖ್ಯವಾಹಿನಿಗೆ ಬರಲು ನಾಗರಿಕ ಹಕ್ಕು ವೇದಿಕೆ, ಪುನರ್ವಸತಿ ಒಕ್ಕೂಟದ ಶ್ರಮ ಕಾರಣ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಒಪ್ಪಿ, ಸಿಎಂ ಜತೆ ಚರ್ಚೆಗೆ ಮುಂದಾಗಿರುವುದಕ್ಕೆ ನಾವು ಶರಣಾಗತಿ ಆಗುತ್ತಿದ್ದೇವೆ. ಪುನರ್ವಸತಿ ಪ್ಯಾಕೇಜ್ನ ಅರ್ಧ ಹಣವನ್ನು ಹುಟ್ಟೂರಿನ ಶಾಲೆಗೆ ವರ್ಗಾಯಿಸಬೇಕು.
– ಮಾರೆಪ್ಪ ಆರೋಲಿ, ಶರಣಾದ ನಕ್ಸಲ್ ಕೇಸು ಶೀಘ್ರ ಇತ್ಯರ್ಥಗೊಳಿಸಿ
ಮುಂಡಗಾರು ಲತಾ ಮುಖ್ಯವಾಹಿನಿಗೆ ಬರುತ್ತಿರುವುದು ಸಂತೋಷ ತಂದಿದೆ. ಆಕೆಯ ಮೇಲಿರುವ ಕೇಸುಗಳನ್ನು ಸರ್ಕಾರ ತಕ್ಷಣ ಇತ್ಯರ್ಥಗೊಳಿಸಬೇಕು. ಬೇಡಿಕೆಗಳನ್ನು ಈಡೇರಿಸಬೇಕು. ಮುಂದಿನ ದಿನಗಳನ್ನು ಲತಾ ಒಟ್ಟಿಗೆ ಇಡೀ ಕುಟುಂಬ ಸಂತೋಷದಿಂದ ಕಳೆಯುತ್ತೇವೆ.
ಶೇಷೇಗೌಡ, ಲತಾ ಹಿರಿಯ ಸಹೋದರ ನಾವು ಮುಖವನ್ನೇ ನೋಡಿಲ್ಲ
ಕೆಲಸದ ಸಂದರ್ಶನಕ್ಕಾಗಿ ಕೊಯ ಮತ್ತೂರಿಗೆ ಹೋಗಿ ಬರುವುದಾಗಿ ತಿಳಿಸಿ ಹೋದವನು ಮನೆಗೆ ಮರಳಲಿಲ್ಲ. ಹೋರಾಟಕ್ಕೆ ಇಳಿದಿದ್ದಾನೆಂದು ತಿಳಿಯಿತು. ಅಲ್ಲಿಂದ ಇಲ್ಲಿಯವರೆಗೂ ನಾವು ಅವನ ಮುಖ ನೋಡಿಲ್ಲ. ಮುಖ್ಯವಾಹಿನಿಗೆ ಬರುತ್ತಾನೆಂದು ತಿಳಿದು ತಮಿಳುನಾಡಿನಿಂದ ಬಂದಿದ್ದೇವೆ.
ತಮಿಳ್ ಸೆಲ್ವಿ, ಕೆ.ವಸಂತ ತಾಯಿ ಸಂವಿಧಾನ ಬದ್ಧ ಹೋರಾಟ
ನಾನೇನು ನಕ್ಸಲ್ ಹೋರಾಟದಲ್ಲಿ ಭಾಗಿಯಾಗಿಲ್ಲ. ಸಂವಿಧಾನ ಬದ್ಧವಾದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಶಸ್ತ್ರ ಹೋರಾಟ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು ಖುಷಿ ತಂದಿದೆ. ಸಂವಿಧಾನ ಬದ್ಧ ಹೋರಾಟಗಳನ್ನು ಮಾಡೋಣ. -ಯಶೋಧಾ, ವನಜಾಕ್ಷಿ ಸಂಬಂಧಿ ಸಹೋದರಿ ಜೈಲಿಂದ ಶೀಘ್ರ ಹೊರಬರಲಿ
ನಕ್ಸಲರ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಆ ಭರವಸೆಗಳನ್ನು ಈಡೇರಿಸಬೇಕು. ಅವರ ಮೇಲಿರುವ ಕೇಸುಗಳನ್ನು ಹಿಂಪಡೆದು ಜೈಲಿನಿಂದ ಶೀಘ್ರವೇ ಹೊರಬರುವಂತೆ ನೋಡಿಕೊಳ್ಳಬೇಕು. – ಅಂಬಣ್ಣ ಅರೋಲಿ, ಮಾರೆಪ್ಪ ಆರೋಲಿ(ಜಯಣ್ಣ) ಸಹೋದರ ಕೊನೇ ಕ್ಷಣ ಬೆಂಗಳೂರಿಗೆ
ಚಿಕ್ಕಮಗಳೂರು: ನಕ್ಸಲರು ಶರಣಾಗುವ ಪ್ರಕ್ರಿಯೆ ಎಲ್ಲ ಸಿದ್ಧತೆಗಳ ನಡುವೆಯೂ ಕೊನೆ ಕ್ಷಣದಲ್ಲಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗುವ ನಿಟ್ಟಿನಲ್ಲಿ ಬುಧವಾರ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ ದಿಢೀರ್ ಬೆಳವಣಿಗೆ ಹಿನ್ನೆಲೆಯಲ್ಲಿ ಅವರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿಗೆ ಕರೆದೊಯ್ಯಲಾಯಿತು. ಬುಧವಾರ ನಕ್ಸಲರು ಮೊದಲು ಪ್ರವಾಸಿಮಂದಿರಕ್ಕೆ ಆಗಮಿಸಿ ನಂತರ ಜಿಲ್ಲಾಡಳಿತದ ಮುಂದೆ ಶರಣಾಗಲಿ ದ್ದಾರೆ ಎಂದು ತಿಳಿದ ಪೊಲೀಸರು ಪ್ರವಾಸಿಮಂದಿರ ಹಾಗೂ ಜಿಲ್ಲಾ ಧಿಕಾರಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಿದ್ದರು. ಮಲೆನಾಡಿನ ಅರಣ್ಯ ಪ್ರದೇಶದಿಂದ ಕಮಿಟಿ ಸದಸ್ಯರ ಜತೆ ಪೊಲೀಸ್ ಭದ್ರತೆಯಲ್ಲಿ ನಕ್ಸಲರು ಚಿಕ್ಕಮಗಳೂರು ನಗರ ಪ್ರವೇಶಿಸಿದ್ದರು. ನಕ್ಸಲರ ಸಂಬಂಧಿಕರು, ಸಂಘಟಕರು, ಮಾಜಿ ನಕ್ಸಲರು ಅನೇಕರು ಪ್ರವಾಸಿ ಮಂದಿರದಲ್ಲಿ ಜಮಾವಣೆ ಗೊಂಡು ಕಾಯುತ್ತಿದ್ದರು. ಈ ವೇಳೆ ದಿಢೀರ್ ಬೆಳವಣಿಗೆ ನಡೆಯಿತು. ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡ ಕೆ.ಎಲ್.ಅಶೋಕ್, ಕೊನೆಯ ಕ್ಷಣದ ಬದಲಾವಣೆ ಯಿಂದ ಈ ಆರು ಮಂದಿ ಬೆಂಗಳೂರಿನಲ್ಲಿ ಸಿಎಂ ಸಮ್ಮುಖದಲ್ಲೇ ಶರಣಾಗಲಿದ್ದಾರೆ ಎಂದು ಘೋಷಿಸಿದರು.