Advertisement

FIR 6to6 movie: ಆ್ಯಕ್ಷನ್‌ ಚಿತ್ರದಲ್ಲಿ ವಿಜಯ ರಾಘವೇಂದ್ರ

03:00 PM Dec 23, 2024 | Team Udayavani |

ವಿಜಯ ರಾಘವೇಂದ್ರ ನಟನೆಯ ಸಿನಿಮಾವೊಂದು ಸದ್ದಿಲ್ಲದೇ ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಎಫ್ ಐಆರ್‌ 6 ಟು 6′. ಇತ್ತೀಚೆಗೆ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಭಾಗ್ಯ ರಮೇಶ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೆ.ವಿ.ರಮಣ ರಾಜ್‌ ಅವರು ಈ ಚಿತ್ರದ ನಿರ್ದೇಶಕರು.

Advertisement

ಚಿತ್ರದ ಬಗ್ಗೆ ಮಾತನಾಡುವ ನಾಯಕ ವಿಜಯ ರಾಘವೇಂದ್ರ,ಎಫ್ಐಆರ್‌ ಭಾಗ್ಯ ರಮೇಶ್‌, ರಮಣರಾಜ್‌ ಅವರ ಕನಸು. ಇದೊಂದು ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ. ಇಡೀ ಚಿತ್ರವನ್ನು ನೈಟ್‌ ಎಫೆಕ್ಟ್‌ನಲ್ಲೇ ಶೂಟ್‌ ಮಾಡಿದ್ದೇವೆ. ಸುಮಾರು ರಾತ್ರಿ ಈ ಸಿನಿಮಾಗಾಗಿ ಕಷ್ಟಪಟ್ಟಿದ್ದೇವೆ. ನಿರ್ದೇ ಶಕರು ತುಂಬಾ ಎಫ‌ರ್ಟ್‌ ಹಾಕಿದ್ದಾರೆ. ಕಷ್ಟಪಟ್ಟು ಇಷ್ಟಪಟ್ಟು ಈ ಸಿನಿಮಾ ಮಾಡಿದ್ದೇವೆ. ಈ ಕಥೆಯಲ್ಲಿ ಪ್ರಮುಖ ಆಗಿರುವುದೇ ಆ್ಯಕ್ಷನ್‌. ಒಮ್ಮೊಮ್ಮೆ ಬೆಳಗಿನ ಜಾವ ನಾಲ್ಕರವರೆಗೆ ಶೂಟ್‌ ಮಾಡಿದ್ದೇವೆ. ಥ್ರಿಲ್ಲರ್‌ ಮಂಜು ಅವರ ಜೊತೆ ಆ್ಯಕ್ಷನ್‌ ಮಾಡುವುದು ತುಂಬಾ ಸುಲಭ. ಒಳ್ಳೆಯ ಅನುಭವ ಸಿಗುತ್ತೆ ಎಂದು ಹೇಳಿದರು.

ಚಿತ್ರದ ನಿರ್ಮಾಪಕಿ ಭಾಗ್ಯ ರಮೇಶ್‌ ಮಾತನಾಡಿ, ನಾವು ಈ ಹಿಂದೆ ಪಟ್ಟಾಭಿಷೇಕ ಎಂಬ ಚಿತ್ರ ಮಾಡಿದ್ದೆವು. ರಮಣ ರಾಜ್‌ ಅವರು ತಂದ ಈ ಕಥೆ ತುಂಬಾ ಇಂಟರೆಸ್ಟಿಂಗ್‌ ಆಗಿತ್ತು. ಹಾಗಾಗಿ ಈ ಚಿತ್ರ ನಿರ್ಮಾಣಕ್ಕೆ ಮುಂದಾದೆವು. ವಿಜಯ ರಾಘವೇಂದ್ರ ತುಂಬಾ ಚೆನ್ನಾಗಿ ಆಭಿನಯಿಸಿದ್ದಾರೆ ಎಂದರು.

ಚಿತ್ರದಲ್ಲಿ ನಟಿಸಿ ರುವ ಸಿರಿರಾಜ್‌ ಮಾತನಾಡಿ, ಭಯದಲ್ಲೇ ಬದುಕುವ ಹುಡುಗಿಯಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರ ತುಂಬಾ ಚೆನ್ನಾಗಿದೆ ಎಂದರು. ಉಳಿದಿಬ್ಬರು ನಾಯಕಿಯರಾದ ಸ್ವಾತಿ ಹಾಗೂ ಯಶ ಶೆಟ್ಟಿ ತಮ್ಮ ಪಾತ್ರದ ಬಗ್ಗೆ ವಿವರಿಸಿದರು.

ಯುವಕನೊಬ್ಬ ಒಂದು ಘಟನೆಯಲ್ಲಿ ಸಿಕ್ಕಿ ಹಾಕಿಕೊಂಡು ನಂತರ ಆ ಸಂದರ್ಭವನ್ನು ಹೇಗೆ ಎದುರಿಸುತ್ತಾನೆ ಅನ್ನೋದನ್ನು ಸಂಜೆ ಆರರಿಂದ ಬೆಳಗಿನ ಜಾವ ಆರರವರೆಗೆ ನಡೆಯುವ ಕಥೆಯ ಮೂಲಕ ಥ್ರಿಲ್ಲಿಂಗ್‌ ಆಗಿ ಹೇಳಲು ಪ್ರಯತ್ನಿಸಿದ್ದೇವೆ. ವಿಜಯ ರಾಘವೇಂದ್ರ ಅವರ ಜತೆ ಕೆಲಸ ಮಾಡಿದ್ದು ಒಳ್ಳೇ ಅನುಭವ. 35 ದಿನ ಪೂರ್ತಿ ರಾತ್ರಿ ವೇಳೆಯಲ್ಲೇ ಶೂಟ್‌ ಮಾಡಿದ್ದೇವೆ ಎನ್ನುವುದು ನಿರ್ದೇಶಕ ರಮಣ ಮಾತು

Advertisement
Advertisement

Udayavani is now on Telegram. Click here to join our channel and stay updated with the latest news.

Next