ಕಾಬೂಲ್: ಅಫ್ಘಾನಿಸ್ಥಾನದ ಹೊಸ ಆಡಳಿತಗಾರರ ಕಟ್ಟುನಿಟ್ಟಿನ ನಾಯಕತ್ವವು ಆಶ್ಚರ್ಯಕರ ನಿರ್ಧಾರದಲ್ಲಿ 6 ನೇ ತರಗತಿಗಿಂತ ಹೆಚ್ಚಿನ ಹುಡುಗಿಯರಿಗೆ ಶಿಕ್ಷಣ ಸಂಸ್ಥೆಗಳನ್ನು ತೆರೆಯದಿರಲು ನಿರ್ಧರಿಸಿದೆ ಎಂದು ಬುಧವಾರ ತಾಲಿಬಾನ್ ಹೇಳಿದೆ.
ಅಫ್ಘಾನಿಸ್ಥಾನದ ಹೊಸ ಶಾಲಾ ವರ್ಷದ ಮೊದಲ ದಿನದಂದು ತಾಲಿಬಾನ್ ನ ಶಿಕ್ಷಣ ಸಚಿವಾಲಯದ ಸಭೆಯ ಬಳಿಕ ತಾಲಿಬಾನ್ ಅಧಿಕಾರಿಯೊಬ್ಬರು ಈ ವಿಚಾರ ಹೇಳಿದ್ದಾರೆ.
ಆಫ್ಘಾನ್ ನ ಹೆಚ್ಚಿನ ಹೆಣ್ಣುಮಕ್ಕಳು ಶಾಲೆಗಳಿಗೆ ಮರಳಲು ಸಿದ್ಧತೆ ನಡೆಸಿದ್ದ ವೇಳೆ ಈ ನಿರ್ಧಾರ ಪ್ರಕಟಿಸಿದ್ದು, ಬುಡಕಟ್ಟು ಪ್ರಾಂತ್ಯಗಳು, ಅತೀ ಹಿಂದುಳಿದ ಪ್ರದೇಶದ ವಿದ್ಯಾರ್ಥಿನಿಯರು ಶಾಲೆಗಳಿಗೆ ಮರಳಲು ಹಿಂದೇಟು ಹಾಕುತ್ತಿದ್ದಾರೆ.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಇತ್ತೀಚಿನ ತಡೆ ಅಂತರರಾಷ್ಟ್ರೀಯ ಸಮುದಾಯದಿಂದ ವ್ಯಾಪಕ ಖಂಡನೆಯನ್ನು ಪಡೆಯುವುದು ಖಚಿತವಾಗಿದೆ, ತಾಲಿಬಾನ್ ನಾಯಕರನ್ನು ಶಾಲೆಗಳನ್ನು ತೆರೆಯಲು ಮತ್ತು ಮಹಿಳೆಯರಿಗೆ ಸಾರ್ವಜನಿಕ ಸ್ಥಳದ ಹಕ್ಕನ್ನು ನೀಡುವಂತೆ ವಿಶ್ವ ಸಮುದಾಯ ಒತ್ತಾಯಿಸುತ್ತಿದೆ.
ಹುಡುಗಿಯರು ಶಾಲೆಗೆ ಮರಳಲು ಅನುಮತಿಸಲು ನಾಯಕತ್ವವು ನಿರ್ಧರಿಸಿಲ್ಲ. ಆದರೆ ನ್ ನೇ ತರಗತಿಯ ಬಳಿಕ ಹೆಣ್ಣುಮಕ್ಕಳಿಗೆ ಯಾವ ರೀತಿಯಲ್ಲಿ ಶಿಕ್ಷಣ ನೀಡಬಹುದು ಎಂದು ನಿರ್ಧರಿಸಲು ಪ್ರಯತ್ನಿಸುತ್ತಿದೆ ಎಂದು ತಾಲಿಬಾನ್ ಪ್ರತಿನಿಧಿ ವಹೀದುಲ್ಲಾ ಹಶ್ಮಿ ಹೇಳಿದರು.
ನಗರ ಕೇಂದ್ರಗಳು ಹೆಚ್ಚಾಗಿ ಬಾಲಕಿಯರ ಶಿಕ್ಷಣವನ್ನು ಬೆಂಬಲಿಸುತ್ತವೆ ಎಂದು ಅವರು ಒಪ್ಪಿಕೊಂಡರು, ಅಫ್ಘಾನ್ ನ ಹೆಚ್ಚಿನ ಗ್ರಾಮೀಣ ಪ್ರದೇಶಗಳು ವಿಶೇಷವಾಗಿ ಬುಡಕಟ್ಟು ಪಶ್ತೂನ್ ಪ್ರದೇಶಗಳಲ್ಲಿ ಶಿಕ್ಷಣವನ್ನು ವಿರೋಧಿಸುತ್ತಿದೆ ಎಂದು ಅವರು ಹೇಳಿದರು.
ಕಳೆದ ಅಗಸ್ಟ್ ನಲ್ಲಿ ತಾಲಿಬಾನ್ ಆಡಳಿತ ವಶಕ್ಕೆ ಪಡೆದಾಗಲೇ ಹೆಣ್ಣು ಮಕ್ಕಳ ಶಿಕ್ಷಣದ ಮೇಲೆ ಹಲವು ನಿರ್ಬಂಧಗಳನ್ನು ಹೇಳಿತ್ತು. ಹೆಚ್ಚಿನ ಶಿಕ್ಷಣ ಮಾಡಬೇಕೆಂದಿದ್ದ ಹುಡುಗಿಯರಿಗೆ ಈ ನಿರ್ಧಾರ ದಿಕ್ಕು ತೋಚದಂತೆ ಮಾಡಿದೆ. ಅಂತರ್ ರಾಷ್ಟ್ರೀಯ ಮಟ್ಟದಲ್ಲೂ ಉಗ್ರ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.