Advertisement

ಈಜು: ಕ್ಲಾಕ್‌ ಕೈಕೊಟ್ಟು ವಿಶ್ವದಾಖಲೆಯೇ ಕೈತಪ್ಪಿತು!

07:00 AM Aug 07, 2018 | Team Udayavani |

ಗ್ಲಾಸೊY:ಇಲ್ಲಿ ನಡೆಯುತ್ತಿರುವ ಯೂರೋಪಿಯನ್‌ ಚಾಂಪಿಯನ್‌ಶಿಪ್‌ನ ಈಜು ಸ್ಪರ್ಧೆಯಲ್ಲಿ ಎಡವಟ್ಟೊಂದು ಸಂಭವಸಿದೆ. ಇಂಗ್ಲೆಂಡ್‌ನ‌ ಖ್ಯಾತ ಈಜುಪಟು ಆ್ಯಡಂ ಪೀಟಿ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ವಿಶ್ವದಾಖಲೆ ಸ್ಥಾಪಿಸಿದ್ದರು. ಈ ವೇಳೆ ಸಮಯ ಸಾಧನ (ಕ್ಲಾಕ್‌) ಕೈಕೊಟ್ಟು ಸಮಯವನ್ನು ತಪ್ಪಾಗಿ ತೋರಿಸಿದೆ.

Advertisement

ಆರಂಭದಲ್ಲಿ 57 ಸೆಕೆಂಡ್‌ಗಳೆಂದು ತೋರಿಸಿದ್ದರೂ ಅದನ್ನು ತಿದ್ದಿದ ಸಂಘಟಕರು 57.10 ಸೆಕೆಂಡ್‌ಗಳಿಗೆ ಏರಿಸಿದ್ದಾರೆ. ಇದು 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ನೂತನ ವಿಶ್ವದಾಖಲೆಯಾಗಿದೆ. ಆದರೆ ಇದಕ್ಕೆ ಮಾನ್ಯತೆ ನೀಡಲು ಫಿನಾ ಒಪ್ಪಿಲ್ಲ. ಇದು ಗ್ಲಾಸೊY ಸಂಘಟಕರನ್ನು ಮುಜುಗರಕ್ಕೆ ಸಿಕ್ಕಿಸಿದೆ. ಗಮನಾರ್ಹ ಸಂಗತಿಯೆಂದರೆ, 100 ಮೀ. ವಿಭಾಗದಲ್ಲಿ ಹಿಂದಿನ ವಿಶ್ವದಾಖಲೆಯೂ ಆ್ಯಡಂ ಹೆಸರಿನಲ್ಲೇ ಇದೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಇದನ್ನು ಸಾಧಿಸಿದ್ದರು. ಆಗಿನ ಸಮಯ 57.13 ಸೆಕೆಂಡ್‌.

Advertisement

Udayavani is now on Telegram. Click here to join our channel and stay updated with the latest news.

Next